ಬೌದ್ಧ ಧರ್ಮದ ಬಗ್ಗೆ ಬೆಳಕು ಚೆಲ್ಲುವ ರಾಜಘಟ್ಟ; ಸರ್ಕಾರದಿಂದ ಆಗಬೇಕಿದೆ ಸಂರಕ್ಷಣೆ ಕೆಲಸ

ರಾಜಘಟ್ಟದಲ್ಲಿ ಪತ್ತೆಯಾದ ಬೌದ್ಧ ನಿವೇಶನ ನೆಲೆ, ಬೌದ್ಧ  ಚೈತಾಲಯ ಮತ್ತು ಹಲವಾರು ಅವಶೇಷಗಳು ಉತ್ತರ ಕರ್ನಾಟಕ ಸನ್ನತಿ, ಬ್ರಹ್ಮಗಿರಿ, ಚಂದ್ರವಳ್ಳಿಯ ಸಿಕ್ಕ ಅವಶೇಷಗಳಿಗೆ ಹೊಲಿಕೆಯಾಗುತ್ತಿದೆ.  ರಾಜಘಟ್ಟದಲ್ಲಿ ಬೌದ್ಧ ನಿವೇಶೆನ ಪತ್ತೆಯಾಗುವ ಮುನ್ನ ದಕ್ಷಿಣ ಕರ್ನಾಟಕದಲ್ಲಿ  ಬೌದ್ಧ ಧರ್ಮದ ಪ್ರಬಾವ ಇಲ್ಲವೆಂದು ನಂಬಲಾಗಿತ್ತು.

ರಾಜಘಟ್ಟದ ಬೌದ್ಧ ದೇವಾಲಯವಿದ್ದ ಜಾಗ

ರಾಜಘಟ್ಟದ ಬೌದ್ಧ ದೇವಾಲಯವಿದ್ದ ಜಾಗ

  • Share this:
ಏಷ್ಯಾದ ಬೆಳೆಕು ಗೌತಮ ಬುದ್ಧ. ಆತನ ಧರ್ಮವೇ  ಬೌದ್ಧ ಧರ್ಮ. ಭಾರತದಲ್ಲಿ ಹುಟ್ಟಿ ಹಲವು ಸಾಮ್ರಾಜ್ಯಗಳಲ್ಲಿ ಬೆಳೆದು ಪ್ರವರ್ಧ ಮಾನಕ್ಕೆ ಬಂದ ಧರ್ಮ. ಆದರಿವತ್ತು ಭಾರತದಲ್ಲಿ ಬೌದ್ದ ಧರ್ಮದ ಪ್ರಭಾವ ಕಡಿಮೆಯಾಗಿದೆ. ಆದರೆ ಭಾರತದ ನೆರೆಹೊರೆಯ ದೇಶಗಳಲ್ಲಿ ಇವತ್ತು ಬೌದ್ಧ ಧರ್ಮ ಪ್ರಬಲ ಧರ್ಮವಾಗಿದೆ. ಒಂದು ಕಾಲದಲ್ಲಿ ಪ್ರಬಲ ಧರ್ಮವಾಗಿದ್ದ ಬೌದ್ಧ ಧರ್ಮ ದೇಶದ ಹಲವು ಕಡೇ ಬೌದ್ಧ  ಸೂಪ್ತಗಳು ಮತ್ತು ಬೌದ್ಧ ಚೈತಾಲಯಗಳ ಕುರುಹುಗಳನ್ನ ಕಾಣ ಬಹುದಾಗಿದೆ. ಹಾಗೆಯೇ  ದಕ್ಷಿಣ ಕರ್ನಾಟಕ ರಾಜಘಟ್ಟ ಗ್ರಾಮದಲ್ಲಿ ಸಹ ಅಪರೂಪದ ಬೌದ್ಧ ನಿವೇಷನ ನೆಲೆ ಮತ್ತು ಬೌದ್ಧ ಚೈತಾಲಯದ ಅವಶೇಷಗಳು ಪತ್ತೆಯಾಗಿದೆ.

ಶಾತವಾಹನರ ಕಾಲದಲ್ಲಿ ಉತ್ತರ ಕರ್ನಾಟಕ ಸನ್ನತಿ. ಚಂದ್ರಗಿರಿ ಮತ್ತು ಬ್ರಹ್ಮಗಿರಿ ಗಳಲ್ಲಿ ಬೌದ್ಧ ಧರ್ಮದ ಪ್ರಬಲ ಇದಂತೆಯೇ ದಕ್ಷಿಣ ಕರ್ನಾಟಕದಲ್ಲು ಬೌದ್ಧ  ಧರ್ಮದ ಪ್ರಭಾವ ಇತ್ತೇನ್ನುವುದಕ್ಕೆ ರಾಜಘಟ್ಟದಲ್ಲಿ ಸಿಕ್ಕ ಬೌದ್ಧ ಚೈತಾಲಯದ ಕುರುಗಳೇ ಸಾಕ್ಷಿ. ಅದರಿವತ್ತು ಈ ಸ್ಥಳದಲ್ಲಿ ಬೌದ್ಧ ಚೈತಾಲಯ ಇತ್ತೆನ್ನುವುದಕ್ಕೆ ಯಾವುದೇ ಕುರುಹೇ ಇಲ್ಲದಂತೆ ಕಣ್ಮರೆಯಾಗಿದೆ.  ಕೆಲವು ರೈತರು ಇದೇ ಸ್ಥಳದಲ್ಲಿ  ಜಮೀನು ತೋಟ ಮಾಡಿಕೊಂಡು ಬೇಸಾಯ ಮಾಡುತ್ತಿದ್ದಾರೆ  ಇನ್ನುಳಿದ ಪ್ರದೇಶ ಗಿಡಗಂಟಿಗಳಿಂದ ಆವೃತವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ  ಗ್ರಾಮದ ಹೊಲಗಳ ಮಧ್ಯೆ ಬೌದ್ಧ ಧರ್ಮದ ನಿವೇಶನ ನೆಲೆ ಮತ್ತು ಬೌದ್ಧ ಚೈತಾಲಯ ಕಣ್ಣರೆಯಾಗಿದೆ.  ಹೌದು,  ಈ ಮೊದಲು ರಾಜಘಟ್ಟದ ಇದೇ ಸ್ಥಳವನ್ನ ಬೂದಿಗುಂಡಿ ಎಂದು ಗ್ರಾಮಸ್ಥರು ಕರೆಯುತ್ತಿದ್ದರು.  ಈ ಸ್ಥಳದಲ್ಲಿ ಬೂದಿಯನ್ನ  ರೈತರು ತಮ್ಮ ಹೊಲಗಳಿಗೆ ಸಾಗಿಸುವ ಮೂಲಕ  ಉತ್ತಮ ಬೇಸಾಯ ಮಾಡುತ್ತಿದ್ದರು.  ಇದು ಇತಿಹಾಸಕಾರರ ಗಮನ ಸೆಳೆಯಿತು. ಇಂತಹ ಸ್ಥಳಗಳು ಮೊದಲಿಗೆ ನಗರಗಳಾಗಿದ್ದು ಅನಂತರ  ಶತೃಗಳ ದಾಳಿಗೆ ಒಳಗಾಗಿ ಅವನಿತಿಗೆ ಒಳಗಾಗಿದೆ ಅನ್ನೊದರ ಸುಳಿವು ಇತಿಹಾಸಕರರಿಗೆ ಇತ್ತು. ಇದೇ ಕಾರಣಕ್ಕೆ ಇತಿಹಾಸಕಾರರು ಈ ಸ್ಥಳದಲ್ಲಿ ಉತ್ಕಲನ ಮಾಡಲು ಶುರುಮಾಡಿದ್ದರು.

1975ರಲ್ಲಿ  ಮೈಸೂರು ವಿಶ್ವವಿದ್ಯಾಲಯ ಪ್ರಾಚೀನ ಇತಿಹಾಸ ಮತ್ತು ಪುರತಾತ್ವದ  ವಿಭಾಗದ ಟಿ. ದಯಾನಂದ್  ಪಟೇಲ್ ರವರ ನೆತೃತ್ವದಲ್ಲಿ ನಡೆಸಿದ ಉತ್ಖನದಲ್ಲಿ ಆದಿ ಇತಿಹಾಸದ ಅನೇಕ  ಅವಶೇಷಗಳು ಪತ್ತೆಯಾಗಿತ್ತು. ಅದಾದ ಇಪ್ಪತ್ತು ವರ್ಷಗಳ ನಂತರ  1996-97  ರಲ್ಲಿ  ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಪದವಿ ಕಾಲೇಜ್ ಉಪನ್ಯಾಸಕ ಜೆ ವಿಶ್ವನಾಥ್  ಹೆಚ್ಚಿನ ಸಂಶೋಧನೆ ನಡೆಸಿ ಹರಕೆ ಸ್ತೂಪಗಳು ಮತ್ತು ಬೌದ್ಧಅವಶೇಷಗಳನ್ನ ಪತ್ತೆ ಹಚ್ಚಿದ್ರು. ಒಂದು ವರ್ಷಗ ನಂತರ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕ ಡಾ. ನಾಗರಾಜು ಶರ್ಮರವರು ಉತ್ಖನನ ನಡೆಸಿ ಬೌದ್ಧ ಗಾರೆ ಶಿಲ್ಪಗಳು, ಜೇಡಿ ಮಣ್ಣಿನ ಶಿಲ್ಪಗಳು. ಬೃಹತ್ ಲಿಂಗ, ದಂತ ಮತ್ತು ಗಾಜಿನ ಮಣಿಗಳು, ತಾಮ್ರದ ನಾಣ್ಯಗಳನ್ನ ಪತ್ತೆ ಹಚ್ಚಿದ್ರು.  ತದನಂತರ ಮತ್ತೊಮ್ಮೆ ಮೈಸೂರು ವಿವಿಯ ಪ್ರಾಚೀನ ಮತ್ತು ಪುರತಾತ್ವ ವಿಭಾಗದ ಡಾ.ಎಂಎಸ್ ಕೃಷ್ಣಮೂರ್ತಿ ಮತ್ತು ಡಾ.ಎಂಪಿ, ಮಹಾದೇವಯ್ಯ ನೇತೃತ್ವದಲ್ಲಿ  ನಡೆದ ಉತ್ಖನದಲ್ಲಿ ಬೌದ್ಧ ಚೈತಾಲಯ ಅಡಿಪಾಯ,  ಬುದ್ಧನ ಮೂರ್ತಿಗಳು. ಹರಕೆಯ ಸೂಪ್ತಗಳು . ಚಿನ್ನದ ನಾಣ್ಯಗಳು ಸಿಕ್ಕಿದೆ .  ಇದರಿಂದ ಪ್ರೇರಣೆಗೊಂಡ ಇತಿಹಾಸಕಾರರು ನಡೆಸಿದ ಸಂಶೋಧನೆಯಲ್ಲಿ  ಬೌದ್ಧ ವಿಹಾರದ ಸಾಲು ಕೊಠಡಿಗಳು, ಮೂರು ಕುಂಭ ಸಮಾಧಿಗಳು, ಧರ್ಮಚಕ್ರ  ಮತ್ತು ಬೌದ್ಧವಶೇಷಗಳು ಸಾಕಷ್ಟು ಸಿಕ್ಕಿದೆ.

ರಾಜಘಟ್ಟದಲ್ಲಿ ಪತ್ತೆಯಾದ ಬೌದ್ಧ ನಿವೇಷನ ನೆಲೆ, ಬೌದ್ಧ  ಚೈತಾಲಯ ಮತ್ತು ಹಲವಾರು ಅವಶೇಷಗಳು   ಉತ್ತರ ಕರ್ನಾಟಕ ಸನ್ನತಿ, ಬ್ರಹ್ಮಗಿರಿ, ಚಂದ್ರವಳ್ಳಿಯ ಸಿಕ್ಕ ಅವಶೇಷಗಳಲ್ಲಿ ಹೊಲಿಕೆಯಾಗುತ್ತಿದೆ.  ರಾಜಘಟ್ಟದಲ್ಲಿ ಬೌದ್ಧ ನಿವೇಶೆನ ಪತ್ತೆಯಾಗುವ ಮುನ್ನ ದಕ್ಷಿಣ ಕರ್ನಾಟಕದಲ್ಲಿ  ಬೌದ್ಧ ಧರ್ಮದ ಪ್ರಬಾವ ಇಲ್ಲವೆಂದೇ ನಂಬಲಾಗಿತ್ತು. ಈ ಮೂಲಕ ಶಾತವಾಹನರ ಕಾಲದಲ್ಲಿ ಉತ್ತರ ಕರ್ನಾಟಕದ ಸನ್ನತಿ. ಚಂದ್ರಗಿರಿ, ಮತ್ತ ಬ್ರಹ್ಮಗಿರಿಯಲ್ಲಿ ಬೌದ್ಧ ಧರ್ಮ ಪ್ರಬಲವಾಗಿತ್ತು ಅನ್ನೊದು ರುಜುವಾತಾಯ್ತು.  ಅಲ್ಲದೇ  ದಕ್ಷಿಣ ಕರ್ನಾಟಕದ ರಾಜಘಟ್ಟದಲ್ಲಿ ಬೌದ್ಧ ಚೈತಾಲಯದ ಪತ್ತೆಯಾಗುವ ಮೂಲಕ ಸಂಪೂರ್ಣ ಕರ್ನಾಟಕದಲ್ಲಿ ಬೌದ್ಧ ಧರ್ಮದ ಪ್ರಭಾವದ ಬಗ್ಗೆ ಬೆಳಕು ಚೆಲ್ಲಿದೆ.

ದಕ್ಷಿಣ ಕರ್ನಾಟದದಲ್ಲಿಯೇ ವಿಶೇಷವಾದ ಬೌದ್ಧ ಚೈತಾಲಯದ ಕುರುಹು ಪತ್ತೆಯಾಗಿದೆ. ಇಂತಹ ಸ್ಥಳವನ್ನು ಸಂರಕ್ಷಣೆ ಮಾಡಿ ಸ್ಮಾರಕ ಮಾಡುವ ಕೆಲಸ  ಸರ್ಕಾರ ಮಾಡ ಬೇಕಿತ್ತು. ಅದರೀವತ್ತು ಈ ಸ್ಥಳ  ಖಾಸಗಿಯವರ ಪಲಾಗಿದ್ದು. ಇದೇ ಸ್ಥಳದಲ್ಲಿ   ರೈತರು ಹೊಲಗಳನ್ನು ಮಾಡಿಕೊಂಡು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರ ಮಹತ್ವವನ್ನು ಅರಿತ ಗ್ರಾಮದ ಯುವಕರು ಮತ್ತು ಇತಿಹಾಸಕಾರರು ಈ ಸ್ಥಳವನ್ನ ರೈತರಿಂದ ಸೂಕ್ತ ಬೆಲೆಗೆ ಖರೀದಿ ಮಾಡಿ  ಬೌದ್ಧ ಚೈತಾಲಯದ  ಸ್ಥಳವನ್ನು  ಸಂರಕ್ಷಣೆ ಮಾಡಿ ಸ್ಮಾರಕ ಮಾಡ ಬೇಕು. ಇದರಿಂದ ರಾಜಘಟ್ಟ ಗ್ರಾಮಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬರುವ ಜೊತೆಗೆ ಪ್ರವಾಸಿ ತಾಣವಾಗಲಿದೆ ಅನ್ನೊದು  ಇಲ್ಲಿನ ಯುವಕರ ಮಾತಾಗಿದೆ.

ರಾಜಘಟ್ಟ ಅನ್ನುವ ಹೆಸರೇ ಬಹಳ ವಿಶೇಷವಾಗಿದೆ. ಇತಿಹಾಸ ಪೂರ್ವ ಕಾಲದಿಂದ ಹಿಡಿದು  ಮಧ್ಯಕಾಲಿನ ಗಂಗರು ಮತ್ತು ಹೊಯ್ಸಳರವರೆಗೂ ಇಲ್ಲಿ ಅಳ್ವಿಕೆ ನಡೆಸಿರುವ ಬಗ್ಗೆ  ಸಾಕಷ್ಟು ಅವಶೇಷಗಳು ಸಿಕ್ಕಿವೆ. ಈ ಸ್ಥಳದಲ್ಲಿ ಮತ್ತಷ್ಟು ಉತ್ಖನ ನಡೆದ್ರು ಮತ್ತಷ್ಟು ಇತಿಹಾಸದ ಬಗ್ಗೆ ಬೆಳಕು ಚೆಲ್ಲಲಿದೆ ಇದೇ ಕಾರಣಕ್ಕೆ  ಈ ಸ್ಥಳವನ್ನು ಸಂರಕ್ಷಣೆ ಮಾಡುವ ಕೆಲಸ ಸರ್ಕಾರದಿಂದ ನಡೆಯಲಿ.
First published: