ಕುಮಟಳ್ಳಿ ಸಿಟ್ಟಿನಲ್ಲಿ ನ್ಯಾಯವಿದೆ, ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಬಿಎಸ್ವೈ ವಚನ ಭ್ರಷ್ಟರಾಗುತ್ತಾರೆ; ಯತ್ನಾಳ್
ಬಿ.ಎಸ್. ಯಡಿಯೂರಪ್ಪ ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ವಚನ ಭ್ರಷ್ಟ ಎಂದು ಬೈಯ್ಯುತ್ತಿದ್ದರು. ಆದರೆ, ತುಂಬು ವೇದಿಕೆಯಲ್ಲಿ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಹೇಳಿಕೆ ನೀಡಿರುವ ಸಿಎಂ ತಾವು ಕೊಟ್ಟ ಮಾತಿಗೆ ತಪ್ಪಿದರೆ, ವಚನ ಭ್ರಷ್ಟ ಎಂಬ ಅಪವಾದ ಅವರಿಗೆ ಅಂಟಿಕೊಳ್ಳುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.
news18-kannada Updated:February 11, 2020, 2:49 PM IST

ಬಸನಗೌಡ ಪಾಟೀಲ್ ಯತ್ನಾಳ
- News18 Kannada
- Last Updated: February 11, 2020, 2:49 PM IST
ವಿಜಾಪುರ (ಫೆಬ್ರವರಿ 11); ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡುವ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮಹೇಶ್ ಕುಮಟಳ್ಳಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಆದರೆ, ಕೊಟ್ಟ ಮಾತಿನಂತೆ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ವಿಫಲವಾದ ಬಿ.ಎಸ್. ಯಡಿಯೂರಪ್ಪ ಎಂಎಸ್ಐಎಲ್ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದ್ದರು. ಆದರೆ, ಈ ಸ್ಥಾನವನ್ನು ಕುಮಟಳ್ಳಿ ನಿರಾಕರಿಸಿದ್ದಾರೆ.
ಈ ಕುರಿತಂತೆ ಇಂದು ವಿಜಯಪುರದಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ಎಂಎಸ್ಐಎಲ್ ಅಧ್ಯಕ್ಷ ಸ್ಥಾನ ಬೇಡ ಎಂಬ ಮಹೇಶ್ ಕುಮಟಳ್ಳಿ ನಿರ್ಧಾರ ಸರಿಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ ಕುಮಟಳ್ಳಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲದಿದ್ದರೆ ಅವರು ವಚನ ಭ್ರಷ್ಟ ಎನಿಸಿಕೊಳ್ಳುತ್ತಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದುವರೆದು, "ಬಿ.ಎಸ್. ಯಡಿಯೂರಪ್ಪ ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ವಚನ ಭ್ರಷ್ಟ ಎಂದು ಬೈಯ್ಯುತ್ತಿದ್ದರು. ಆದರೆ, ತುಂಬು ವೇದಿಕೆಯಲ್ಲಿ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಹೇಳಿಕೆ ನೀಡಿರುವ ಸಿಎಂ ತಾವು ಕೊಟ್ಟ ಮಾತಿಗೆ ತಪ್ಪಿದರೆ, ವಚನ ಭ್ರಷ್ಟ ಎಂಬ ಅಪವಾದ ಅವರಿಗೆ ಅಂಟಿಕೊಳ್ಳುತ್ತದೆ. ಪಾಪ ಕುಡಿಯದ ಕುಮಟಳ್ಳಿ ಎಂಎಸ್ಪಿಎಲ್ ಇಟ್ಕೋಂಡು ಏನ್ ಮಾಡ್ಬೇಕು? ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು" ಎಂದು ಯತ್ನಾಳ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : Delhi Election Results; ದೆಹಲಿಯಲ್ಲಿ ಕೇಜ್ರಿವಾಲ್ ಗೆಲುವಿನ ಆರ್ಭಟ, ಬಿಜೆಪಿ-ಕಾಂಗ್ರೆಸ್ ಧೂಳೀಪಟ; ಮೂರನೇ ಬಾರಿ ಅಧಿಕಾರದ ಗದ್ದುಗೆಗೆ ಆಮ್ ಆದ್ಮಿ
ಈ ಕುರಿತಂತೆ ಇಂದು ವಿಜಯಪುರದಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ಎಂಎಸ್ಐಎಲ್ ಅಧ್ಯಕ್ಷ ಸ್ಥಾನ ಬೇಡ ಎಂಬ ಮಹೇಶ್ ಕುಮಟಳ್ಳಿ ನಿರ್ಧಾರ ಸರಿಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ ಕುಮಟಳ್ಳಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲದಿದ್ದರೆ ಅವರು ವಚನ ಭ್ರಷ್ಟ ಎನಿಸಿಕೊಳ್ಳುತ್ತಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : Delhi Election Results; ದೆಹಲಿಯಲ್ಲಿ ಕೇಜ್ರಿವಾಲ್ ಗೆಲುವಿನ ಆರ್ಭಟ, ಬಿಜೆಪಿ-ಕಾಂಗ್ರೆಸ್ ಧೂಳೀಪಟ; ಮೂರನೇ ಬಾರಿ ಅಧಿಕಾರದ ಗದ್ದುಗೆಗೆ ಆಮ್ ಆದ್ಮಿ