HOME » NEWS » State » BSY BUDGET 2020 HIGHLIGHTS 37780 CRORE RUPEES ANNOUNCED FOR WOMAN DEVELOPMENT GOOD NEWS FOR WOMEN ENTREPRENEURS KARNATAKA SCT

ಕರ್ನಾಟಕ ಬಜೆಟ್​ 2020: ಮಹಿಳಾ ಅಭಿವೃದ್ಧಿಗೆ 37,780 ಕೋಟಿ ಮೀಸಲು; ಮಹಿಳಾ ಉದ್ಯಮಿಗಳಿಗೆ 20 ಲಕ್ಷ ರೂ. ಬಡ್ಡಿರಹಿತ ಸಾಲ

Karnataka Budget 2020 News Updates: ಮಹಿಳಾ ಉದ್ಯಮಿಗಳಿಗೆ 20 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಬಿಬಿಎಂಪಿ ಜೊತೆ ಕೈಜೋಡಿಸಿ ವನಿತಾ ಪಾಸ್​ ವಿತರಿಸಲು 25 ಕೋಟಿ ರೂ. ಮೀಸಲಿಡಲಾಗಿದೆ.

Sushma Chakre | news18india
Updated:March 5, 2020, 12:53 PM IST
ಕರ್ನಾಟಕ ಬಜೆಟ್​ 2020: ಮಹಿಳಾ ಅಭಿವೃದ್ಧಿಗೆ 37,780 ಕೋಟಿ ಮೀಸಲು; ಮಹಿಳಾ ಉದ್ಯಮಿಗಳಿಗೆ 20 ಲಕ್ಷ ರೂ. ಬಡ್ಡಿರಹಿತ ಸಾಲ
ಬಿಎಸ್​ವೈ ಬಜೆಟ್ ಮಂಡನೆ
  • Share this:
ಬೆಂಗಳೂರು (ಮಾ. 5): 7ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಆಯವ್ಯಯ ಪಟ್ಟಿಯಲ್ಲಿ ಮಹಿಳೆಯರಿಗೆ ವಿಶೇಷವಾದ ಅನುದಾನವನ್ನು ಇಟ್ಟಿದ್ದಾರೆ. ಮಹಿಳೆಯರ ಅಭಿವೃದ್ಧಿಗೆ 37,780 ಕೋಟಿ ರೂ. ಮೀಸಲಿಟ್ಟಿರುವ ಸಿಎಂ ಯಡಿಯೂರಪ್ಪ ಮಹಿಳೆಯರಿಗೆ ಶೇ. 15.88ರಷ್ಟು ಅನುದಾನ ಘೋಷಿಸಿದ್ದಾರೆ.

ಬೆಂಗಳೂರಿಗೆ 75 ಹೊಸ ಹೊಯ್ಸಳ ವಾಹನಗಳನ್ನು ನೀಡಲಾಗುವುದು. ಮಹಿಳಾ ಸುರಕ್ಷತೆಗಾಗಿ ಪಿಂಕ್ ಹೊಯ್ಸಳ ವಾಹನವನ್ನು ನೀಡಲಾಗುವುದು. ಬೆಂಗಳೂರಿನ ಮಹಿಳೆಯರಿಗೆ ಸುರಕ್ಷತೆಗೆ ಪರಿಚಯಿಸಲಾಗಿರುವ ಸುರಕ್ಷಾ ಆ್ಯಪ್ ಅನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು. ಈ ಮೂಲಕ ರಾಜ್ಯದ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: Karnataka Budget 2020 Live: ಹುಸಿಯಾದ ರೈತರ ನಿರೀಕ್ಷೆ; ಬೆಳೆ ಸಾಲ ಮನ್ನಾ ಮಾಡದ ಬಿಎಸ್​ವೈ ಸರ್ಕಾರ

ಮಹಿಳಾ ಉದ್ದಿಮೆದಾರರಿಗೆ ಆರ್ಥಿಕ ಬಲ ತುಂಬುವ ಉದ್ದೇಶದಿಂದ ಮಹಿಳಾ ಉದ್ಯಮಿಗಳಿಗೆ 20 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಬಿಬಿಎಂಪಿ ಜೊತೆ ಕೈಜೋಡಿಸಿ ವನಿತಾ ಪಾಸ್​ ವಿತರಿಸಲು 25 ಕೋಟಿ ರೂ. ಮೀಸಲಿಡಲಾಗಿದೆ. ದೆಹಲಿ ಮಾದರಿಯಲ್ಲಿ ಬೆಂಗಳೂರಿನ ಮಹಿಳೆಯರಿಗೆ ವನಿತಾ ಪಾಸ್​ ವಿತರಿಸಲು ಬಿಎಸ್​ವೈ ಸರ್ಕಾರ ಮುಂದಾಗಿದೆ.

ಮಹಿಳಾ ಮೀನುಗಾರ ಸಬಲೀಕರಣದ ಬಗ್ಗೆಯೂ ಪ್ರಸ್ತಾಪಿಸಿರುವ ಸಿಎಂ ಯಡಿಯೂರಪ್ಪ, ಮಹಿಳಾ ಮೀನುಗಾರರಿಗೆ ಬೈಕ್ ವಿತರಿಸುವುದಾಗಿ ಘೋಷಿಸಿದ್ದಾರೆ. ಹಿನ್ನೀರು ಮೀನುಗಾರರಿಗೆ ನೆರವು ನೀಡಲಾಗುವುದು. 12.5 ಕೋಟಿ ರೂ. ವೆಚ್ಚದಲ್ಲಿ ಹೆಜಮಾಡಿಕೋಡಿಯಲ್ಲಿ ಬಂದರು ನಿರ್ಮಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಇದನ್ನೂ ಓದಿ: Karnataka Budget 2020: ಅಡಿಕೆ ಬೆಳೆಗಾರರ 2 ಲಕ್ಷದವರೆಗಿನ ಸಾಲಕ್ಕೆ ಶೇ. 5ರಷ್ಟು ಬಡ್ಡಿ ಮನ್ನಾ; ಬಿಎಸ್​ವೈ ಘೋಷಣೆ

ಮಕ್ಕಳಿಗಾಗಿಯೇ ವಿಶೇಷ ಯೋಜನೆಗಳನ್ನು ರೂಪಿಸಿರುವ ಬಿಎಸ್​ವೈ ಸರ್ಕಾರ, ಬಾಲಮಂದಿರಗಳಿಗೆ 7 ಕೋಟಿ ರೂ. ಮೀಸಲಿಟ್ಟಿದೆ. 7 ಹೊಸ ಬಾಲಮಂದಿರಗಳ ಸ್ಥಾಪನೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನೆರೆ ಪ್ರದೇಶದ ಅಂಗನವಾಡಿಗಳ ಮರು ನಿರ್ಮಾಣ, 500 ಅಂಧ ವಿದ್ಯಾರ್ಥಿಗಳಿಗೆ ವಿಶೇಷ ಕಿಟ್, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್ ನೀಡುವುದಾಗಿ ಬಜೆಟ್​ನಲ್ಲಿ ತಿಳಿಸಲಾಗಿದೆ.5 ಜಿಲ್ಲೆಗಳಲ್ಲಿ ತಾರಾಲಯಗಳ ಸ್ಥಾಪನೆ ಮಾಡಿ, ವಿಜ್ಞಾನ ಪ್ರತಿಭಾ ಶೋಧನೆ ಕಾರ್ಯಕ್ರಮ ನಡೆಸಲಾಗುವುದು. 500 ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣ ನೀಡಲಾಗುವುದು. ಇದಕ್ಕಾಗಿ ಮಾಸಿಕ 1 ಸಾವಿರ ಶಿಷ್ಯ ವೇತನ ನೀಡಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
Youtube Video
First published: March 5, 2020, 12:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories