ಒಂದು ಅಧ್ಯಕ್ಷ ಹುದ್ದೆ ಮೇಲೆ 13 ನಾಯಕರ ಕಣ್ಣು; ಯಾರಿಗೆ ದಕ್ಕಲಿದೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?

HR Ramesh | news18
Updated:April 27, 2019, 4:50 PM IST
ಒಂದು ಅಧ್ಯಕ್ಷ ಹುದ್ದೆ ಮೇಲೆ 13 ನಾಯಕರ ಕಣ್ಣು; ಯಾರಿಗೆ ದಕ್ಕಲಿದೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?
ಸಾಂದರ್ಭಿಕ ಚಿತ್ರ
HR Ramesh | news18
Updated: April 27, 2019, 4:50 PM IST
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗಾಗಿ ಪಕ್ಷದ ಹಲವು ಹಿರಿಯ ನಾಯಕರ ಕಣ್ಣು ಬಿದ್ದಿದ್ದು, ಪಟ್ಟಕ್ಕಾಗಿ ಸಾಕಷ್ಟು ಕಸರತ್ತು ಆರಂಭವಾಗಿದೆ. ಹಾಲಿ ಅಧ್ಯಕ್ಷರಾಗಿರುವ ಬಿ.ಎಸ್​.ಯಡಿಯೂರಪ್ಪ ಅವರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಗಾದಿಗೆ ಹಲವು ಮಂದಿ ಪೈಪೋಟಿ ನಡೆಸಿದ್ದಾರೆ.

ಬಿಜೆಪಿ ಪಟ್ಟಕ್ಕಾಗಿ ಜಾತಿ ಆಧಾರದ ಮೇಲೆ ಲಾಬಿ ನಡೆಯುತ್ತಿದೆ. ಬಿಜೆಪಿ ಹೈಕಮಾಂಡ್ ಮುಂದೆ ಜಾತಿ ಆಧಾರದ ಮೇಲೆ ಪೈಪೋಟಿ ನಡೆದಿದೆ. ಜಗದೀಶ್ ಶೆಟ್ಟರ್, ಕೆ.ಎಸ್ ಈಶ್ವರಪ್ಪ, ಡಿ.ವಿ ಸದಾನಂದಗೌಡ ಎರಡನೇ ಬಾರಿಗೆ ಅಧ್ಯಕ್ಷ ಹುದ್ದೆ ಅಲಂಕರಿಸಲು ಪ್ಲಾನ್ ಮಾಡಿದ್ದಾರೆ. ರಾಜ್ಯದಲ್ಲಿ ಪಿಎಂ ರ್ಯಾಲಿ ಸೇರಿದಂತೆ 24 ರ್ಯಾಲಿಗಳನ್ನು ಯಶಸ್ವಿಯಾಗಿ ಮಾಡಿದ್ದೇನೆಂದು ಆರ್ ಅಶೋಕ್ ಕೂಡ ಪ್ರಯತ್ನ ನಡೆಸಿದರೆ, ಯುವಕರ ಕೋಟಾದಡಿ ಸಿಟಿ.ರವಿ, ಸುನೀಲ್ ಕುಮಾರ್ ಪ್ರಯತ್ನ ಮಾಡುತ್ತಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಬಿಜೆಪಿ ಹಿಡಿತಕ್ಕಾಗಿ ಬಿ.ಎಲ್. ಸಂತೋಷ್ ತೆರೆಮರೆಯ ಯತ್ನ ನಡೆಸಿದ್ದಾರೆ. ಆದರೆ, ಅಧ್ಯಕ್ಷ ಹುದ್ದೆ ತಮ್ಮವರಿಗೆ ಇರಲಿ ಎಂದು ಬಿಎಸ್​ವೈ ಯೋಚಿಸಿದ್ದು, ಅದರಂತೆ ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿ, ಗೋವಿಂದ ಕಾರಜೋಳ ಪರ ಒಲವು ಹೊಂದಿದ್ದಾರೆ.

ಅಧ್ಯಕ್ಷ ಹುದ್ದೆ ವಿಚಾರ ಗುಟ್ಟನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಅಮಿತ್ ಶಾ ಬಿಟ್ಟುಕೊಟ್ಟಿಲ್ಲ. ಬಿಎಸ್​ವೈ ಬದಲಾವಣೆ ಖಚಿತ ಎಂದಷ್ಟೇ ಸುಳಿವು ನೀಡಲಾಗಿದ್ದು,  ಯಾರನ್ನು ಪಟ್ಟದ ಮೇಲೆ ಕೂರಿಸುತ್ತಾರೆ ಎಂಬ ಸುಳಿವನ್ನು ನೀಡಿಲ್ಲ. ಜಾತಿ ಆಧಾರ, ಮತ ಬ್ಯಾಂಕ್, ಸಂಘಟನಾ ಚತುರತೆ, ಯುವಕರು, ಹೊಸಮುಖ, ಪಕ್ಷನಿಷ್ಠೆ ಯಾವುದರ ಆಧಾರ ಮೇಲೆ ಶಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ ಎಂಬುದು ರಹಸ್ಯವಾಗಿಯೇ ಉಳಿದಿದೆ.

ಬಿಜೆಪಿ ಹಾಲಿ ಅಧ್ಯಕ್ಷರ ಅವಧಿ ಏಪ್ರಿಲ್ 5 ಕ್ಕೆ ಅಂತ್ಯವಾಗಿದೆ. ಲೋಕಸಭಾ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿಗೆ ನೂತನ ಸಾರಥಿ ನೇಮಕವಾಗುವ ಸಾಧ್ಯತೆ ಇದೆ.  ಬಿ‌.ಎಸ್.ಯಡಿಯೂರಪ್ಪ ಅವರಿಂದ ತೆರವಾಗುವ ಅಧ್ಯಕ್ಷ ಸ್ಥಾನದ ಮೇಲೆ ಸಾಲು ಸಾಲು ನಾಯಕರ ಕಣ್ಣು ಬಿದ್ದಿದ್ದು, ಒಕ್ಕಲಿಗ, ವೀರಶೈವ-ಲಿಂಗಾಯತ, ದಲಿತ, ಬ್ರಾಹ್ಮಣ, ಒಬಿಸಿ ಸೇರಿದಂತೆ ಎಲ್ಲಾ ಸಮುದಾಯದ ಹಿರಿಯ ನಾಯಕರು ಅಧ್ಯಕ್ಷ ಗಾದಿಗಾಗಿ ಪ್ರಯತ್ನ ನಡೆಸಿದ್ದಾರೆ.

ಇದನ್ನು ಓದಿ: ಒಂದೂವರೆ ಲಕ್ಷ ಅಂತರದಲ್ಲಿ ರಾಘವೇಂದ್ರ ಗೆಲ್ಲಲಿದ್ದಾರೆ, ಖರ್ಗೆಗೆ ಸೋಲು ಖಚಿತ; ಮತದಾನ ಮಾಡಿ ಬಿಎಸ್​ವೈ ಭವಿಷ್ಯ

ಒಕ್ಕಲಿಗ ಸಮುದಾಯದಿಂದ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಹೆಸರು ಕೇಳಿಬಂದಿದ್ದರೆ, ದಲಿತ ಸಮುದಾಯದಿಂದ ಅರವಿಂದ ಲಿಂಬಾವಳಿ, ರವಿಕುಮಾರ್, ಗೋವಿಂದ ಕಾರಜೋಳ, ವೀರಶೈವ-ಲಿಂಗಾಯತ ಸಮುದಾಯದಿಂದ ಜಗದೀಶ್ ಶೆಟ್ಟರ್, ಶಿವಕುಮಾರ್ ಉದಾಸಿ ಹಾಗೂ ಬ್ರಾಹ್ಮಣ ಸಮುದಾಯದಿಂದ ಸುರೇಶ್‌ಕುಮಾರ್,‌ ಬಿ.ಎಲ್. ಸಂತೋಷ್ ಹೆಸರು ಕೇಳಿಬಂದಿದೆ. ಹಾಗೆಯೇ ಒಬಿಸಿ ಸಮುದಾಯದಿಂದ ಕೆ.ಎಸ್. ಈಶ್ವರಪ್ಪ, ಸುನೀಲ್ ಕುಮಾರ್ ಹೆಸರು ಚಾಲ್ತಿಯಲ್ಲಿವೆ. ಇನ್ನು ಡಿವಿ ಸದಾನಂದಗೌಡ ಒಂದು ವೇಳೆ ಬೆಂಗಳೂರು ಉತ್ತರದಿಂದ ಸೋತರೆ ಅಧ್ಯಕ್ಷ ಪಟ್ಟದತ್ತ ಕಣ್ಣಾಯಿಸೋ ಸಾಧ್ಯತೆ ಇದೆ.

    Loading...

  • ಚಿದಾನಂದ ಪಟೇಲ್​


 

First published:April 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...