ಅಪ್ಪ-ಮಕ್ಕಳು ಮೋಸಗಾರರು, ಚಾಮುಂಡೇಶ್ವರಿ ಸೋಲನ್ನು ಮರೆಯಬೇಡಿ; ಸಿದ್ದರಾಮಯ್ಯಗೆ ಬಿಎಸ್​ವೈ ಕಿವಿಮಾತು

Seema.R | news18
Updated:October 24, 2018, 5:46 PM IST
ಅಪ್ಪ-ಮಕ್ಕಳು ಮೋಸಗಾರರು, ಚಾಮುಂಡೇಶ್ವರಿ ಸೋಲನ್ನು ಮರೆಯಬೇಡಿ; ಸಿದ್ದರಾಮಯ್ಯಗೆ ಬಿಎಸ್​ವೈ ಕಿವಿಮಾತು
  • News18
  • Last Updated: October 24, 2018, 5:46 PM IST
  • Share this:
ರಾಚಪ್ಪ ಬನ್ನಿದಿನ್ನಿ, ನ್ಯೂಸ್​ 18 ಕನ್ನಡ

ಬಾಗಲಕೋಟೆ (ಅ.24): ಧೃತರಾಷ್ಟನನ್ನು ನಂಬಿದಂತೆ ಸಿದ್ದರಾಮಯ್ಯ ದೇವೇಗೌಡರನ್ನು ನಂಬಿದ್ದೀರಾ. ಅವರ ದ್ರೋಹವನ್ನು ಮರೆತು ಅವರ ಜೊತೆ ಕೈಜೋಡಿಸಿರುವ ನಿಮನ್ನು ಮತ್ತೆ ಮೋಸ ಮಾಡುವುದರಲ್ಲಿ ಸಂಶಯವಿಲ್ಲ ಎಂದು  ಮಾಜಿ ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಜಮಖಂಡಿಯಲ್ಲಿ ತಮ್ಮ ಅಭ್ಯರ್ಥಿ ಶ್ರೀಕಾಂತ್​ ಕುಲಕರ್ಣಿ ಪರ ಪ್ರಚಾರ ಮಾಡಿದ ಅವರು ಕುಮಾರಸ್ವಾಮಿ, ದೇವೇಗೌಡರ ವಿರುದ್ಧ ಹರಿಹಾಯ್ದರು.  ಚಾಮುಂಡೇಶ್ವರಿಯಲ್ಲಿ  ನಿಮ್ಮ ವಿರುದ್ಧ ಜಿ.ಟಿ ದೇವೇಗೌಡ ಅವರನ್ನು  ಪನಿಲ್ಲಿಸಲಿಲ್ಲವೇ. ಇದನ್ನೆಲ್ಲಾ ಮರೆತು ಮೈತ್ರಿ ಮಾಡಿಕೊಂಡ ನಂತರವು ನಿಮ್ಮ ಮನಸ್ಸಿಗೆ ವಿರುದ್ಧವಾಗಿ ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ಜಿ.ಟಿ ದೇವೇಗೌಡರನ್ನು ನೇಮಕ ಮಾಡಿ ನಿಮ್ಮನ್ನು ಹಣಿಯುವ ಯತ್ನ ಮಾಡಿದರು. ಒಂದು ವೇಳೆ ನೀವು ಬದಾಮಿಯಲ್ಲಿ ಗೆಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಯೋಚಿಸಿ ಎಂದು ಕಿವಿಮಾತನ್ನು ಹೇಳಿದರು.

ಹಣ-ಹೆಂಡ ಹಂಚಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಮೈತ್ರಿ ಪಕ್ಷಗಳು ಇದೆ. ಆದರೆ ಈ ಉಪಚುನಾವಣೆ ಮೂಲಕ ಕುಮಾರಸ್ವಾಮಿ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ, ಹೋದಕಡೆಯಲ್ಲೆಲ್ಲ ಸಾಲಮನ್ನಾ ಮಾಡಿದ್ದೇವೆ ಎಂದು  ಕುಮಾರಸ್ವಾಮಿ ಬೊಬ್ಬೆ ಹೊಡೆಯುತ್ತಾರೆ. ಆದರೆ ಇದುವರೆಗೂ ಸಾಲ ಎಲ್ಲಿ ಮನ್ನಾ ಆಗಿದೆ ಎಂದು ತೋರಿಸಿ ಎಂದು ಸವಾಲು ಹಾಕಿದರು.

 

ಜಮಖಂಡಿ ಭಾಗಕ್ಕೆ ಸರ್ಕಾರ ಏನು ಮಾಡಿದ್ದಾರೆ. ಈ ಭಾಗಕ್ಕೆ ಅವರ ಕೊಡುಗೆಯೇನು. ನೀರಾವರಿ ಇಲಾಖೆಯಲ್ಲಿ ಬಿಲ್ ಬಾಕಿ ಇವೆ.ಗುತ್ತಿಗೆದಾರರಿಗೆ ಹಣ ನೀಡಿಲ್ಲ ಎಂದು ಆರೋಪಗಳ ಸುರಿಮಳೆ ಸುರಿಸಿದರು.

ಇದನ್ನು ಓದಿ: ಉಪಚುನಾವಣೆಗೆ ಸ್ಟಾರ್​ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ37ಸೀಟು ಜೆಡಿಎಸ್ ಗೆ ಬಂದಿವೆ. ಈ ಭಾಗದ ಜನ  ನಮಗೆ ಮತ ಹಾಕಿಲ್ಲ ಎಂದ  ನಮ್ಮ  ಶಾಸಕರನ್ನು ಗೆಲ್ಲಿಸಿಲ್ಲ ಎಂದು ಕುಮಾರಸ್ವಾಮಿ ಬಹಿರಂಗವಾಗಿ ಹೇಳಿದ್ದರು. ಈಗ  ಹೇಗೆ ಅವರು ಇಲ್ಲಿನ ಜನರಲ್ಲಿ ಮತಯಾಚನೆ ಮಾಡುತ್ತಾರೆ. ಇದನ್ನೆಲ್ಲಾ ಮರೆತು ಜನರು  ಯಾವುದೇ  ಕಾರಣಕ್ಕೂ ಮೈತ್ರಿ ಅಭ್ಯರ್ಥಿಗೆ ಮತಹಾಕಬಾರದು ಎಂದರು.

ಶ್ರೀರಾಮುಲು ಅವರನ್ನು ಅಪಮಾನ ಮಾಡಿ  ಸಿದ್ದರಾಮಯ್ಯ  420ಎಂದು ಕರೆದಿದ್ದಾರೆ.  ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದ್ದಕ್ಕೆ ಕ್ಷಮೆ ಕೋರಬೇಕು. ಶ್ರೀರಾಮುಲು ಲೋಕಸಭೆಯಲ್ಲಿ ಪ್ರಶ್ನೆ ಕೇಳಲಿಲ್ಲವೆಂದು ಹೇಳುವ ಸಿದ್ದರಾಮಯ್ಯ ಮೊದಲು ರಾಹುಲ್​ ಗಾಂಧಿ ಲೋಕಸಭೆಯಲ್ಲಿ ಎಷ್ಟು ಮಾತನಾಡಿದ್ದಾರೆ ಎಂದು ಉತ್ತರಿಸಲಿ ಎಂದರು.

First published:October 24, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading