• Home
  • »
  • News
  • »
  • state
  • »
  • Kantara: ದೈವ ನರ್ತಕರ ಮೇಲೆ ದೇವರು ಬರೋದು ಸುಳ್ಳು! ಅವರಿಗೆ ಮಾಸಾಶನ ನೀಡಬಾರದು ಎಂದ ಮಾಜಿ ಸಚಿವೆ!

Kantara: ದೈವ ನರ್ತಕರ ಮೇಲೆ ದೇವರು ಬರೋದು ಸುಳ್ಳು! ಅವರಿಗೆ ಮಾಸಾಶನ ನೀಡಬಾರದು ಎಂದ ಮಾಜಿ ಸಚಿವೆ!

ಕಾಂತಾರ ಮತ್ತು ದೈವಾರಾಧಕರ ಬಗ್ಗೆ ಬಿ.ಟಿ. ಲಲಿತಾ ನಾಯಕ್ ಹೇಳಿಕೆ

ಕಾಂತಾರ ಮತ್ತು ದೈವಾರಾಧಕರ ಬಗ್ಗೆ ಬಿ.ಟಿ. ಲಲಿತಾ ನಾಯಕ್ ಹೇಳಿಕೆ

"ಯಾವುದೋ ಕಾಲದಲ್ಲಿ ನೋವಿನಿಂದ ಕೂಗಿದವರನ್ನು ದೇವರು ಎಂದ್ರು. ಈಗಿರೋ ಎಲ್ಲಾ ದೇವರುಗಳು ಮನುಷ್ಯರೇ, ಆದರೆ ನಾವು ದೇವರು ಅಂತ ಮಾಡಿಕೊಂಡಿದ್ದೇವೆ. ದೈವ ನರ್ತಕರಿಗೆ ಮಾಶಾಸನ ನೀಡಬಾರದು" ಅಂತ ಬಿ.ಟಿ. ಲಲಿತಾ ನಾಯಕ್ ಹೇಳಿದ್ದಾರೆ.

  • Share this:

ಗದಗ/ಮಂಗಳೂರು: ಇಡೀ ಭಾರತೀಯ ಚಿತ್ರರಂಗವೇ (Indian Film Industry) ಕನ್ನಡ ಚಿತ್ರರಂಗದತ್ತ (Kannada Film Industry) ನೋಡುವಂತೆ ಮಾಡಿರುವ ಸಿನಿಮಾ ಅಂದರೆ ಅದು ಕಾಂತಾರ (Kantara). ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಕನ್ನಡ ಒಂದೇ ಅಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ಬಾಕ್‌ಸ್ ಆಫೀಸ್ ಕೊಳ್ಳೆ ಹೊಡಿದಿದೆ. ಈ ಸಿನಿಮಾ ಮೂಡಿಸಿದ ಜಾಗೃತೆಯಿಂದಾಗಿಯೇ ಕರಾವಳಿ ಭಾಗದ ದೈವ ನರ್ತಕರಿಗೆ (Daiva Nartaka) ಸರ್ಕಾರ 2 ಸಾವಿರ ರೂಪಾಯಿ ಮಾಸಾಶನ ಮಂಜೂರು ಮಾಡಿದೆ. ಆದರೆ ಇದಕ್ಕೆ ಮಾಜಿ ಸಚಿವೆ, ಸಾಹಿತಿ ಬಿಟಿ ಲಲಿತಾ ನಾಯಕ್ (BT Lalitha Nayak) ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂತಾರ ಚಿತ್ರ ವೀಕ್ಷಿಸಲು ಬಹಳ ಬುದ್ಧಿವಂತಿಕೆ ಬೇಕು. ಇನ್ನು ಭೂತಾರಾಧನೆಯ ಸಮಯದಲ್ಲಿ ದೇವರು ಬರುತ್ತಾರೆ ಅನ್ನೋದೆಲ್ಲಾ ಸುಳ್ಳು. ದೈವ ನರ್ತಕರು ಓಹೋ ಎಂದು ಚೀರಾಟ ಮಾಡುವುದು ಕುಣಿಯುವುದರ ಹಿಂದೆ ಬೇರೆಯದೇ ಆದ ಕಾರಣವಿದೆ ಅಂತ ಹೇಳಿದ್ದಾರೆ. ಅಲ್ಲದೇ ದೈವ ನರ್ತಕರಿಗೆ ಮಾಶಾಸನ ನೀಡಬಾರದು ಅಂತ ಅವರು ಹೇಳಿದ್ದಾರೆ.


“ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದು”


ಗದಗದಲ್ಲಿ ಮಾತನಾಡಿದ ಅವರು, ದೈವ ನರ್ತಕರಿಗೆ ಮಾಶಾಸನ ನೀಡಬಾರದು ಎಂದು ಹೇಳಿದ್ದಾರೆ. ಯಾವುದೋ ಕಾಲದಲ್ಲಿ ನೋವಿನಿಂದ ಕೂಗಿದವರನ್ನು ದೇವರು ಎಂದ್ರು. ಈಗಿರೋ ಎಲ್ಲಾ ದೇವರುಗಳು ಮನುಷ್ಯರೇ, ಆದರೆ ನಾವು ದೇವರು ಅಂತ ಮಾಡಿಕೊಂಡಿದ್ದೇವೆ. ದೈವ ನರ್ತಕರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಮಾಶಾಸನ ನೀಡುವ ಬದಲಿಗೆ ಉದ್ಯೋಗ ನೀಡಿ. ಅರ್ಚಕರು ಹಾಗೂ ಮೌಲ್ವಿಗಳಿಗೆ ಕೂಡಾ ಮಾಶಾಸನ ನೀಡಬಾರದು ಎಂದಿದ್ದಾರೆ.


“ದೇವಸ್ಥಾನದ ತೀರ್ಥ ಕುಡಿಯಬಾರದು”


ಮಾನವ ಶ್ರಮವನ್ನು ಸರ್ಕಾರ ಬಳಸಿಕೊಳ್ಳಬೇಕು, ಅದನ್ನು ಬಿಟ್ಟು ದೇವರು ನಾನು ಅಂತಾ ಕುಣಿದಾಗ, ಅದಕ್ಕೆ ಎರಡು ಸಾವಿರ ಕೊಟ್ರೆ ಅದು ಸಾಲಲ್ಲ. ಮುಂದೆ ಆತ ಮೌಢ್ಯವನ್ನು ಬಿತ್ತುತ್ತಾನೆ ಅಂತ ಅವರು ಹೇಳಿದ್ದಾರೆ. ದೇವಸ್ಥಾನದಲ್ಲಿಯೂ ನಮಗೆ ಜ್ಞಾನ ಸಿಗಲ್ಲ, ನಮಗೆ ಜ್ಞಾನ ಸಿಗೋದು ಗ್ರಂಥಾಲಯ ಹಾಗೂ ಶಾಲೆಗಳಲ್ಲಿ. ದೇವಸ್ಥಾನದಲ್ಲಿ ನೀಡೋ ತೀರ್ಥವನ್ನು ಕುಡಿಯಬಾರದು. ಎಷ್ಟು ದಿನದ ಕಿಲಬು ಇರುತ್ತೇ, ಎಷ್ಟು ಜನ್ರು ವಾಂತಿ ಮಾಡಿಕೊಂಡಿದ್ದಾರೆ. ಅವೆಲ್ಲ ಅವೈಜ್ಞಾನಿಕವಾದ್ದು, ಶುದ್ಧವಾಗಿ ಕೈ ತೊಳೆಯಲ್ಲ ಅವ್ರು. ನಮ್ಮ ಮನೆಯಲ್ಲಿ ನೀರು ಇಲ್ವಾ ಎಂದು ಲಲಿತಾ ನಾಯಕ್ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Rishab Shetty: ಪ್ರಶಾಂತ್ ಶೆಟ್ಟಿ ಎಂಬ ಹುಡುಗ ರಿಷಬ್ ಶೆಟ್ಟಿ ಆಗಿದ್ದು ಹೇಗೆ? ಕುಂದಾಪುರದಿಂದ ಕಾಂತಾರದವರೆಗಿನ ಪ್ರಯಾಣ ಇಲ್ಲಿದೆ


“ದೈವ ನರ್ತನ ಸುಳ್ಳು ಎಂಬ ಸತ್ಯವನ್ನು ಸಾರಬೇಕು”


ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವ್ರು ಗಂಗಾಜಲ ತಂದುಕೊಟ್ರು, ಗಂಗಾ ನದಿಯಲ್ಲಿ ಹೆಣಗಳು ತೆಲುತ್ತವೆ, ಅಲ್ಲಿ ಹೆಣ ಹೆಣ ಸುಟ್ಟು ಗಂಗಾನದಿಗೆ ಎಸೆಯುತ್ತಾರೆ ಅಂತ ಲಲಿತಾ ನಾಯಕ್ ಹೇಳಿದ್ದಾರೆ. ಇನ್ನು ಯಾರ್ಯಾರು ದೇವರ ಹೆಸರಿನಲ್ಲಿ ಕುಣಿದ್ರೆ ಅವರಿಗೆ ದುಡ್ಡು ಕೊಡಬಾರದು, ಸಾರ್ವಜನಿಕ ಹಣವನ್ನು ಪೋಲು ಮಾಡಬಾರದು, ದೈವದ ಹೆಸರಿನಲ್ಲಿ ನರ್ತನೆ ಮಾಡೋದು ಇದೊಂದು ಸುಳ್ಳು ಎಂಬ ಸತ್ಯವನ್ನು ಜನರ ಮುಂದೆ ಇಡುವ ಕೆಲಸ ಮಾಡಬೇಕು, ಮಾಸಾಶನದ ಬದಲಿಗೆ ದುಡಿಮೆಯನ್ನು ಮಾಡಿ, ಉಣುವ ವ್ಯವಸ್ಥೆಯನ್ನು ತರಬೇಕು ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ.


“ಕಾಂತಾರ ನೋಡೋದಕ್ಕೆ ಬುದ್ಧಿವಂತಿಕೆ ಬೇಕು”


ಕಾಂತಾರ ಚಿತ್ರ ವೀಕ್ಷಿಸಲು ಬಹಳ ಬುದ್ಧಿವಂತಿಕೆ ಬೇಕು. ಇನ್ನು ಭೂತಾರಾಧನೆಯ ಸಮಯದಲ್ಲಿ ದೇವರು ಬರುತ್ತಾರೆ ಅನ್ನೋದೆಲ್ಲಾ ಸುಳ್ಳು. ದೈವ ನರ್ತಕರು ಓಹೋ ಎಂದು ಚೀರಾಟ ಮಾಡುವುದು ಕುಣಿಯುವುದರ ಹಿಂದೆ ಬೇರೆಯದೇ ಆದ ಕಾರಣವಿದೆ. ಅವರ ಮೇಲೆ ದೇವರು ಬಂದಾಗ ಮಾಡುವ ವರ್ತನೆ ಇದಲ್ಲ ಎಂದಿದ್ದಾರೆ. ಕಾಂತಾರ ಚಿತ್ರ ಕಾಡಿನ ಜನರ ನೋವಿನ ಕಥೆ. ಜಮೀನ್ದಾರ ಪದ್ಧತಿಯ ಮೂಲಕ ಅವರನ್ನು ಒಕ್ಕಲೆಬ್ಬಿಸಲು ನೋಡಿದರು. ಅವರಿಗೆ ಕೊಡಬಾರದ ಚಿತ್ರಹಿಂಸೆಗಳನ್ನೆಲ್ಲಾ ನೀಡಿದರು. ಕೊನೆಗೆ ತಮ್ಮ ಉಳಿವಿಗಾಗಿ ಹಾಗೂ ನ್ಯಾಯಕ್ಕಾಗಿ ಸರ್ಕಾರದ ಮೊರೆ ಹೋದರು. ಅವರಿಂದಲೂ ಕೂಡ ನ್ಯಾಯ ಸಿಗದೇ ಇದ್ದಾಗ, ತಮ್ಮ ನೋವನ್ನು ಈ ರೀತಿ ಚೀರಾಡುವ ಮೂಲಕ ಹೊರಹಾಕಿದರು. ಅದನ್ನೇ ಈಗ ದೈವ ಎಂದು ನಂಬುತ್ತಿದ್ದಾರೆ ಅಂತ ಅವರು ಹೇಳಿದ್ದಾರೆ.


ಇದನ್ನೂ ಓದಿ: Rashmika Mandanna on Kantara: ನಾ ಇನ್ನೂ ಕಾಂತಾರ ನೋಡಿಲ್ಲ ಎಂದ ರಶ್ಮಿಕಾ ಮಂದಣ್ಣ! ಜಾಲತಾಣದಲ್ಲಿ ಜನ್ಮ ಜಾಲಾಡಿದ ನೆಟ್ಟಿಗರು!


ಲಲಿತಾ ನಾಯಕ್ ಹೇಳಿಕೆಗೆ ಖಾದರ್ ಆಕ್ರೋಶ


ಇನ್ನು ಬಿಟಿ ಲಲಿತಾ ನಾಯಕ್ ಹೇಳಿಕೆಗೆ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿ.ಟಿ.ಲಲಿತಾ ನಾಯಕ್ ಅವರೇ ನಿಮ್ಮ ಬಗ್ಗೆ ನಮಗೆ ಗೌರವವಿದೆ. ಆದರೆ ದೈವ ನರ್ತಕರಿಗೆ ನೀಡಿರುವ ಮಾಶಾಸನ ಸರಿ ಅಲ್ಲ ಎಂಬ ಮಾತನ್ನ ನಾನು ಒಪ್ಪಲು ಸಿದ್ದವಿಲ್ಲ. ನನ್ನ ಕ್ಷೇತ್ರ ಹಾಗೂ ಸಂಪೂರ್ಣ ಕರಾವಳಿ ಜನರ ಪರವಾಗಿ ನಾನು ನಿಮ್ಮ ಮಾತನ್ನು ಖಂಡಿಸುತ್ತೇನೆ. ಮೊದಲು ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ ಹಾಗೂ ಕರಾವಳಿ ಸಂಸ್ಕೃತಿಯನ್ನ ಅರ್ಥೈಸಿಕೊಂಡು ನಿಮ್ಮ ನಿಲುವಿನ ಬಗ್ಗೆ ಮರು ಚಿಂತನೆ ಮಾಡುವುದು ಒಳಿತು ಎಂದು ತಿರುಗೇಟು ನೀಡಿದ್ದಾರೆ.

Published by:Annappa Achari
First published: