Bengaluru University: ಮೊದಲು ಡಿಸ್ಟಿಂಕ್ಷನ್​ನಲ್ಲಿ ಪಾಸ್ ಅಂದ್ರು ಆಮೇಲೆ ನೀವೆಲ್ಲಾ ಫೇಲ್ ಅಂದ್ರು; ಬೆಂಗಳೂರು ವಿವಿ ಎಡವಟ್ಟಿಗೆ ವಿದ್ಯಾರ್ಥಿಗಳ ಸಿಟ್ಟು

ಪದವಿ ಮುಗಿಸಿ ಸಂಯೋಜಿತ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದು ಮೊದಲ ಸೆಮಿಸ್ಟರ್ ಪರೀಕ್ಷೆಗೆ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ನೀವೆಲ್ಲರೂ ಪದವಿಯಲ್ಲಿ ಫೇಲ್ ಆಗಿದ್ದೀರಿ ಹಾಗಾಗಿ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಹರಲ್ಲ ಎಂದು ಹೇಳಿ ಬೆಂಗಳೂರು ವಿವಿ ಶಾಕ್​ ಕೊಟ್ಟಿದೆ.

ಬೆಂಗಳೂರು ವಿಶ್ವವಿದ್ಯಾನಿಲಯ

ಬೆಂಗಳೂರು ವಿಶ್ವವಿದ್ಯಾನಿಲಯ

  • Share this:
ಸ್ನಾತಕೋತ್ತರ ಪದವಿ ಕೋರ್ಸಿಗೆ ಪ್ರವೇಶ ಪಡೆದಿರುವ ಹಲವು ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ (Bengaluru University) ಶಾಕ್​ ಕೊಟ್ಟಿದೆ. ಡಿಸ್ಟಿಂಕ್ಷನ್​ (Distinction) ಪಾಸ್​  ಅದವರನ್ನಯ ಈಗ ನೀವೆಲ್ಲರೂ ಪದವಿಯಲ್ಲಿ ಅನುತ್ತೀರ್ಣರಾಗಿದ್ದೀರಿ ಎಂದು ಹೇಳಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದು ಮೊದಲ ಸೆಮಿಸ್ಟರ್ ಪರೀಕ್ಷೆಗೆ (First Semester Exam) ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ (Student) ವಿಶ್ವವಿದ್ಯಾಲಯ ನೀವೆಲ್ಲರೂ ಪದವಿಯಲ್ಲಿ ಫೇಲ್ ಆಗಿದ್ದೀರಿ ಹಾಗಾಗಿ ಸ್ನಾತಕೋತ್ತರ ಪದವಿ (Master Degree) ಪ್ರವೇಶಕ್ಕೆ ಅರ್ಹರಲ್ಲ ಎಂದು ಹೇಳಿ ಬೆಂಗಳೂರು ವಿವಿ ಅವರ ದಾಖಲಾತಿಯನ್ನೇ ಅನರ್ಹಗೊಳಿಸಿದೆ. ವಿವಿಯ ಈ ಎಡವಟ್ಟಿನಿಂದ (BU Blunder) ವಿದ್ಯಾರ್ಥಿಗಳು ಆತಂಕಗೊಂಡಿದ್ದು ಆಗಿರುವ ಲೋಪವನ್ನು ತಕ್ಷಣ ಸರಿಪಡಿಸಲು ಆಗ್ರಹಿಸಿದ್ದಾರೆ.

ಎಡವಟ್ಟಿನ ಮೇಲೆ ಎಡವಟ್ಟು , ವಿದ್ಯಾರ್ಥಿಗಳಿಗೆ ಶಾಕ್​

ಇತ್ತೀಚೆಗಷ್ಟೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 3ನೇ ಸೆಮಿಸ್ಟರ್‌ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೆಲ ವಿಷಯದಲ್ಲಿ ಮೊದಲು ಗರಿಷ್ಠ ಅಂಕಗಳಿಗೂ ಹೆಚ್ಚು ಅಂಕ ನೀಡಿ ಮಾಡಿದ್ದ ಲೋಪವನ್ನು ಸರಿಪಡಿಸಲು ಹೋಗಿ ಪಾಸ್ ಆಗಿದ್ದವರನ್ನು ಫೇಲ್ ಮಾಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನಂತರ ಫೇಲ್

ಇದೀಗ ಬೆಂಗಳೂರು ವಿಶ್ವವಿದ್ಯಾಲಯದಲ್ಲೂ ಇಂತಹದ್ದೊಂದು ಎಡವಟ್ಟು ನಡೆದಿದೆ. ಪದವಿ ಮುಗಿಸಿ ಸಂಯೋಜಿತ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದು ಮೊದಲ ಸೆಮಿಸ್ಟರ್ ಪರೀಕ್ಷೆಗೆ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ನೀವೆಲ್ಲರೂ ಪದವಿಯಲ್ಲಿ ಫೇಲ್ ಆಗಿದ್ದೀರಿ ಹಾಗಾಗಿ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಹರಲ್ಲ ಎಂದು ಹೇಳಿ ಬೆಂಗಳೂರು ವಿವಿ ಅವರ ದಾಖಲಾತಿಯನ್ನೇ ಅನರ್ಹಗೊಳಿಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Bengaluru: ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮೇಲುಸ್ತುವಾರಿ ಡಿಸಿಪಿಗಳ ಹೆಗಲಿಗೆ: ಸಿಎಂ ಸೂಚನೆ

ಮೊದಲ ಸೆಮಿಸ್ಟರ್​ ಪರೀಕ್ಷಾ ಶುಲ್ಕ ಪಾವತಿ

ಆರೋಪ ಮಾಡುತ್ತಿರುವ ವಿದ್ಯಾರ್ಥಿಗಳು ಹೊಂದಿರುವ ದಾಖಲೆಗಳ ಪ್ರಕಾರ 2021ರಲ್ಲಿ ಪದವಿ ಕೋರ್ಸ್​ ಗಳಲ್ಲಿ ಉತ್ತೀರ್ಣರಾಗಿದ್ದಾರೆ. ಬೆಂಗಳೂರು ವಿವಿಯಿಂದಲೇ ಪಡೆದಿರುವ ಅಂಕಪಟ್ಟಿಯೂ ಅವರ ಬಳಿ ಇದೆ. ಬಹಳಷ್ಟು ಜನ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರ ಆಧಾರದ ಮೇಲೆಯೇ ಸ್ನಾತಕೋತ್ತರ ಪದವಿ ಪ್ರವೇಶ ಪಡೆದುಕೊಂಡಿದ್ದಾರೆ. ಕಾಲೇಜಿನವರು ಆ ವಿದ್ಯಾರ್ಥಿಗಳು ಮೊದಲ ವರ್ಷದ ಪರೀಕ್ಷೆಗೆ ಶುಲ್ಕ ಪಾವತಿಸಿಕೊಂಡು ಅನುಮೋದನೆಗೆ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾರೆ.

ನಿಮಗೆ ಪ್ರವೇಶ ಕೊಡಲಾಗಲ್ಲ ಎಂದು ವಿವಿ ಪಟ್ಟು

ಈ ಸಂಯೋಜಿತ ಸ್ನಾತಕೋತ್ತರ ಪದವಿಗೆ ಪ್ರವೇಶ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳು ಈಗ ಪದವಿಯಲ್ಲಿ ಫೇಲ್ ಆಗಿದ್ದೀರಿ, ನಿಮಗೆ ಪ್ರವೇಶ ಕೊಡಲಾಗಲ್ಲ ಎಂದು ವಿವಿ ಪಟ್ಟು ಹಿಡಿದಿದೆ. ಹೀಗೆ ಫೇಲ್ ಎಂದು ಹೇಳಿರುವ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸ್​ ಆದವರು. ವಿವಿಯ ಎಡವಟ್ಟಿನಿಂದ ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು, ವಿವಿ ಮಾಡಿರೋ ತಪ್ಪಿಗೆ ಆಕ್ರೋಶ ಹೊರಹಾಕಿದ್ದಾರೆ..

ಹಣದಾಸೆಗೆ ಕೃತ್ಯವೆಂದು ಆರೋಪ

ತಮಗಾಗಿರುವ ಅನ್ಯಾಯದಕ್ಕೆ ನ್ಯಾಯಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಆಗಿರುವ ಲೋಪವನ್ನು ಮೌಲ್ಯಮಾಪನ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ದೂರು ನೀಡಲು ಹೋದರೆ ಕಚೇರಿಯಲ್ಲಿ ಯಾರೋಬ್ಬರೂ ಲಭ್ಯವಿರಲಿಲ್ಲ ಎಂದು ಸಂಬಂಧಪಟ್ಟ ವಿದ್ಯಾರ್ಥಿಗಳು ದೂರಿದ್ದಾರೆ. ಅಲ್ಲದೆ, ಇಂತಹ ಲೋಪಗಳನ್ನು ಉದ್ದೇಶಪೂರ್ವಕವಾಗಿಯೇ ನಡೆಸಿದ್ದು, ಹಣದಾಸೆಗೆ ಕೆಲವರು ಇಂತಹ ಕೃತ್ಯ ಎಸಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Anjanadri Hill: ಅಂಜನಾದ್ರಿ ಬೆಟ್ಟಕ್ಕೆ 430 ಮೀಟರ್ ರೋಪ್ ವೇ ನಿರ್ಮಿಸಲು ಸಿಎಂ ಬೊಮ್ಮಾಯಿ ಸೂಚನೆ

21 ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಉಂಟಾಗಿದ್ದು, ಪಾಸ್​ ಅದವರನ್ನು ಫೇಲ್​ ಎಂದು ಹೇಳ್ತಿದ್ದಾರೆ. ಲೋಪ ದೋಷವಾಗಿ ಎನ್ನುತ್ತಿದ್ದಾರೆ. ಅದೇನೆ ಆದ್ರೂ ನಮಗೆ ನ್ಯಾಯ ಸಿಗುವವರೆಗು ಹೋರಾಡುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
Published by:Pavana HS
First published: