ಅತಂತ್ರವಾಗಿರುವ ರಾಯಚೂರು ಜಿಲ್ಲಾಡಳಿತ ಭವನ‌‌ ; 10 ವರ್ಷಗಳಾದರೂ ಪೂರ್ಣಗೊಳ್ಳದ ಕಟ್ಟಡ ಕಾಮಗಾರಿ

ದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬಿಸಿಲು ನಾಡು ರಾಯಚೂರಿನಲ್ಲಿ ದಿಕ್ಕಿಗೊಂದರಂತೆ ಸರಕಾರಿ ಕಚೇರಿಗಳಿವೆ. ಜಿಲ್ಲೆಗೆ ಬರುವ ಜನರು ಒಂದೊಂದು ಕಚೇರಿಯನ್ನು ಹುಡುಕಿಕೊಂಡು ಅಲೆಯಬೇಕು

 ಅರ್ಧಕ್ಕೆ ನಿಂತ ಕಾಮಗಾರಿ

ಅರ್ಧಕ್ಕೆ ನಿಂತ ಕಾಮಗಾರಿ

  • Share this:
ರಾಯಚೂರು(ಫೆ.19): ರಾಜ್ಯದಲ್ಲಿ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಆಡಳಿತ ಕಚೇರಿಗಳು ಒಂದೇ ಕಡೆ ಇರುವಂತೆ ಜಿಲ್ಲಾಡಳಿತ ಭವನ ನಿರ್ಮಿಸಲಾಗಿದೆ, ಆದರೆ, ರಾಯಚೂರು ಜಿಲ್ಲೆಯಲ್ಲಿ ಕಳೆದ 10 ವರ್ಷಗಳ ಹಿಂದೆಯೇ ಜಿಲ್ಲಾಡಳಿತ ಭವನ ನಿರ್ಮಿಸಲು ಉದ್ದೇಶಿಲಾಗಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಜಿಲ್ಲಾಡಳಿತ ಭವನಕ್ಕೆ ಅಡಿಗಲ್ಲು ಹಾಕಿದ್ದರು. ಆದರೆ, ಕಾಮಗಾರಿಗೆ ನೀಡಬೇಕಾದ ಹಣ ನೀಡದೆ ಇರುವುದರಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ.

ದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬಿಸಿಲು ನಾಡು ರಾಯಚೂರಿನಲ್ಲಿ ದಿಕ್ಕಿಗೊಂದರಂತೆ ಸರಕಾರಿ ಕಚೇರಿಗಳಿವೆ. ಜಿಲ್ಲೆಗೆ ಬರುವ ಜನರು ಒಂದೊಂದು ಕಚೇರಿಯನ್ನು ಹುಡುಕಿಕೊಂಡು ಅಲೆಯಬೇಕು. ಅಲ್ಲದೆ ಜಿಲ್ಲಾ ಮಟ್ಟದ ಬಹುತೇಕ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆಯನ್ನು ನೀಡಲಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ 2009ರಲ್ಲಿ ಕೇಂದ್ರ ಸರಕಾರದ ಸಹಾಯದಲ್ಲಿ ಒಟ್ಟು 25 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲಾಡಳಿತ ಭವನವನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು.

2009ರಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಯೋಜನೆ ಸಿದ್ದವಾಗಿತ್ತು. ಆದರೆ, ಆಗ ಜಿಲ್ಲಾಡಳಿತ ಭವನದ ಜಾಗದ ಬಗ್ಗೆ ಗೊಂದಲವಾಗಿ ಎದ್ದು ಅದು ನೆನೆಗುದಿಗೆ ಬಿದ್ದಿತ್ತು. ಈ ಮಧ್ಯೆ 2017ರಲ್ಲಿ ಈ ಗೊಂದಲ ನಿವಾರಿಸಿ ರಾಯಚೂರಿನ ಯಕ್ಲಾಸಪುರ ಬಳಿಯಲ್ಲಿ ಒಟ್ಟು 10 ಎಕರೆ ಪ್ರದೇಶದಲ್ಲಿ 23 ಕಚೇರಿಗಳ ಜಿಲ್ಲಾಡಳಿತ ಭವನ ನಿರ್ಮಾಣದ ನೀಲನಕ್ಷೆ ಸಿದ್ದವಾಗಿತ್ತು,  ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2018 ಫೆಬ್ರುವರಿ 27 ರಂದು ಜಿಲ್ಲಾಡಳಿತ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕಳೆದ ನಾಲ್ಕು ತಿಂಗಳನಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ : ದೇಶದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿ ಪಡೆದ ರಾಯಚೂರು ಅಭಿವೃದ್ಧಿಗೆ ಆಸಕ್ತಿ ತೋರದ ಜಿಲ್ಲಾ ಉಸ್ತುವಾರಿ ಸಚಿವರು

ಹಿಂದಿನ ಸರಕಾರದಲ್ಲಿ ನಿರ್ಮಿಸಲು ಹೊರಟ ಕಾಮಗಾರಿಯನ್ನು ನಿಲ್ಲಿಸಿದ್ದಕ್ಕೆ ಮಾಜಿ ಸಂಸದ ಬಿ ವಿ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದರೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ಈಗಾಗಲೇ 12 ಕೋಟಿ ರೂಪಾಯಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ, ಅದಕ್ಕೆ 3,5 ಕೋಟಿ ರೂಪಾಯಿ ಕೆಹೆಚ್ ಬಿ ನೀಡಲಾಗಿದೆ. ಉಳಿದ ಹಣವನ್ನು ನೀಡುವಂತೆ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಸರಕಾರದಲ್ಲಿ ಹಣವಿಲ್ಲದೆ ಇರುವುದರಿಂದ ಹಿಂದಿನ ಸರಕಾರದಲ್ಲಿ ಘೋಷಣೆಯಾದ ಹಾಗೂ ಆರಂಭವಾಗಿರುವ ಕಾಮಗಾರಿಗಳು ಅರ್ಧಕ್ಕೆ ನಿಲ್ಲಿಸುತ್ತಿವೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಸುಸಜ್ಜಿತವಾದ ಜಿಲ್ಲಾಡಳಿತ ಭವನದ ಕನಸು ಯಾವಾಗ ನನಸಾಗುತ್ತದೆಯೋ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
First published: