ಶಾಸಕ ಸುಧಾಕರ್ ಮೇಲೆ ಕೈ ಮುಖಂಡರಿಂದ ಹಲ್ಲೆಗೆ ಯತ್ನ; ವಿರೋಧ ಪಕ್ಷದ ನಾಯಕ ಬಿಎಸ್​ವೈ ಆಕ್ರೋಶ

ಸುಧಾಕರ್ ಅವರ ಪತ್ನಿ ನನಗೆ ಕರೆ ಮಾಡಿ ತಮ್ಮ ಪತಿಗೆ ರಕ್ಷಣೆ ಕೊಡಿಸುವಂತೆ  ಕೇಳಿಕೊಂಡಿದ್ದಾರೆ. ಹಾಗಾಗಿ ಪೊಲೀಸರು ಸುಧಾಕರ್ ಅವರಿಗೆ ರಕ್ಷಣೆ ನೀಡಬೇಕು ಎಂದು  ಬಿಎಸ್​ವೈ ಆಗ್ರಹಿಸಿದರು.

G Hareeshkumar | news18
Updated:July 10, 2019, 7:56 PM IST
ಶಾಸಕ ಸುಧಾಕರ್ ಮೇಲೆ ಕೈ ಮುಖಂಡರಿಂದ ಹಲ್ಲೆಗೆ ಯತ್ನ; ವಿರೋಧ ಪಕ್ಷದ ನಾಯಕ ಬಿಎಸ್​ವೈ ಆಕ್ರೋಶ
ಬಿ ಎಸ್ ಯಡಿಯೂರಪ್ಪ
  • News18
  • Last Updated: July 10, 2019, 7:56 PM IST
  • Share this:
ಬೆಂಗಳೂರು (ಜುಲೈ 10) : ಶಾಸಕರಿಬ್ಬರು ರಾಜೀನಾಮೆ ಕೊಟ್ಟು ಬರುವಾಗ, ಕೆ.ಸುಧಾಕರ್​ನನ್ನು ಕಾಂಗ್ರೆಸ್ ನಾಯಕರು ತಡೆದು ಹಲ್ಲೆ ಮಾಡಿದ್ದಾರೆ. ಆನಂತರ ಜಾರ್ಜ್ ಕೊಠಡಿಯಲ್ಲಿ ಕೂಡಿ ಹಾಕಿ ಅವರ ಮೇಲೆ ಗೂಂಡಾಗಿರಿ ಮಾಡಲಾಗಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಆಕ್ರೋಶ ಹೊರಹಾಕಿದರು.

ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಸ್ಪೀಕರ್ ಕೂಡ ಇಷ್ಟೆಲ್ಲ ಮಾಡಿದ್ರೂ ಮನೆಗೆ ಹೋಗುತ್ತಾರೆ. ತಕ್ಷಣ ಸುಧಾಕರ್ ಅವರನ್ನು ಬಿಡಬೇಕು. ಅಧಿಕಾರ ಉಳಿಸಿಕೊಳ್ಳಲು ಈ ಗೂಂಡಾಗಿರಿ ಮಾಡದೇ ತಕ್ಷಣ ಮುಖ್ಯಮಂತ್ರಿ ರಾಜೀನಾಮೆ ‌ಕೊಡಬೇಕು.ಇದು ಪುನರಾವರ್ತನೆ ಆದ್ರೆ ಬಹುಶ ನಾವೂ ಇದಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಸುಧಾಕರ್ ಅವರ ಪತ್ನಿ ನನಗೆ ಕರೆ ಮಾಡಿ ತಮ್ಮ ಪತಿಗೆ ರಕ್ಷಣೆ ಕೊಡಿಸುವಂತೆ  ಕೇಳಿಕೊಂಡಿದ್ದಾರೆ. ಹಾಗಾಗಿ ಪೊಲೀಸರು ಸುಧಾಕರ್ ಅವರಿಗೆ ರಕ್ಷಣೆ ನೀಡಬೇಕು ಎಂದು  ಬಿಎಸ್​ವೈ ಆಗ್ರಹಿಸಿದರು.

ಮುಖ್ಯಮಂತ್ರಿ ಬಹುಮತ ಕಳೆದುಕೊಂಡ ತಕ್ಷಣ ಕುಮಾರಸ್ವಾಮಿ ರಾಜೀನಾಮೆ ಮಾಡಬೇಕಿತ್ತು. ಸುಧಾಕರ್ ಅವರ ರಕ್ಷಣೆ ಮಾಡಬೇಕು. ಶಾಸಕನನ್ನ ಮ್ಯಾನ್ ಹ್ಯಾಂಡಲ್ ಮಾಡಿರೋದು ಅಕ್ಷಮ್ಯ ಅಪರಾಧ. ಬೇರೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಗೂಂಡಾಗಿರಿ ಮಾಡಿದ್ರು. ಈಗ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡಿದ್ದರಿಂದ ಕಾಂಗ್ರೆಸ್ ಗೂಂಡಾಗಿರಿ ಮಾಡಿದೆ ಎಂದರು.

ಇದನ್ನೂ ಓದಿ : ಮುಂದುವರೆದ ಶಾಸಕರ ರಾಜೀನಾಮೆ ಪರ್ವ; ಎಂ.ಟಿ.ಜಿ ನಾಗರಾಜ್, ಡಾ. ಸುಧಾಕರ್ ರಾಜೀನಾಮೆ

ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧ ವಿಚಾರವಾಗಿ ಮಾತನಾಡಿದ ಅವರು,  ಇದು ಪ್ರಜಾಪ್ರಭುತ್ವದ ಕಗ್ಗೊಲೆ, ಅಕ್ಷಮ್ಯ ಅಪರಾಧ. ಇದು ಪುನರಾವರ್ತನೆ ಆದರೆ ನಾವೂ ಕೂಡಾ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದರು.

First published:July 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ