ಮೂರು ದಿನಕ್ಕೆ ಅಧಿವೇಶನ ಮುಗಿಸುವ ಸರ್ಕಾರದ ಪ್ರಸ್ತಾಪಕ್ಕೆ ವಿಪಕ್ಷಗಳ ನಕಾರ; 6 ದಿನ ಅಧಿವೇಶನ

ಕೊರೋನಾ ಹಿನ್ನೆಲೆಯಲ್ಲಿ ಮೂರು ದಿನಕ್ಕೆ ಅಧಿವೇಶನ ಸೀಮಿತಗೊಳಿಸಲು ಸರ್ಕಾರದ ಪ್ರಸ್ತಾಪಕ್ಕೆ ವಿಪಕ್ಷಗಳು ಅಸಮ್ಮತಿ ವ್ಯಕ್ತಪಡಿಸಿದ ಬಳಿಕ 6 ದಿನ ಕಾಲ ಅಧಿವೇಶನ ನಡೆಸಲು ಅಂತಿಮವಾಗಿ ನಿರ್ಧರಿಸಲಾಗಿದೆ.

ಸಾಂದರ್ಭಿಕ ಚಿತ್ರ (ರಾಜ್ಯ ಅಧಿವೇಶನ).

ಸಾಂದರ್ಭಿಕ ಚಿತ್ರ (ರಾಜ್ಯ ಅಧಿವೇಶನ).

  • Share this:
ಬೆಂಗಳೂರು(ಸೆ. 21): ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೂರು ದಿನಕ್ಕೆ ಅಧಿವೇಶನ ಮುಗಿಸುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ವಿಪಕ್ಷಗಳು ಒಪ್ಪಲಿಲ್ಲ. ವಿರೋಧ ಪಕ್ಷಗಳ ಬಿಗಿಪಟ್ಟಿಗೆ ಬಗ್ಗಿದ ಸರ್ಕಾರ ಆರು ದಿನಗಳ ಕಾಲ ಅಧಿವೇಶನ ನಡೆಸಲು ತೀರ್ಮಾನಿಸಿದೆ. ಅಂದರೆ ಶನಿವಾರದವರೆಗೂ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಇಂದು ವಿಧಾನಸೌಧದಲ್ಲಿ ನಡೆದ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಇದರ ತೀರ್ಮಾನ ಆಗಿದೆ. ಒಟ್ಟು 8 ದಿನಗಳ ಕಾಲ ಅಧಿವೇಶನ ನಡೆಯುವದೆಂದು ಮೊದಲು ನಿಶ್ಚಯವಾಗಿದ್ದು. ಆದರೆ, ಅನೇಕ ಸಚಿವರು ಮತ್ತು ಶಾಸಕರಿಗೆ ಕೊರೋನಾ ಸೋಂಕು ತಗುಲಿರುವುದರಿಂದ ಮೂರು ದಿನಕ್ಕೆ ಮಾತ್ರ ಸೀಮಿತಗೊಳಿಸಬೇಕೆಂದು ಬಿಎಸಿ ಸಭೆಯಲ್ಲಿ ಕೋರಿಕೊಂಡಿತು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದವು. ಬಳಿಕ ಭಾನುವಾರದವರೆಗಾದರೂ ಅಧಿವೇಶನ ನಡೆಸಬೇಕೆಂದು ವಿಪಕ್ಷ ನಾಯಕರು ಸಲಹೆ ನೀಡಿದರು. ಅಂತಿಮವಾಗಿ ಶನಿವಾರದರೆಗೆ ಅಧಿವೇಶನ ನಡೆಸಲು ಬಿಎಸಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ನಡೆದ ಈ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಎರಡು ಪಕ್ಷಗಳ ಮುಖ್ಯ ಸಚೇತಕರಾದ ಸುನೀಲ್ ಕುಮಾರ್ ಮತ್ತು ಅಜಯ್ ಸಿಂಗ್ ಅವರು ಭಾಗಿಯಾಗಿದ್ದರು. ಈ ವೇಳೆ, ಅಧಿವೇಶನ ಮೊಟಕುಗೊಳಿಸುವ ಸರ್ಕಾರದ ಪ್ರಸ್ತಾಪವನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ಮೂರು ದಿನಗಳಿಗೆ ಅಧಿವೇಶನ ಸೀಮಿತಗೊಳಿಸುವುದಿದ್ದರೆ ಬಿಲ್​ಗಳನ್ನ ಮಂಡನೆ ಮಾಡಲೇಬೇಡಿ ಎಂದು ಪಟ್ಟುಹಿಡಿದರು. ಕೊನೆಗೆ ವಿಪಕ್ಷಗಳ ನಾಯಕರ ಪಟ್ಟಿಗೆ ಸರ್ಕಾರ ಬಗ್ಗಿ 6 ದಿನ ಕಾಲ ಅಧಿವೇಶನ ಮುಂದುವರಿಸಲು ಒಪ್ಪಿಕೊಂಡಿತು.

ಇದನ್ನೂ ಓದಿ: Mangaluru: ಡ್ರಗ್ಸ್ ಸಾಗಾಟ ಪ್ರಕರಣ; ಡ್ಯಾನ್ಸರ್ ಕಿಶೋರ್ ಶೆಟ್ಟಿ 7 ದಿನ ಪೋಲೀಸ್ ವಶಕ್ಕೆ

ಸಂಸತ್​ನಲ್ಲಿ ಅಧಿವೇಶನ ಅವಧಿ ಕಡಿತ ಮಾಡಿದಂತೆ ರಾಜ್ಯದಲ್ಲೂ ಮೊಟಕುಗೊಳಿಸೋಣ ಎಂದು ಯಡಿಯೂರಪ್ಪ ಹೇಳಿದರು. ಅದಕ್ಕೆ ನಾವು ಒಪ್ಪಿಲ್ಲ. ಪ್ರಶ್ನೋತ್ತರ ಅವಧಿ ಬೇಕು. 40 ಬಿಲ್​ಗಳ ಮಂಡನೆ ಆಗುವುದಿದೆ. ಆ ಮಸೂದೆಗಳ ಬಗ್ಗೆ ಚರ್ಚೆ ಆಗಬೇಕು ಎಂದಿದ್ದೇವೆ ಎಂದು ಬಿಎಸಿ ಸಭೆಯ ಬಳಿಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
Published by:Vijayasarthy SN
First published: