ಅತಿವೃಷ್ಟಿಯಿಂದ ರಾಜ್ಯಕ್ಕೆ ನಷ್ಟ; 4,000 ಕೋಟಿ ಪ್ಯಾಕೇಜ್ ಸೇರಿದಂತೆ ಕೇಂದ್ರಕ್ಕೆ ವಿವಿಧ ಬೇಡಿಕೆ ಮುಂದಿಟ್ಟ ಬಿಎಸ್​ವೈ ಸರ್ಕಾರ

ರಾಜ್ಯದ 12 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ 4 ಸಾವಿರ ಕೋಟಿ ರೂ ನಷ್ಟವಾಗಿದೆ. ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನ ಕೇಂದ್ರ ಸರ್ಕಾರದ ಮುಂದಿಡಲಾಗಿದೆ.

news18-kannada
Updated:August 10, 2020, 2:14 PM IST
ಅತಿವೃಷ್ಟಿಯಿಂದ ರಾಜ್ಯಕ್ಕೆ ನಷ್ಟ; 4,000 ಕೋಟಿ ಪ್ಯಾಕೇಜ್ ಸೇರಿದಂತೆ ಕೇಂದ್ರಕ್ಕೆ ವಿವಿಧ ಬೇಡಿಕೆ ಮುಂದಿಟ್ಟ ಬಿಎಸ್​ವೈ ಸರ್ಕಾರ
ಫೈಲ್ ಚಿತ್ರ
  • Share this:
ಬೆಂಗಳೂರು(ಆ. 10): ಅತಿವೃಷ್ಟಿಯಿಂದ ಬಾಧಿತವಾಗಿರುವ ರಾಜ್ಯಕ್ಕೆ 4 ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಿಸಬೇಕೆಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ಇಂದು ಪ್ರಧಾನಿ ಮೋದಿ ಜೊತೆ ನಡೆದ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ರಾಜ್ಯ ಸರ್ಕಾರ ತನ್ನ ರಾಜ್ಯದ 12 ಜಿಲ್ಲೆಗಳಲ್ಲಿನ ಅತಿವೃಷ್ಟಿ ಪರಿಸ್ಥಿತಿಯನ್ನು ವಿವರಿಸಿತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ವಿವಿಧ ಅಧಿಕಾರಿಗಳು ರಾಜ್ಯದ ಪರವಾಗಿ ಪಾಲ್ಗೊಂಡಿದ್ದ ಈ ಕಾನ್ಫೆರೆನ್ಸ್​ನಲ್ಲಿ ಕೇಂದ್ರ ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟರು.

ಅತಿವೃಷ್ಟಿಯಿಂದ ರಾಜ್ಯಕ್ಕೆ ಒಂದು ವಾರದಲ್ಲಿ ಆಗಿರುವ ನಷ್ಟ 4 ಸಾವಿರ ಕೋಟಿ ಎಂದು ಹೇಳಿರುವ ಸರ್ಕಾರ, ತತ್​ಕ್ಷಣವೇ ಪರಿಹಾರ ಕೊಡಬೇಕೆಂದು ಒತ್ತಾಯಿಸಿದೆ. ರಕ್ಷಣಾ ಕಾರ್ಯಗಳಿಗೆ ನಾಲ್ಕು ಎನ್​ಡಿಆರ್​ಎಫ್ ತಂಡಗಳನ್ನ ಕಳುಹಿಸಿಕೊಡಬೇಕು ಎಂದೂ ಕೇಳಿಕೊಂಡಿದೆ.

ರಾಜ್ಯ ಮುಂದಿಟ್ಟಿರುವ ಕೆಲ ಬೇಡಿಕೆಗಳು:
* ಅತಿವೃಷ್ಟಿಯಿಂದ ಬಾಧಿತವಾಗಿರುವ ರಾಜ್ಯಕ್ಕೆ 4 ಸಾವಿರ ಕೋಟಿ ರೂ ಪರಿಹಾರ ಪ್ಯಾಕೇಜ್ ತತ್​ಕ್ಷಣವೇ ಘೋಷಿಸಿ
* ರಾಜ್ಯಕ್ಕೆ ನಾಲ್ಕು ಎನ್​ಡಿಆರ್​ಎಫ್ ತಂಡ ಕಳುಹಿಸಿ
* ಕೃಷ್ಣಾ ಬೇಸಿನ್​ನಲ್ಲಿ ಆಗಿರುವ ಹಾನಿಯ ಅಧ್ಯಯನಕ್ಕೆ ಪ್ರತ್ಯೇಕ ತಂಡ ಕಳುಹಿಸಿ
* ಪಶ್ಚಿಮ ಘಟ್ಟಗಳಿಗೆ ಆಗಿರುವ ಹಾನಿ ಹಾಗೂ ಭೂಕುಸಿತಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತಂಡ ಕಳುಹಿಸಿ* ಮಳೆಹಾನಿಗೆ ಪ್ರತ್ಯೇಕ ಪ್ಯಾಕೇಜ್ ಕೊಡಿ

ಇದನ್ನೂ ಓದಿ: Mangalore Flood: ಬೆಳ್ತಂಗಡಿಯ ಮಹಾ ಪ್ರವಾಹಕ್ಕೆ ಒಂದು ವರ್ಷ; ಇನ್ನೂ ಹಸನಾಗಿಲ್ಲ ಸಂತ್ರಸ್ತರ ಬದುಕು

ಪ್ರಧಾನಿ ಮೋದಿ ಅವರು ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ಜೊತೆ ಇವತ್ತು ವಿಡಿಯೋ ಸಂವಾದ ನಡೆಸಿದರು. ಸಂವಾದದ ಬಳಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಂಚಿವ ಆರ್. ಅಶೋಕ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡರು.ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮೊಂದಿಗೆ 2 ಗಂಟೆ ಮಾತನಾಡಿದ್ದಾರೆ. ಇಲ್ಲಿಯ ವಸ್ತುಸ್ಥಿತಿಯನ್ನು ಗಮನಕ್ಕೆ ತಂದಿದ್ದೇವೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಆದ ಮಳೆಯ ಬಗ್ಗೆ ಮಾಹಿತಿ ಕೇಳಿದರು. ಆ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ. 18ರಷ್ಟು ಮಳೆಯಾಗಿದೆ. ಕೊಡಗಿನಲ್ಲಿ ಶೇ. 500ರಷ್ಟು ಹೆಚ್ಚು ಮಳೆಯಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹೆಚ್ಚು ಮಳೆಯಾಗಿದೆ. 56 ತಾಲೂಕಿನ 885 ಗ್ರಾಮಗಳಲ್ಲಿ ಪ್ರವಾಹವಾಗಿದೆ. 250 ಸೇತುವೆಗಳು ಹಾಳಾಗಿವೆ. 3 ಸಾವಿರ ಮನೆಗಳು ಹಾಳಾಗಿದೆ. 4 ಸಾವಿರ ಕೋಟಿ ರೂ ನಷ್ಟವಾಗಿರುವ ಪ್ರಾಥಮಿಕ ಅಂದಾಜು ಇದೆ ಎಂಬ ಮಾಹಿತಿಯನ್ನು ಪ್ರಧಾನಿಗೆ ತಿಳಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.
Published by: Vijayasarthy SN
First published: August 10, 2020, 1:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading