ಕಷ್ಟಕಾಲದಲ್ಲಿ ಬಾಡಿಗೆ ಪುಸ್ತಕಗಳ ಸೇವೆ; ವಿದ್ಯಾರ್ಥಿಗಳ ಕನಸು ನನಸು ಮಾಡಲು ಹೊರಟ ಬುಕ್ರೂಟ್

ಕೆಲ ಸಮಾನ ಮನಸ್ಕರು ಸೇರಿ ಬಾಡಿಗೆ ಪುಸ್ತಕಗಳನ್ನು ಒದಗಿಸುವ ಸೇವೆ ಶುರು ಮಾಡಿದ್ದಾರೆ. ವಿದ್ಯಾರ್ಥಿಗಳು ಪ್ಲೇಸ್ಟೋರ್​ನಲ್ಲಿ ಬುಕ್ರೂಟ್ ಆಪ್ ಡೌನ್ಲೋಡ್ ಮಾಡಿಕೊಂಡು, ತಮಗೆ ಬೇಕಾದ ಪುಸ್ತಕಗಳನ್ನು ಬುಕ್ ಮಾಡಿ, ಠೇವಣಿ ಪಾವತಿಸಿದರೆ ಸಾಕು.

news18-kannada
Updated:June 27, 2020, 3:03 PM IST
ಕಷ್ಟಕಾಲದಲ್ಲಿ ಬಾಡಿಗೆ ಪುಸ್ತಕಗಳ ಸೇವೆ; ವಿದ್ಯಾರ್ಥಿಗಳ ಕನಸು ನನಸು ಮಾಡಲು ಹೊರಟ ಬುಕ್ರೂಟ್
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ಅಟ್ಟಹಾಸದಿಂದಾಗಿ ಭಾರತದಾದ್ಯಂತ ಲಾಕ್​ಡೌನ್​ ಘೊಷಿಸಲಾಗಿತ್ತು. ಅದೂ ಬರೋಬ್ಬರಿ ಎರಡೂವರೆ ತಿಂಗಳ ಕಾಲ ಎಲ್ಲವೂ ಬಂದ್. ಶಾಲಾ ಕಾಲೇಜುಗಳಂತೂ ಇನ್ನೂ ಬಾಗಿಲು ತೆರೆದಿಲ್ಲ. ಹತ್ತನೇ ತರಗತಿ ಪರೀಕ್ಷೆಯ ಬಳಿಕ ಆರನೇ ಸುತ್ತಿನ ಲಾಕ್​ಡೌನ್​ ಘೋಷಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹೀಗಾಗಿ ಕಾಲೇಜುಗಳಿಗೆ ಪರೀಕ್ಷೆ ಮಾಡಬೇಕಾ, ಬೇಡವಾ? ಕಾಲೇಜು ಶುರು ಮಾಡಬೇಕಾ, ಬೇಡವಾ ಎಂಬುದರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳೂ ಸಹ ಗೊಂದಲದಲ್ಲಿದ್ದಾರೆ.

ಇನ್ನು ಈ ವರ್ಷದ ಸೆಮಿಸ್ಟರ್ ಅನ್ನು ಪರೀಕ್ಷೆ ಇಲ್ಲದೇ ಹಿಂದಿನ ಸೆಮಿಸ್ಟರ್​ನಲ್ಲಿ ಪಡೆದಿರುವ ಅಂಕವನ್ನು ಪರಿಗಣಿಸಿ ಪಾಸ್ ಮಾಡುವ ಕುರಿತೂ ಚರ್ಚೆಗಳು ನಡೆಯುತ್ತಿವೆ. ಮತ್ತೊಂದೆಡೆ ಬಂದ್​ನಿಂದಾಗಿ ವಿದ್ಯಾರ್ಥಿಗಳಿಗೆ ಅದರಲ್ಲೂ ಎಂಜಿನಿಯರಿಂಗ್ ಸ್ಟೂಡೆಂಟ್ಸ್​ಗೆ ಪುಸ್ತಕಗಳೂ ಸರಿಯಾಗಿ ದೊರೆಯುತ್ತಿಲ್ಲ. ಬೆಂಗಳೂರಿನಲ್ಲಿರುವ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪುಸ್ತಕಗಳನ್ನು ಹುಡುಕಿಕೊಂಡು ಎಸ್ಪಿ ರಸ್ತೆಗೆ ಹೋಗುತ್ತಾರೆ. ಆದರೆ ಬಂದ್​ನಿಂದಾಗಿ ಅಲ್ಲಿಯೂ ಪುಸ್ತಕಗಳ ಕೊರತೆ ಎದುರಾಗಿದೆ.

ಕರ್ನಾಟಕದ ಆದಾಯ ತೆರಿಗೆ ಆಯುಕ್ತ ಪತಂಜಲಿ ಝಾ ಪ್ರಕೃತಿ ಪ್ರೀತಿ; ನೈಸರ್ಗಿಕವಾಗಿ ಕೊರೋನಾ ವಿರುದ್ಧ ಹೋರಾಟ

Bukroot
ಬುಕ್ರೂಟ್.


ಹೀಗಾಗಿ ಅಂಥವರಿಗಾಗಿಯೇ ಕೆಲ ಸಮಾನ ಮನಸ್ಕರು ಸೇರಿ ಬಾಡಿಗೆ ಪುಸ್ತಕಗಳನ್ನು ಒದಗಿಸುವ ಸೇವೆ ಶುರು ಮಾಡಿದ್ದಾರೆ. ವಿದ್ಯಾರ್ಥಿಗಳು ಪ್ಲೇಸ್ಟೋರ್​ನಲ್ಲಿ ಬುಕ್ರೂಟ್ ಆಪ್ ಡೌನ್ಲೋಡ್ ಮಾಡಿಕೊಂಡು, ತಮಗೆ ಬೇಕಾದ ಪುಸ್ತಕಗಳನ್ನು ಬುಕ್ ಮಾಡಿ, ಠೇವಣಿ ಪಾವತಿಸಿದರೆ ಸಾಕು. ಬುಕ್ ಮಾಡಿದ ಪುಸ್ತಕಗಳನ್ನು ಅವರ ಮನೆಗೇ ಉಚಿತವಾಗಿ ತಲುಪಿಸುತ್ತಾರೆ. ಸದ್ಯ ಬೆಂಗಳೂರಿನ ವಿದ್ಯಾರ್ಥಿಗಳಿಗೆ ಈ ಸೇವೆ ಲಭ್ಯವಿದ್ದು, ಕೊರೊನಾದಂತಹ ಕಷ್ಟಕಾಲದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ತಲೆಬಿಸಿ ಕಡಿಮೆ ಮಾಡಿದೆ.

ಸಾಮಾನ್ಯವಾಗಿ ಪ್ರತಿ ಸೆಮಿಸ್ಟರ್​ಗೂ ಹೊಸ ಪುಸ್ತಕ ಖರೀದಿಸಲು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಡಿಮೆ ಅಂದರೂ 3.5 ಸಾವಿರ ರೂಪಾಯಿಯಿಂದ 4 ಸಾವಿರ ರೂಪಾಯಿ ಬೇಕು. ಹಾಗೇ 8 ಸೆಮಿಸ್ಟರ್​​ಗಳಿಂದ ಬರೋಬ್ಬರಿ 30 ಸಾವಿರ ರೂಪಾಯಿ ಹಣವನ್ನು ಪುಸ್ತಕಗಳಿಗೇ ಖರ್ಚಾಗುತ್ತದೆ. ಇನ್ನು ಒಂದು ಸೆಮಿಸ್ಟರ್ ಮುಗಿದ ಬಳಿಕ ಆ ಪುಸ್ತಕಗಳ ಉಪಯೋಗವೂ ಇರುವುದಿಲ್ಲ. ಆದರೆ ಬುಕ್ರೂಟ್ ಮೂಲಕ ಇದೇ ಪುಸ್ತಕಗಳನ್ನು ಅವರು ಬಾಡಿಗೆ ಪಡೆಯಬಹುದು. ಪ್ರತಿ ಸೆಮಿಸ್ಟರ್​ಗೆ ಅವರಿಗೆ ಕೇವಲ 800 ರೂಪಾಯಿಯಿಂದ 1200 ರೂಪಾಯಿಗೆ ಎಲ್ಲ ಪುಸ್ತಕಗಳೂ ಬಾಡಿಗೆಗೆ ಸಿಗುತ್ತವೆ. ಅರ್ಥಾತ್ ಸರಾಸರಿ 8ರಿಂದ 10 ಸಾವಿರ ರೂಪಾಯಿಗೆ ಅವರ 8 ಸೆಮಿಸ್ಟರ್​ಗಳ ಪುಸ್ತಕಗಳೂ ಸಿಗಲಿವೆ. ಬಡ ಹಾಗೂ ಕೆಳ ಮಧ್ಯಮವರ್ಗದ ಕುಟುಬದ ವಿದ್ಯಾರ್ಥಿಗಳಿಗೆ ಬುಕ್ರೂಟ್ ರಿಲೀಫ್ ನೀಡಿದೆ.

ಮನೆಯ ಕಿಟಕಿ, ಬಾಗಿಲು ತೆರೆಯಬೇಡಿ; ಗುರುಗ್ರಾಮಕ್ಕೆ ಮಿಡತೆ ದಾಳಿಯ ಸೂಚನೆ ನೀಡಿದ ಆಡಳಿತ ಮಂಡಳಿ

ಅಂದಹಾಗೆ ಈ ಬುಕ್ರೂಟ್ ಸಂಸ್ಥಾಪಕರು ಪ್ರಭಂಜನ್ ಹಾಗೂ ಕೆ.ಸಿ. ಅನಿಲ್ ಎಂಬ ಟೆಕ್ಕಿಗಳು. ತಮ್ಮ ಕಾಲೇಜು ದಿನಗಳಲ್ಲಿ ತಾವು ಪುಸ್ತಕ ಖರೀದಿಸಲು ಪಟ್ಟ ಕಷ್ಟವನ್ನು ಇಂದಿನ ವಿದ್ಯಾರ್ಥಿಗಳು ಪಡದಿರಲಿ ಎಂದು ಈ ಬುಕ್ರೂಟ್ ಶುರು ಮಾಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬುಕ್ರೂಟ್ ಸೇವೆ ಪಡೆದಿದ್ದು, ಎಲ್ಲರಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ. ಲಾಕ್​ಡೌನ್​ ಪೂರ್ಣಗೊಂಡು, ಹೊಸ ಸೆಮಿಸ್ಟರ್ ಪ್ರಾರಂಭವಾಗುತ್ತಲೇ, ಸದ್ಯ ಬೆಂಗಳೂರಿಗೆ ಸೀಮಿತವಾಗಿರುವ ಬುಕ್ರೂಟ್ಅನ್ನು ರಾಜ್ಯಾದ್ಯಂತ ವಿಸ್ತರಿಸುವ ಐಡಿಯಾ ಇದೆ.
First published:June 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading