HOME » NEWS » State » BUDGET PREPARATIONS FROM NEXT WEEK SAYS CM BS YEDIYURAPPA HK

ಬಜೆಟ್ ಮಂಡನೆಗೆ ಸಿಎಂ ಯಡಿಯೂರಪ್ಪ ಸಿದ್ಧತೆ – ರೈತಪರ ಬಜೆಟ್ ಮಂಡಿಸೋ ವಿಶ್ವಾಸ

ಈ ಭಾರಿಯ ಬಜೆಟ್ ನಲ್ಲಿ ರೈತರ ಹಿತದೃಷ್ಟಿಯಿಂದ ರೈತರಿಗೆ ಹೆಚ್ಚಿನ ಯೋಜನೆ ಗಳನ್ನ ಘೋಷಿಸುವ ಉದ್ದೇಶವನ್ನೊಂದಲಾಗಿದೆ ಎಂದರಲ್ಲದೆ ಪ್ರವಾಸೋದ್ಯಮಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು ತಿಳಿಸಿದರು.

news18-kannada
Updated:March 4, 2020, 7:52 PM IST
ಬಜೆಟ್ ಮಂಡನೆಗೆ  ಸಿಎಂ ಯಡಿಯೂರಪ್ಪ ಸಿದ್ಧತೆ – ರೈತಪರ ಬಜೆಟ್ ಮಂಡಿಸೋ ವಿಶ್ವಾಸ
ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ನೇಗಿಲಕೊಟ್ಟು ಸನ್ಮಾನಿಸಲಾಯಿತು
  • Share this:
ಹಾಸನ(ಜ.04) : ಮುಂದಿನ ವಾರದಿಂದ ಬಜೆಟ್ ಸಿದ್ದತೆ ಮಾಡಿಕೊಳ್ಳುತ್ತೇನೆ. ನೀರಾವರಿ, ರೈತರಿಗೆ ಅನುಕೂಲ ಕಲ್ಪಿಸುವ ವಿಷಯಗಳೇ ಆದ್ಯತೆಯಾಗಿರುವ ರೈತ ಪರ ಬಜೆಟ್ ನೀಡಲು ಸಿದ್ಧತೆ ನಡೆಸಿರುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಬೇಲೂರು ತಾಲ್ಲೂಕಿನ ಹಳೇಬೀಡು ಪುಷ್ಪಗಿರಿ ಮಠದಲ್ಲಿ ಹಮ್ಮಿಕೊಂಡಿದ್ದ ಪುಷ್ಪಗಿರಿ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಯಗೊಂಡನಹಳ್ಳಿ ನಲ್ಲಿ  ಮಾತನಾಡಿದ ಅವರು,  ಮುಂದಿನ ವಾರದಿಂದ ಬಜೆಟ್ ಸಿದ್ಧತೆ ಮಾಡಿಕೊಳ್ಳುತ್ತೇನೆ. ನೀರಾವರಿ, ರೈತರಿಗೆ ಅನುಕೂಲ ಕಲ್ಪಿಸುವ ವಿಷಯಗಳೇ ಆದ್ಯತೆಯಾಗಿರುತ್ತವೆ. ಪ್ರವಾಸೋದ್ಯಮಕ್ಕೆಒತ್ತು ನೀಡುವ ಆಲೋಚನೆಯೂ ಇದೆ ಎಂದರು.

ರಾಜ್ಯದ ಸಮಸ್ಯೆಗಳ ಕುರಿತು ಪ್ರಧಾನಿ ಅವರ ಬಳಿ ಚರ್ಚೆ ನಡೆಸಲಾಗಿದ್ದು ದೆಹಲಿಗೆ ನಿಯೋಗ ತೆರಳಲಾಗುವುದೆಂದು ಹೇಳಿದ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜ್ಯಕ್ಕೆ ಅಗತ್ಯವಿರುವ ಅನುದಾನಗಳ ಬಗ್ಗೆ ಚರ್ಚೆ ನಡೆಸಿದ್ದು, ದೆಹಲಿಗೆ ಬಂದು ಸಂಬಂಧಪಟ್ಟ ಕೇಂದ್ರ ಸಚಿವರನ್ನ ಭೇಟಿಮಾಡಲು ಸೂಚನೆ ನೀಡಿದ್ದಾರೆ.
ಮುಂದಿನ 4 ದಿನಗಳಲ್ಲಿ ದೆಹಲಿಗೆ ತೆರಳಿ ಸಂಬಂಧಪಟ್ಟಕೇಂದ್ರ ಸಚಿವರೊಟ್ಟಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : ಮೋದಿಯಿಂದ ಕರ್ನಾಟಕ ಜನತೆಗೆ ದ್ರೋಹ - ಇಂಥವರು ಪ್ರಧಾನಿಯಾಗಿರೋದೇ ದೌರ್ಭಾಗ್ಯ ; ಕಾಗೋಡು ಕಿಡಿ

ಈ ಭಾರಿಯ ಬಜೆಟ್ ನಲ್ಲಿ ರೈತರ ಹಿತದೃಷ್ಟಿಯಿಂದ ರೈತರಿಗೆ ಹೆಚ್ಚಿನ ಯೋಜನೆ ಗಳನ್ನ ಘೋಷಿಸುವ ಉದ್ದೇಶವನ್ನೊಂದಲಾಗಿದೆ ಎಂದರಲ್ಲದೆ ಪ್ರವಾಸೋದ್ಯಮಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು ತಿಳಿಸಿದರು.

ವಾಲ್ಮೀಕಿ ಸಮಾಜಕ್ಕೆ ಮಂತ್ರಿಗಿರಿ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಸಮಾಜದ ಸ್ವಾಮೀಜಿಗಳ ಜತೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇನೆ. ಸಂಪುಟ ವಿಸ್ತರಣೆ ಹಿನ್ನೆಲೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗುತ್ತೇನೆ. ಪ್ರಧಾನಿ ರಾಜ್ಯಕ್ಕೆ ಬಂದಾಗ ಇಲ್ಲಿನ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
Youtube Video
First published: January 4, 2020, 6:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories