HOME » NEWS » State » BSY IS WEAK CM HE DONT HAVE GUTS TO GET RELIEF FUND FROM CENTRAL SAYS SIDDARAMAIAH HK

ಯಡಿಯೂರಪ್ಪ ಅತ್ಯಂತ ದುರ್ಬಲ ಸಿಎಂ - ಕೇಂದ್ರದ ಬಳಿ ಹಣ ಕೇಳುವ ತಾಕತ್ತಿಲ್ಲ ; ಸಿದ್ಧರಾಮಯ್ಯ ಕಿಡಿ

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಹಣ ಸಹ ಬಂದಿಲ್ಲ. ಅವರ ಬಳಿ ಶಾಸಕರಿಗೆ ಅನುದಾನ ಕೊಡಲೂ ಹಣವಿಲ್ಲ. ಕೇವಲ ಒಂದು ಕಂತು ಮಾತ್ರ ಬಿಡುಗಡೆ ಮಾಡಿದ್ದು, ಮೂರು ಕಂತು ಬಾಕಿಯೇ ಇವೆ.

news18-kannada
Updated:February 7, 2020, 3:58 PM IST
ಯಡಿಯೂರಪ್ಪ ಅತ್ಯಂತ ದುರ್ಬಲ ಸಿಎಂ - ಕೇಂದ್ರದ ಬಳಿ ಹಣ ಕೇಳುವ ತಾಕತ್ತಿಲ್ಲ ; ಸಿದ್ಧರಾಮಯ್ಯ ಕಿಡಿ
ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ
  • Share this:
 ಕಲಬುರ್ಗಿ(ಫೆ.07) : ಬಿ ಎಸ್ ಯಡಿಯೂರಪ್ಪ ಅತ್ಯಂತ ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ನೆರೆಯಿಂದ ಇಷ್ಟು ಹಾನಿಯಾದರೂ ಯಾವುದೇ ಪರಿಹಾರ ತರಲಾಗಲಿಲ್ಲ. ಕೇಂದ್ರದ ಬಳಿ ಹೋಗಿ ಹಣ ಕೇಳು ಧೈರ್ಯವನ್ನು ಮಾಡುತ್ತಿಲ್ಲ ಎಂದು ಬಿಎಸ್ ವೈ ವಿರುದ್ದ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.  

85ನೇ  ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರಿದ್ದರೂ ಕೇಂದ್ರದಿಂದ ಹಣ ತರುವ ಪ್ರಯತ್ನ ಮಾಡಲಿಲ್ಲ. ಪ್ರವಾಹ ಸಂತ್ರಸ್ಥರಿಗೆ ಯಾವುದೇ ಪರಿಹಾರ ಕೊಡಲಾಗಿಲ್ಲ. ಮುಂದಿನ ತಿಂಗಳ 5 ರಂದು ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ. ಆದರೆ ತೆರಿಗೆ ಸಂಗ್ರಹ ಸರಿಯಾಗಿ ಆಗಿಲ್ಲ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಹಣ ಸಹ ಬಂದಿಲ್ಲ. ಅವರ ಬಳಿ ಶಾಸಕರಿಗೆ ಅನುದಾನ ಕೊಡಲೂ ಹಣವಿಲ್ಲ. ಕೇವಲ ಒಂದು ಕಂತು ಮಾತ್ರ ಬಿಡುಗಡೆ ಮಾಡಿದ್ದು, ಮೂರು ಕಂತು ಬಾಕಿಯೇ ಇವೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಬಜೆಟ್ ಮಂಡಿಸುತ್ತಿದ್ದಾರೆ. ರಾಜ್ಯ ಇದುವರೆಗೂ ಇಂತಹ ದುರ್ಬಲ ಸಿಎಂ ಅವರನ್ನು ನಾನು ಕಂಡಿರಲಿಲ್ಲ ಎಂದು ಹೇಳಿದರು.

ನಮ್ಮ ಪಕ್ಷ ಬಿಟ್ಟು ಹೋಗಿ ಸಚಿವರಾದವರು ನಮ್ಮ ಸ್ನೇಹಿತರಲ್ಲ. ಅವರು ನಮ್ಮ ಸ್ನೇಹತರಾಗಿದ್ದರೇ  ಪಕ್ಷವನ್ನು ಬಿಡುತ್ತಿರಲಿಲ್ಲ.  ನಮ್ಮ ಪಕ್ಷದಲ್ಲಿ ನಾಟಕ ಮಾಡಿಕೊಂಡಿದ್ದರು. ಆತ್ಮೀಯರ ರೀತಿಯಲ್ಲಿ ನಟನೆ ಮಾಡುತ್ತಿದ್ದರು. ಈಗ ಅವರ ನಿಜ ಬಣ್ಣ ಬಯಲಾಗಿದೆ. ಅವರು ಚುನಾವಣೆಯಲ್ಲಿ ಗೆದ್ದು ಸಚಿವರಾಗಿರಬಹುದು. ಆದರೆ ಅವರೆಲ್ಲರು ಈಗಲೂ ಪಕ್ಷಾಂತರಿಗಳು ಎಂದು ಕಾಂಗ್ರೆಸ್  ತೊರೆದು ಬಿಜೆಪಿ ಸೇರ್ಪಡೆಯಾಗಿ ಸಚಿವರಾದವರ ವಿರುದ್ಧ ಸಿದ್ಧರಾಮಯ್ಯ ಕಿಡಿಕಾರಿದರು.

ಬಿಜೆಪಿ ಸರ್ಕಾರ ಪತನ ಖಚಿತ

ಅವರ ಭಾರದಿಂದ ಅವರೇ ಕುಸಿಯುತ್ತಾರೆ. ಪರೋಕ್ಷವಾಗಿ ಬಿಜೆಪಿ ಸರ್ಕಾರದ ಪತನದ ಭವಿಷ್ಯ ನುಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ. ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣವಿದೆ. ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಹಲವು ಶಾಸಕರಿಗೆ ಅಸಮಾಧಾನವಿದೆ. ಯಾವಾಗ ಸ್ಫೋಟವಾಗುತ್ತೋ ಗೊತ್ತಿಲ್ಲ. ಯಾವಾಗ ಸರ್ಕಾರ ಪತನವಾಗುತ್ತೋ ಗೊತ್ತಿಲ್ಲ ಎಂದರು.

ಸಿದ್ಧರಾಮಯ್ಯ ಸರ್ಟಿಫಿಕೇಟ್ ಬೇಕಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗಬೇಕಂದ್ರೆ ಜನರ ಆಶೀರ್ವಾದ ಸಿಗಬೇಕಲ್ವಾ ಎಂದು ಹೇಳಿದ್ದೇನೆ. ಯಾರೇ ಸಿಎಂ ಆಗಬೇಕಂದ್ರೂ ಜನರ ಆಶೀರ್ವಾದ ಬೇಕು. ಕುಮಾರಸ್ವಾಮಿಗೆ ನಾನೇಕೆ ಸರ್ಟಿಫಿಕೇಟ್ ಕೊಡಲಿಸಿದ್ಧರಾಮಯ್ಯ ಸಿಎಂ ಆದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 80 ಸ್ಥಾನಕ್ಕೆ ಇಳೀತು ಅಂತಾರೆ. ಆದ್ರೆ ಅವರು ಹಿಂದೆ ಮುಖ್ಯಮಂತ್ರಿಯಾದ ನಂತರ ಚುನಾವಣೆಯಲ್ಲಿ ಎಷ್ಟು ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಕುಮಾರಸ್ವಾಮಿ ವಿರುದ್ಧ ಸಿದ್ಧರಾಮಯ್ಯ ಕಿಡಿ ಕಾರಿದರು.

ಸ್ಥಳೀಯರಿಗೆ ಶೇ.75 ಉದ್ಯೋಗ ಮೀಸಲಾತಿಗೆ ಸ್ವಾಗತ

ಸ್ಥಳೀಯರಿಗೆ ಶೇ.75 ರಷ್ಟು ಉದ್ಯೋಗ ಮೀಸಲಾತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರೋಜಿನಿ ಮಹಿಷಿ ವರದಿ ಪ್ರಕಾರ ಶೇ.75 ರಷ್ಟು ಮೀಸಲಾತಿ ನೀಡಬೇಕೆಂದಿದೆ. ರಾಜ್ಯ ಸರ್ಕಾರ ಮೀಸಲಾತಿ ಜಾರಿಗೆ ತರುತ್ತಿರೋದು ತುಂಬಾ ಸಂತೋಷದ ವಿಚಾರವಾಗಿದೆ. ಆದರೆ, ಕಡ್ಡಾಯವಾಗಿ ಅದನ್ನು ಜಾರಿಗೆ ತರಬೇಕು ಎಂದರು.
First published: February 7, 2020, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories