HOME » NEWS » State » BSY GOVERNMENT INTRODUCES 8 BILLS AT ASSEMBLY SESSION AMIDST UPROAR BY OPPOSITION SRHB SNVS

ವಿಧಾನಸಭೆಯಲ್ಲಿ ಸೋಮವಾರ ಗದ್ದಲದ ನಡುವೆ ಎಂಟು ವಿಧೇಯಕಗಳ ಮಂಡನೆ

ಗದ್ದಲದ ನಡುವೆಯೇ ಪ್ರಾರಂಭಗೊಂಡ ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪಗಳು ಗದ್ದಲದಲ್ಲೇ ಅಂತ್ಯಗೊಂಡವು. ಯತ್ನಾಳ್ ಹೇಳಿಕೆ ಇಟ್ಟುಕೊಂಡು ಚರ್ಚೆ ಮಾಡಿ ಸರ್ಕಾರವನ್ನು ತಿವಿಯುವ ವಿಪಕ್ಷಗಳ ಕೆಲಸಕ್ಕೆ ಸರ್ಕಾರ ಅವಕಾಶ ನೀಡಲಿಲ್ಲ.

news18-kannada
Updated:March 2, 2020, 6:44 PM IST
ವಿಧಾನಸಭೆಯಲ್ಲಿ ಸೋಮವಾರ ಗದ್ದಲದ ನಡುವೆ ಎಂಟು ವಿಧೇಯಕಗಳ ಮಂಡನೆ
ವಿಧಾನ ಪರಿಷತ್ ಕಲಾಪ
  • Share this:
ಬೆಂಗಳೂರು(ಮಾ. 02): ಯಡಿಯೂರಪ್ಪ ಸರ್ಕಾರದ ಮೊದಲ ಬಜೆಟ್ ಅಧಿವೇಶನದಲ್ಲಿ ಸೋಮವಾರ ಎಂಟು ವಿಧೇಯಕಗಳು ಮಂಡನೆಯಾಗಿ ಪಾಸ್ ಆಗಿವೆ. ವಿಪಕ್ಷಗಳ ನಿರಂತರ ಗದ್ದಲದ ಮಧ್ಯೆ ಮಂಡನೆಯಾದ ವಿಧೇಯಕಗಳಿಗೆ ಅನುಮೋದನೆ ಸಿಕ್ಕಿದೆ. ಭೂಸುಧಾರಣೆಗಳ ತಿದ್ದುಪಡಿ, ರಾಜ್ಯ ವಿಶ್ವ ವಿದ್ಯಾಲಯಗಳ ತಿದ್ದುಪಡಿ ವಿಧೇಯಕಗಳು ಇದರಲ್ಲಿ ಒಳಗೊಂಡಿವೆ.

ಮಂಡನೆಯಾದ ವಿಧೇಯಕಗಳು:

1) ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ
2) 2020 ನೇ ಸಾಲಿನ ಕರ್ನಾಟಕ ಪೌರ ಸೇವೆಗಳ ತಿದ್ದುಪಡಿ ಕಾಯ್ದೆ
3) ಕರ್ನಾಟಕ ಬಹಿರಂಗ ಸ್ಥಳಗಳ ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ ತಿದ್ದುಪಡಿ ವಿಧೇಯಕ
4) ಕರ್ನಾಟಕ ರೇಸ್ ಕೋರ್ಸ್​ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕ
5) ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ6) ರಾಜ್ಯ ವಿಶ್ವ ವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕ
7) ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ
8) ರೇಸ್ ಕೋರ್ಸ್ ಪರವಾನಿಗೆ ನೀಡುವ ತಿದ್ದುಪಡಿ ವಿಧೇಯಕ

ಇದನ್ನೂ ಓದಿ: ಬಿಜೆಪಿಗೆ ಚಿಂತಕರು ಬೇಕಿಲ್ಲ; ಹಂತಕರ ಪಡೆ ಬೇಕಿದೆ: ಕಮ್ಯೂನಿಸ್ಟ್ ಮುಖಂಡ ಸಿದ್ಧನಗೌಡ ಪಾಟೀಲ ಕಿಡಿ

ಇದೇ ವೇಳೆ, ವಿಧಾನಪರಿಷತ್​ನಲ್ಲಿ ಬಸನಗೌಡ ಯತ್ನಾಳ್ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ನಡೆಸಿದವು. ಪರಿಷತ್ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳ ಸದಸ್ಯರು ಈ ವಿಚಾರ ಪ್ರಸ್ತಾಪಿಸಿ ಚರ್ಚೆ ನಡೆಸಲು ಮುಂದಾದವು. ಆದರೆ, ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಇದಕ್ಕೆ ಅವಕಾಶ ನೀಡಲಿಲ್ಲ. ಮೊದಲು ಕಲಾಪ ನಡೆಯಲಿ, ಆ ಮೇಲೆ ಈ ಬಗ್ಗೆ ಚರ್ಚೆ ಮಾಡಿದರಾಯಿತು ಎಂದ ಸಭಾನಾಯಕರ ಮಾತನ್ನು ಒಪ್ಪದ ವಿಪಕ್ಷಗಳು ತಮ್ಮ ಗದ್ದಲ ಮುಂದುವರಿಸಿದವು.

ವಿಧಾನಸಭೆಯಲ್ಲೂ ಇದೇ ರೀತಿಯಲ್ಲಿ ಗದ್ದಲದ ವಾತಾವರಣ ಮನೆ ಮಾಡಿತು. ಸಿದ್ದರಾಮಯ್ಯ ಆದಿಯಾಗಿ ವಿಪಕ್ಷಗಳ ಮುಖಂಡರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಯತ್ನಾಳ್ ಹೇಳಿಕೆ ಬಗ್ಗೆ ಚರ್ಚೆ ನಡೆಸುವ ಮುನ್ನ ಮೊದಲು ನೋಟೀಸ್ ಕೊಡಿ ಎಂದು ಸಭಾಧ್ಯಕ್ಷ ಕಾಗೇರಿ ಮಾಡಿಕೊಂಡ ಮನವಿಯನ್ನು ಪ್ರತಿಪಕ್ಷಗಳ ನಾಯಕರು ಒಪ್ಪದಿದ್ದರಿಂದ ಎರಡೂ ಕಡೆಯಿಂದ ಮಾತಿನ ಚಕಮಕಿ ನಡೆದವು. ಸಭಾದ್ಯಕ್ಷನಾದ ನನ್ನ ಮಾತನ್ನ ಕೇಳುತ್ತಿಲ್ಲ ಎಂದು ಸ್ಪೀಕರ್ ಕಾಗೇರಿ ಬೇಸರ ಮಾಡಿಕೊಂಡರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: March 2, 2020, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading