ಕುತೂಹಲ ಮೂಡಿಸಿದ ಯಡಿಯೂರಪ್ಪ ಬೆಳಗಾವಿ ಭೇಟಿ

ರಮೇಶ್​ ಜಾರಕಿಹೊಳಿ ಪಕ್ಷ ಬಿಡುವ ಸೂಚನೆಯನ್ನು ರಾಜ್ಯದ ನಾಯಕರಿಗೆ ನೀಡಿದ್ದು, ಇನ್ನು ನಾಲ್ಕು ದಿನದಲ್ಲಿ ಈ ಬಗ್ಗೆ ಬಹಿರಂಗವಾಗಲಿದೆ ಎಂದು ಕೂಡ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಬಿಜೆಪಿ, ರಮೇಶ್​ಗೆ ಗಾಳ ಹಾಕಲು ಮುಂದಾಗಿದೆಯಾ ಎಂಬ ಪ್ರಶ್ನೆ ಮೂಡಿದೆ.

Seema.R | news18
Updated:December 26, 2018, 1:33 PM IST
ಕುತೂಹಲ ಮೂಡಿಸಿದ ಯಡಿಯೂರಪ್ಪ ಬೆಳಗಾವಿ ಭೇಟಿ
ಬಿ.ಎಸ್.ಯಡಿಯೂರಪ್ಪ
Seema.R | news18
Updated: December 26, 2018, 1:33 PM IST
ಬೆಂಗಳೂರು (ಡಿ.26): ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆ ಕೋಪಗೊಂಡಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಕಾಂಗ್ರೆಸ್​ ನಾಯಕರೊಂದಿಗೆ ಮಾತುಕತೆಗೆ ಸಿಗದೆ ಬೆಳಗಾವಿಗೆ ತೆರಳಿದ್ದಾರೆ. ರಮೇಶ್​ ಬೆನ್ನಲ್ಲೇ ಈಗ ಯಡಿಯೂರಪ್ಪ ಕೂಡ ಬೆಳಗಾವಿಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ರಾಮಲಿಂಗಾ ರೆಡ್ಡಿಯವರನ್ನು ಮೂವರು ಬಿಜೆಪಿ ನಾಯಕರು ಭೇಟಿ ನೀಡಿದ್ದರು. ಆದರೆ, ಈ ಭೇಟಿ ಔಪಚಾರಿಕ ಭೇಟಿ ಅಷ್ಟೇ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದರು. ಈಗ ಯಡಿಯೂರಪ್ಪ ಬೆಳಗಾವಿಗೆ ಭೇಟಿ ನೀಡಿರುವ ಹಿನ್ನಲೆ ಪಕ್ಷದ ವಿರುದ್ಧ ಅತೃಪ್ತಗೊಂಡ ಶಾಸಕರನ್ನು ಸೆಳೆಯುವ ಉದ್ದೇಶವೇ ಎಂಬ ಅನುಮಾನ ಮೂಡಿದೆ.

ಇನ್ನು ರಮೇಶ್​ ಜಾರಕಿಹೊಳಿ ಪಕ್ಷ ಬಿಡುವ ಸೂಚನೆಯನ್ನು ರಾಜ್ಯದ ನಾಯಕರಿಗೆ ನೀಡಿದ್ದು, ಇನ್ನು ನಾಲ್ಕು ದಿನದಲ್ಲಿ ಈ ಬಗ್ಗೆ ಬಹಿರಂಗವಾಗಲಿದೆ ಎಂದು ಕೂಡ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಬಿಜೆಪಿ, ರಮೇಶ್​ಗೆ ಗಾಳ ಹಾಕಲು ಮುಂದಾಗಿದೆಯಾ ಎಂಬ ಪ್ರಶ್ನೆ ಮೂಡಿದೆ.

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಬಿಎಸ್​ ಯಡಿಯೂರಪ್ಪ,  ನಾನು ರಮೇಶ್ ಜಾರಕಿಹೊಳಿಯನ್ನು ಭೇಟಿಯಾಗುವುದಿಲ್ಲ. ಇದು ಸತ್ಯವಾಗಿ ನಾನು ಅವರನ್ನು ಭೇಟಿಯಾಗಲು ಇಲ್ಲಿಗೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಎದುರಾಗುತ್ತಿರುವ ಹಿನ್ನಲೆ ಅದರ ಬಗ್ಗೆ ನಮ್ಮ ಗಮನವಿದ್ದು, ಈ ಬಗ್ಗೆ ಚರ್ಚೆಗೆ ಬಂದಿದ್ದೇನೆ. ಕಾಂಗ್ರೆಸ್​ ಶಾಸಕರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಅತೃಪ್ತ ಶಾಸಕರು ನಮ್ಮ ಸಂಪರ್ಕದಲ್ಲೂ ಇಲ್ಲ. ನಾವು ಸಂಪರ್ಕಿಸಿಲ್ಲ, ಮುಂದೇನಾಗುತ್ತೋ ಗೊತ್ತಿಲ್ಲ ಎಂದಿದ್ದಾರೆ.

ಇದನ್ನು ಓದಿ: ಇನ್ನೂ ಬಗೆಹರಿಯದ ಖಾತೆ ಹಂಚಿಕೆ ಬಿಕ್ಕಟ್ಟು; ಹೈ ಕಮಾಂಡ್​ ತೀರ್ಮಾನಕ್ಕೆ ಬಿಟ್ಟ ಕೈ ಮುಖಂಡರು
Loading...

ಮೈತ್ರಿ ಪಕ್ಷವನ್ನು ಬಿಳಿಸಲು ನಾವು ಯಾವುದೇ ಪ್ರಯತ್ನ ನಡೆಸುವುದಿಲ್ಲ. ಅವರ ಶಾಸಕರನ್ನು ನಾವು ಸೆಳೆಯಲು ಮುಂದಾಗುವುದಿಲ್ಲ. ಮಂತ್ರಿ ಸ್ಥಾನ, ಪ್ರಮುಖ ಸ್ಥಾನ ಸಿಗಲಿಲ್ಲ ಎಂದು ಅವರೇ ಬಡಿದಾಡಿಕೊಳ್ಳುತ್ತಾರೆ ಎಂದರು.

ಸಿಎಂಗೆ ರಾಜ್ಯದ ಅಧಿಕಾರದ ಬಗ್ಗೆ ಚಿಂತೆ ಇಲ್ಲ. ರಾಜ್ಯದಲ್ಲಿ ಬರಗಾಲವಿದೆ. ಈ ಬಗ್ಗೆ ನೋಡೋಣ, ಮಡೋಣ ಎಂದು ಅಷ್ಟೇ ಹೇಳುತ್ತಿದ್ದಾರೆ. ಗೂಂಡಾ ರಾಜ್ಯಕ್ಕೆ ಅವರು ಪ್ರೇರಣೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

First published:December 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626