Koppala: ಬೈದವರನ್ನು ಬಿಡದೆ ಕಾಡ್ತಿದೆ ದೇವರಿಗೆ ಬಿಟ್ಟ ಕೋಣ; ಕಂಟೆಮ್ಮ ದೇವಿ ಕೋಪಕ್ಕೆ ಸುಸ್ತಾದ್ರು ಜನ

ದಾರಿಯಲ್ಲಿ ಸಿಕ್ಕರೆ ಅಟ್ಟಾಡಿಸಿಕೊಂಡು ಮನೆಯ ಮುಂದೆ ರೋಷನ್ ಹೊರಬರುವುದನ್ನೇ ಕಾಯುತ್ತಿರುವ ಕೋಣ ಕಳೆದ ಕೆಲ ದಿನಗಳಿಂದ ಕಾಟ ಕೊಡುತ್ತಿದೆ. ಇದರಿಂದ ರೋಷನ್ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದೇವರಿಗೆ ಬಿಟ್ಟ ಕೋಣ

ದೇವರಿಗೆ ಬಿಟ್ಟ ಕೋಣ

  • Share this:
ಕೊಪ್ಪಳ (ಜೂ 26): ದೇವರಿಗೆ ಬಿಟ್ಟ ಕೋಣ, ಬೈದು ಹೊಡೆದವರನ್ನು ಬೆಂಬಿಡದೆ ಕಾಡುತ್ತಿರೋ ವಿಚಿತ್ರ ಘಟನೆ ಕೊಪ್ಪಳ (Koppala) ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವರಾದ ಶ್ರೀಕಂಟೆಮ್ಮ ದುರ್ಗಾ ದೇವಿಯ (Durga Devi) ಹರಕೆಗೆಂದು ಕೋಣವನ್ನು ಬಿಡಲಾಗಿತ್ತು. ಈ ಕೋಣ ಗ್ರಾಮದಲ್ಲಿ ಮೇವು ತಿನ್ನುತ್ತಿದ್ದ ವೇಳೆ ರೋಷನ್, (Roshan) ದೇವರಾಜು (Devaraju) ಹಾಗೂ ಅನಿಲ್ (Anil)​​ ಎಂಬುವರು ಬೈದು ಓಡಿಸಿದ್ದಾನೆ. ಹೊಡೆದು ಓಡಿಸಿದವರ ವಿರುದ್ಧ ಕೋಣ ತಿರುಗಿಬಿದ್ದಿದ್ದು, ರೋಷನ್​, ಅನಿಲ್​, ದೇವರಾಜು   ಎಲ್ಲಿ ಕಂಡ್ರು ತಿವಿದು ಅಟ್ಟಾಡಿಸಿಕೊಂಡು ಹೋಗುತ್ತಿದೆ. ಉಳಿದ ಗ್ರಾಮಸ್ಥರಿಗೆ ಏನು ಮಾಡಲ್ಲ

ರೋಷನ್​ ಮನೆ ಮುಂದೆ ಕಾಯುತ್ತಿರೋ ಕೋಣ

ದಾರಿಯಲ್ಲಿ ಸಿಕ್ಕರೆ ಅಟ್ಟಾಡಿಸಿಕೊಂಡು ಮನೆಯ ಮುಂದೆ ರೋಷನ್ ಹೊರಬರುವುದನ್ನೇ ಕಾಯುತ್ತಿರುವ ಕೋಣ ಕಳೆದ ಕೆಲ ದಿನಗಳಿಂದ ಕಾಟ ಕೊಡುತ್ತಿದೆ. ಇದರಿಂದ ರೋಷನ್ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ದೇವಿಗೆ ಹರಕೆಯಾಗಿ ಬಿಟ್ಟಿರುವ ಕೋಣ ಇದಾಗಿರುವುದರಿಂದ ಇದು ದೇವಿಯ ಪವಾಡ ಹಾಗಾಗಿ ಈ ರೀತಿ ತೊಂದರೆ ಕೊಡುತ್ತಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ರೋಷನ್ ಜೊತೆ ಕೋಣದೊಂದಿಗೆ ತಪ್ಪಾಯಿತು ಎಂದು ಬೇಡಿಕೊಳ್ಳಲು ಗ್ರಾಮಸ್ಥರು ಸಲಹೆ ನೀಡಿದ್ದಾರೆ.

ಶ್ರೀ ಕಂಟೆಮ್ಮ ದುರ್ಗಾ ದೇವಿ ಹರಕೆ ಕೋಣ

ಇದು ಶ್ರೀ ಕಂಟೆಮ್ಮ ದುರ್ಗಾ ದೇವಿಯ ಹರಕೆಯ ಕೋಣವಾಗಿದೆ. ಈ ಕೋಣಕ್ಕೆ ಯಾರಾದರು ಬೈದರೆ ಅದು ಸುಮ್ಮನೆ ನಿಲ್ಲಲು ಬಿಡುವುದಿಲ್ಲ, ಹಾಯಲು ಹೋಗುತ್ತದೆ, ಅಟ್ಟಾಡಿಸುತ್ತದೆ. ಅಷ್ಟೇ ಅಲ್ಲ ಜಮೀನುಗಳಲ್ಲಿ ಮೇಯುತ್ತಿದ್ದಾಗ ಬೈದರೂ ಬೆನ್ನು ಬೀಳುತ್ತದೆ. ತನಗೆ ಬಡಿದಿದ್ದಾರೆ ಎಂಬ ಕಾರಣಕ್ಕೆ ಹರಕೆಯ ಕೋಣ ದೇವರಾಜ್, ಅನಿಲ್, ರೋಷನ್ ಅಲಿ ಎಂಬವರನ್ನು ಕಂಡಕಂಡಲ್ಲಿ ಅಟ್ಟಾಡಿಸಿಕೊಂಡು ತಿವಿಯಲು ಹೋಗುತ್ತದೆ

ಇದನ್ನೂ ಓದಿ: Cat in Police Station: ಕಳ್ಳರನ್ನು ಹಿಡಿಯೋದು ಬಿಟ್ಟು ಈ ಪೊಲೀಸರು ಯಾಕೆ ಬೆಕ್ಕು ಸಾಕ್ತಿದ್ದಾರೆ!?

ದೇವರ ಪವಾಡ ಎನ್ನುತ್ತಿದ್ದಾರೆ ಗ್ರಾಮಸ್ಥರು

ರೋಷನ್ ಅಲಿ ಕೋಣಕ್ಕೆ ಒಂದೆಡರಡು ಏಟು ಆ ಕೋಣಕ್ಕೆ ಕೊಟ್ಟಿರುವ ಪರಿಣಾಮ ಅದು ಬೆನ್ನು ಬಿದ್ದಿದೆ. ಇದು ಕಂಟೆಮ್ಮ ದೇವಿಯ ಪಾವಡವಾಗಿದೆ. ಅದಕ್ಕೆ ಮಹಿಳೆಯರಾಗಲಿ, ಪುರುಷರಾಗಲಿ, ಮಕ್ಕಳೇ ಇರಲಿ ಯಾರು ಬೈಯ್ಯುತ್ತಾರೋ, ಹೊಡಿತಾರೋ ಅವರನ್ನು ಅಟ್ಟಾಡಿಸುತ್ತದೆ ಎಂದು ಹೇಳುತ್ತಾರೆ. ಅದಾಗ್ಯೂ ಶಾಸ್ರೋಕ್ತವಾಗಿ ಕ್ಷಮೆಯಾಚಿಸುವಂತೆ ಗ್ರಾಮಸ್ಥರು ಅಲಿಗೆ ಹೇಳುತ್ತಿದ್ದಾರೆ. ಆದರೆ ಅಲಿ ಮಾತ್ರ ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳುತ್ತಾರಂತೆ. ಇನ್ನು ಕೊನೆಯದಾಗಿ ಅಲಿಯ ಮನವೋಲಿಸಿ ಕ್ಷಮೆಯಾಚಿಸುವಂತೆ ಮಾಡಲು ಗ್ರಾಮದ ಹಿರಿಯರು ಮುಂದೆ ಬಂದಿದ್ದಾರೆ.

ವಾಹನ ಅಡ್ಡಗಟ್ಟಿ ವಾಹನ ಜಖಂಗೊಳಿಸಿದ ಆನೆ

ಚಾಮರಾಜನಗರ: ಗಡಿ ಭಾಗವಾದ ಆಸನೂರು ಬಳಿ ರಸ್ತೆ ಮೇಲೆ ವಾಹನಗಳನ್ನು ಅಡ್ಡಗಟ್ಟಿದ ಕಾಡಾನೆಗಳು ಮೇಲೆ ದಾಳಿ
ಮಾಡಲು ಮುಂದಾಗಿವೆ. ಮರಿಯಾನೆ ಜೊತೆ ಹೆದ್ದಾರಿಗೆ ಬಂದ ಆನೆಗಳು ತಮ್ಮ ದಾರಿಗೆ ಅಡ್ಡ ಬಂದಿವೆ ಎಂದು ವಾಹನಗಳ ಮೇಲೆ ಕೋಪ ತೋರಿಸಿವೆ. ಆದರೆ ವಾಹನ ಸವಾರರೂ ದಾರಿ ಬಿಟ್ಟು ಕಾದು ಕೆಲ ಕಾಲ ವಾಹನ ನಿಲ್ಲಿಸಲಾಗಿತ್ತು, ಈ ವೇಳೆ ಹೆದರಿದ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿ ಜಖಂಗೊಳಿಸಿವೆ.

ಇದನ್ನೂ ಓದಿ: Cat Video: ಸರ್ಕಸ್ ಮಾಡಿ ಈ ಬೆಕ್ಕು ಹಾಯಾಗಿ ಮಲಗಿದ್ದೆಲ್ಲಿ ಗೊತ್ತಾ? ಮಮತೆ ಉಕ್ಕಿಸೋ ವಿಡಿಯೋ ವೈರಲ್

ತಮಿಳುನಾಡು ಡಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಈ ಘಟನೆ ನಡೆದಿದ್ದು, ವಾಹನ ಸವಾರರು ಆನೆಗಳಿಗೆ ಕೀಟಲೆ
ಕೊಡುತ್ತಿರುವುದರಿಂದ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ ಎನ್ನಲಾಗಿದೆ. ಈ ನಡುವೆ ಆನೆಗಳು ಬರುತ್ತಿದ್ದರೂ ಭಯವಿಲ್ಲದ ಕಾರೊಂದು ಚಲಿಸಿದ್ದರಿಂದ ಅಡ್ಡಗಟ್ಟಿದ ಆನೆಗಳು ಆತಂಕಗೊಂಡು ಕಾರಿನತ್ತ ಧಾವಿಸಿ ಬಂದವು, ತಕ್ಷಣವೇ ಕಾರಿನಲ್ಲಿದ್ದ ಯುವಕ ಕಾರನ್ನು ಬಿಟ್ಟು ಓಡಿಬಂದು ತನ್ನ ಪ್ರಾಣ ರಕ್ಷಿಸಿಕೊಂಡಿದ್ದಾನೆ.
Published by:Pavana HS
First published: