HOME » NEWS » State » BSY TO MOVE TO KAVERI THE OFFICIAL RESIDENCE OF CM WHERE SIDDARAMAIAH RESIDED EARLIER MAK

ಶೀಘ್ರದಲ್ಲಿ ಸಿಎಂ ಅಧಿಕೃತ ನಿವಾಸಕ್ಕೆ ಬಿಎಸ್​ವೈ; ಸಿದ್ದರಾಮಯ್ಯ ಇದ್ದ ಸರ್ಕಾರಿ ಬಂಗಲೆಗೆ ಯಡಿಯೂರಪ್ಪ ಪ್ರವೇಶ

ಇಷ್ಟು ದಿನ ಕಾವೇರಿ ನಿವಾಸದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಸವಿದ್ದರು. ಆದರೆ, ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕಳೆದ ತಿಂಗಳೇ ಅವರು ಮನೆ ಖಾಲಿ ಮಾಡಿದ್ದು, ಇದೀಗ ಅದೇ ಮನೆಗೆ ಸಿಎಂ ಬಿಎಸ್​ವೈ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

news18-kannada
Updated:February 22, 2020, 3:30 PM IST
ಶೀಘ್ರದಲ್ಲಿ ಸಿಎಂ ಅಧಿಕೃತ ನಿವಾಸಕ್ಕೆ ಬಿಎಸ್​ವೈ; ಸಿದ್ದರಾಮಯ್ಯ ಇದ್ದ ಸರ್ಕಾರಿ ಬಂಗಲೆಗೆ ಯಡಿಯೂರಪ್ಪ ಪ್ರವೇಶ
ಸಿದ್ದರಾಮಯ್ಯ, ಬಿ.ಎಸ್​. ಯಡಿಯೂರಪ್ಪ.
  • Share this:
ಬೆಂಗಳೂರು (ಫೆಬ್ರವರಿ 22); ಇಷ್ಟು ದಿನ ಡಾಲರ್ಸ್​ ಕಾಲೋನಿಯಲ್ಲಿದ್ದ ತಮ್ಮ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಶೀಘ್ರದಲ್ಲಿ ಸಿಎಂ ಅಧಿಕೃತ ಸರ್ಕಾರಿ ನಿವಾಸ ಕಾವೇರಿ ಪ್ರವೇಶಿಸಲಿದ್ದಾರೆ.

ಇಷ್ಟು ದಿನ ಕಾವೇರಿ ನಿವಾಸದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಸವಿದ್ದರು. ಆದರೆ, ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕಳೆದ ತಿಂಗಳೇ ಅವರು ಮನೆ ಖಾಲಿ ಮಾಡಿದ್ದು, ಇದೀಗ ಅದೇ ಮನೆಗೆ ಸಿಎಂ ಬಿಎಸ್​ವೈ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಕಾವೇರಿ ನಿವಾಸಕ್ಕೆ ಬಿಎಸ್​ವೈ ಪ್ರವೇಶ ಹಿನ್ನೆಲೆ ಸರ್ಕಾರಿ ಬಂಗಲೆಯನ್ನು ನವೀಕರಿಸಲಾಗುತ್ತಿದೆ. ಇದನ್ನು ಇಂದು ಖುದ್ದು ಬಿಎಸ್​ವೈ ಮನೆಗೆ ಬಂದು ಪರಿಶೀಲಿಸಿದ್ದಾರೆ. ರಾಷ್ಟ್ರಪತಿಗಳಿಗೆ ಬೀಳ್ಕೊಡುಗೆ ಕೊಟ್ಟು ವಾಪಸ್​ ಬರುವಾಗ ಕಾವೇರಿ ನಿವಾಸಕ್ಕೆ ಭೇಟಿ ನೀಡಿರುವ ಸಿಎಂ ನವೀಕರಣ ಕೆಲಸ ಯಾವ ಹಂತದಲ್ಲಿ ಎಂದು ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಕಾವೇರಿ ನಿವಾಸಕ್ಕೆ ಬಿಎಸ್​ವೈ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿ ಎನ್ನಲಾಗುತ್ತಿದೆ.

ಇದನ್ನೂ ಓದಿ : ಜಲಸಂಪನ್ಮೂಲ ಖಾತೆ ನಿಭಾಯಿಸಿ ತೋರಿಸುತ್ತೇನೆ : ಸಚಿವ ರಮೇಶ್ ಜಾರಕಿಹೊಳಿ
Youtube Video
First published: February 22, 2020, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories