ಬಸ್ ಚಾಲಕನ ಸಮಯ ಪ್ರಜ್ಞೆ; ರೈಲ್ವೆ ಗೇಟ್​ನಲ್ಲಿ ತಪ್ಪಿದ ಭಾರೀ ಅನಾಹುತ

ಇದು ರೇಲ್ವೆ ಗೇಟಿನ ಗೇಟ್‌ಮ್ಯಾನ್ ಅಜಾರುಕತೆಯೋ ಅಥವಾ ರೈಲಿನ ಲೋಕೋ ಫೈಲಟ್ ಅಜಾರುಕತೆಯೋ ಗೊತ್ತಿಲ್ಲ. ಆದರೆ ರೈಲಿನ ಎಂಜಿನ್ ಬಸ್ಸಿಗೆ ಡಿಕ್ಕಿ ಹೊಡೆದಿದ್ದರೆ ಬಸ್ಸಿನಲ್ಲಿದ್ದ40 ಕ್ಕೂ ಹೆಚ್ಚುನ ಜನರ ಜೀವ ಹೋಗುತ್ತಿತ್ತು.

G Hareeshkumar | news18
Updated:January 11, 2019, 12:53 PM IST
ಬಸ್ ಚಾಲಕನ ಸಮಯ ಪ್ರಜ್ಞೆ; ರೈಲ್ವೆ ಗೇಟ್​ನಲ್ಲಿ ತಪ್ಪಿದ ಭಾರೀ ಅನಾಹುತ
ಸಾಂದರ್ಭಿಕ ಚಿತ್ರ
G Hareeshkumar | news18
Updated: January 11, 2019, 12:53 PM IST
- ಮಂಜುನಾಥ್ ಯಡಳ್ಳಿ

ಧಾರವಾಡ ( ಜ.11) :  ಸರ್ಕಾರಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಧಾರವಾಡದ ಹೊರವಲಯದ ಶ್ರೀನಗರ ರೇಲ್ವೆ ಗೇಟಿನಲ್ಲಿ ನಡೆದಿದೆ.

ಧಾರವಾಡದಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊರಟಿದ್ದ ಬಸ್​  ಶ್ರೀನಗರ ಬಳಿ ಗೇಟು ತೆರೆದೇ ಇದ್ದರೂ ಯಾವುದೇ ಸೂಚನೆ  ಏಕಾಏಕಿ ರೈಲಿನ ಎಂಜಿನ್ ಬಂದಿದೆ. ಇದನ್ನು ಗಮನಿಸಿದ ಬಸ್‌ ಚಾಲಕ ತಕ್ಷಣ ಎಸ್​ಕ್ಯುಲೇಟರ್ ಮೇಲಿದ್ದ ಕಾಲನ್ನು ಇನ್ನಷ್ಟು ಜೋರಾಗಿ ಒತ್ತಿ, ಕ್ಷಣ​ಮಾ​ತ್ರ​ದಲ್ಲೇ ಬಸ್​ನ್ನು ರೇಲ್ವೆ ಗೇಟ್‌​ನಿಂದ ದಾಟಿ​​ ಬಸ್ಸಿ​ನ​ಲ್ಲಿದ್ದವರ ಪ್ರಾಣ ಉಳಿಸಿದ್ದಾನೆ.

ಇದನ್ನೂ ಓದಿ:  ದೇಶದಲ್ಲಿ ಮಾದರಿಯಾಯ್ತು ಧಾರವಾಡದ ಮುಗದ ರೈಲ್ವೆ ನಿಲ್ದಾಣ

ಇದು ರೇಲ್ವೆ ಗೇಟಿನ ಗೇಟ್‌ಮ್ಯಾನ್ ಅಜಾರುಕತೆಯೋ ಅಥವಾ ರೈಲಿನ ಲೋಕೋ ಫೈಲಟ್ ಅಜಾರುಕತೆಯೋ ಗೊತ್ತಿಲ್ಲ. ಆದರೆ ರೈಲಿನ ಎಂಜಿನ್ ಬಸ್ಸಿಗೆ ಡಿಕ್ಕಿ ಹೊಡೆದಿದ್ದರೆ ಬಸ್ಸಿನಲ್ಲಿದ್ದ40 ಕ್ಕೂ ಹೆಚ್ಚುನ ಜನರ ಜೀವ ಹೋಗುತ್ತಿತ್ತು. 

ಈ ರೈಲು ಸಂಚಾರದ ಬಗ್ಗೆ ರೈಲ್ವೆಯ ಲೋಕೋ​ಪೈ​ಲ​ಟ್‌ ಹಾಗೂ ನಿಲ್ದಾಣದ ಸಿಬ್ಬಂದಿಗಳು ಶ್ರೀನಗರದ ರೈಲ್ವೆ ಗೇಟ್‌ಮನ್‌ಗೆ ಯಾವುದೇ ಸಿಗ್ನಲ್‌ ನೀಡಿರಲಿಲ್ಲ ಎನ್ನಲಾಗಿದೆ. ಇದೇ ಈ ಅವಾಂತರಕ್ಕೆ ಕಾರಣ ಎಂದು ತಿಳಿದು ಬಂದಿದೆ. ಬಸ್ ಚಾಲಕ ಶಬ್ಬೀರ್ ಅವರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಇದನ್ನು ಓದಿ :  ಬಸ್​ ಚಾಲಕನ ಸಮಯ ಪ್ರಜ್ಞೆ; ತಪ್ಪಿದ ಅನಾಹುತ
Loading...

ಸಮಯಪ್ರಜ್ಞೆ ಮೆರೆದು 40 ಜನರ ಪ್ರಾಣ ರಕ್ಷಿಸಿದ ಬಸ್‌ ಚಾಲಕ ಶಬ್ಬೀರ್‌ ಅವ​ರನ್ನು ಕರ್ನಾಟಕ ವಿಶ್ವವಿದ್ಯಾಲಯದ ಸಂಶೋ​ಧನಾ ವಿದ್ಯಾ​ರ್ಥಿ​ಗಳ ಸನ್ಮಾ​ನಿ​ಸಿದರು. ಇನ್ನು ಜನರ ಜೀವ ಉಳಿಸಿ ಬಸ್ ಚಾಲಕ ಕೂಡಾ ಇದ ನಮ್ಮ ಪುಣ್ಯ, ಟ್ರೆನ್ ನೋಡಿದ ತಕ್ಷಣ ಬಸ್ ಸ್ಪಿಡ್ ಮಾಡಿದ್ದೇ ಜನರು ಉಳಿಯಲು ಕಾರಣ ಎಂದು ಹೇಳಿದ್ದಾನೆ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ