• Home
 • »
 • News
 • »
 • state
 • »
 • Burial Grounds - ಸತ್ತ ನಂತರವೂ ಪರದಾಟ; ಸಾವಿರಾರು ಹಳ್ಳಿಗಳಲ್ಲಿ ಇಲ್ಲ ಸ್ಮಶಾನ

Burial Grounds - ಸತ್ತ ನಂತರವೂ ಪರದಾಟ; ಸಾವಿರಾರು ಹಳ್ಳಿಗಳಲ್ಲಿ ಇಲ್ಲ ಸ್ಮಶಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಶವ ಹೂಳಲು ಜಾಗವಿಲ್ಲದೇ ಅನೇಕರು ರಸ್ತೆ ಬದಿಯಲ್ಲಿ ಶವ ಹೂತಿಟ್ಟು ಹೋಗುತ್ತಿದ್ದಾರೆ. ಇನ್ನೂ ಕೆಲವರು ಶವವನ್ನು ವೈದ್ಯಕೀಯ ಕಾಲೇಜುಗಳಿಗೆ ದಾನ ಮಾಡುತ್ತಿದ್ಧಾರೆ.

 • Share this:

  ಬೆಂಗಳೂರು: ರಾಜ್ಯದಲ್ಲಿ ಶವ ಹೂಳಲು ಜಮೀನು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ಜನರು ರಸ್ತೆ ಬದಿ ಇತ್ಯಾದಿ ಶವ ಹೂಳುವ ಕೆಲಸ ಸಾಕಷ್ಟು ಕಡೆ ನಡೆಯುತ್ತಿದೆ. ಹಲವು ಜನರು ತಮ್ಮ ಕುಟುಂಬದ ಮೃತ ಸದಸ್ಯರ ಶವವನ್ನು ವೈದ್ಯಕೀಯ ಕಾಲೇಜುಗಳಿಗೆ ದಾನ ಮಾಡುತ್ತಿದ್ದಾರೆ. ಸರ್ಕಾರದ ಅಂಕಿ ಅಂಶದ ಪ್ರಕಾರವೇ ರಾಜ್ಯದಲ್ಲಿ ಏಳು ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಸ್ಮಶಾನಗಳು ಇಲ್ಲವೆನ್ನಲಾಗಿದೆ.


  ರಾಜ್ಯದಲ್ಲಿರುವ ಎರಡು ಪ್ರಮುಖ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರಲ್ಲಿ ಬಹುತೇಕರು ಶವ ಹೂತು ಮಣ್ಣುಮಾಡುತ್ತಾರೆ. ಇತರ ಹಿಂದುಳಿದ ಸಮುದಾಯಗಳಲ್ಲೂ ಬಹುತೇಕರು ಶವ ಹೂಳುತ್ತಾರೆ. ಹೀಗಾಗಿ, ಭೂಮಿಯ ಕೊರತೆ ಎದುರಾಗಿದೆ. ಇನ್ನು, ಕೆಲ ಕಡೆ ಸ್ಮಶಾನಗಳಿದ್ದರೂ ಅಲ್ಲಿ ಮೇಲ್ಜಾತಿಗಳವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಹಿಂದುಳಿದ ಮತ್ತು ದಲಿತರ ಶವಗಳಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ದಲಿತ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


  ಇದನ್ನೂ ಓದಿ: ರಮೇಶ್ ಜಾರಕಿಹೊಳಿ​ ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್​; ವಿಡಿಯೋದಲ್ಲಿದ್ದ ಯುವತಿ ಮನೆಯಲ್ಲಿ ಲಕ್ಷಾಂತರ ರೂ. ಪತ್ತೆ


  ಸರ್ಕಾರ ಕೂಡ ಸ್ಮಶಾನಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದೆ. ಗ್ರಾಮಗಳಲ್ಲಿರುವ ಸರ್ಕಾರಿ ಜಮೀನಿನಲ್ಲಿ ಸ್ಮಶಾನ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಅನೇಕ ಗ್ರಾಮಗಳಲ್ಲಿ ಸರ್ಕಾರಿ ಜಮೀನುಗಳು ಇಲ್ಲವಾಗಿದೆ. ಅಲ್ಲಿ ಖಾಸಗಿ ವ್ಯಕ್ತಿಗಳಿಂದ ಜಮೀನು ಖರೀದಿಸುವಂತೆ ತಿಳಿಸಲಾಗಿದೆಯಾದರೂ ಸ್ಮಶಾನಕ್ಕಾಗಿ ಜಮೀನು ಕೊಡಲು ಯಾರೂ ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.


  ಮನುಷ್ಯ ಸಾಯುವವರೆಗೂ ಹೋರಾಡುತ್ತಾನೆ. ಸತ್ತ ನಂತರವೂ ಮಣ್ಣಿಗೆ ಬೀಳಲು ಹೋರಾಡಬೇಕಿರುವುದು ದುರ್ದೈವವೇ ಸರಿ.

  Published by:Vijayasarthy SN
  First published: