ಸಿದ್ದರಾಮಯ್ಯ ಕೂಡಲೇ ಶ್ರೀರಾಮುಲು ಬಳಿ ಕ್ಷಮೆ ಕೇಳಬೇಕು - ಯಡಿಯೂರಪ್ಪ ಒತ್ತಾಯ

G Hareeshkumar | news18
Updated:October 24, 2018, 5:41 PM IST
ಸಿದ್ದರಾಮಯ್ಯ ಕೂಡಲೇ ಶ್ರೀರಾಮುಲು ಬಳಿ ಕ್ಷಮೆ ಕೇಳಬೇಕು - ಯಡಿಯೂರಪ್ಪ ಒತ್ತಾಯ
ಬಿ.ಎಸ್​. ಯಡಿಯೂರಪ್ಪ ಅವರ ಸಾಂದರ್ಭಿಕ ಚಿತ್ರ
  • Advertorial
  • Last Updated: October 24, 2018, 5:41 PM IST
  • Share this:
- ಪರಶುರಾಮ್ ತಹಶೀಲ್ದಾರ್, ನ್ಯೂಸ್ 18 ಕನ್ನಡ

ಹುಬ್ಬಳ್ಳಿ ( ಅ.24) :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕ ಶ್ರೀರಾಮುಲು ಬಳಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಶಾಸಕ ಶ್ರೀರಾಮುಲು ಅವರನ್ನು 420 ಎಂದು ಕರೆಯುವ ಮೂಲಕ ವಾಲ್ಮೀಕಿ ಸಮುದಾಯವನ್ನು ಅವಮಾನಿಸಲಾಗಿದೆ ಎಂದಿದ್ದಾರೆ. ಸಿದ್ದರಾಮಯ್ಯ ಚುನಾವಣಾ ಪ್ರಚಾರದ ಭರಾಟೆಯಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ. ಈ ತರಹದ ಮಾತುಗಳು ಅವರ ಘನತೆಗೆ ತಕ್ಕದ್ದಲ್ಲ. ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನು ಓದಿ : ಅಪ್ಪ-ಮಕ್ಕಳು ದ್ರೋಹ, ಚಾಮುಂಡೇಶ್ವರಿ ಸೋಲನ್ನು ಮರೆಯಬೇಡಿ; ಸಿದ್ದರಾಮಯ್ಯಗೆ ಬಿಎಸ್​ವೈ ಕಿವಿಮಾತು

ಬಳ್ಳಾರಿ, ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಈಗಾಗಲೇ ಗೆದ್ದಿದ್ದೇವೆ. ಹೆಚ್ಚು ಅಂತರದ ಗೆಲುವಿಗೆ ಪ್ರಯತ್ನ ನಡೆದಿದೆ. ಆರೋಪ- ಪ್ರತ್ಯಾರೋಪಗಳಿಗೆ ಜನ ಮುಂದಿನ ತಿಂಗಳ 5ರಂದು ಉತ್ತರಿಸಲಿದ್ದಾರೆ. ಮಂಡ್ಯ ಪ್ರಚಾರದ ವೇಳೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಚುನಾವಣೆಯ ಅಂತಿಮ ತೀರ್ಪು ಮತದಾರನದ್ದು. ಕುಮಾರಸ್ವಾಮಿ  ಮತ್ತವರ ವಿತ್ರಪಕ್ಷಗಳು ತಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರೆಂದು ಸ್ಪಷ್ಟಪಡಿಸಲಿ ಎಂದರು.

ಪ್ರಧಾನಿ ಅಭ್ಯರ್ಥಿ ಬಗ್ಗೆ ಅವರಲ್ಲೇ ಗೊಂದಲವಿದೆ. ಕೆಲವರು ರಾಹುಲ್ ಗಾಂಧಿ ಪ್ರಧಾನಿ ಅಂದುಕೊಂದರೆ ಇನ್ನೂ ಕೆಲವರು ಪಿ. ಚಿದಂಬರಂ ಹೆಸರು ಹೇಳುತ್ತಿದ್ದಾರೆ. ಎಲ್ಲ ಸರ್ವೆಗಳಲ್ಲೂ ನರೇಂದ್ರ ಮೋದಿಯವರು ಮುಂದಿನ ಪ್ರಧಾನಿ ಅಂತ ವರದಿ ಬಂದಿರುವುದು ಕೇಂದ್ರ ಸರ್ಕಾರದ ಆಡಳಿತಕ್ಕೆ ಸಿಕ್ಕಿರುವ ಜನಮನ್ನಣೆ ಎಂದು ಬಿ.ಎಸ್. ಯಡಿಯೂರಪ್ಪ ವ್ಯಾಖ್ಯಾನಿಸಿದ್ದಾರೆ.

ಇದನ್ನು ಓದಿ : ಹೆಸರೆ ನನ್ನ ಶಕ್ತಿ, ನಾಮ ಬಲದಿಂದಲೇ ಗೆಲ್ಲುವ ವಿಶ್ವಾಸವಿದೆ; ಡಾ. ಸಿದ್ದರಾಮಯ್ಯ

 
First published:October 24, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ