Sindagi By Election: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಗೆ ಮುಸ್ಲಿಮರ ಮತ ಕೇಳಲು ನಾಚಿಕೆಯಾಗುವುದಿಲ್ಲವೆ? : ಶ್ರೀನಾಥ್ ಪೂಜಾರಿ ಕಿಡಿ

ಫೈಲ್​ ಫೋಟೊ

ಫೈಲ್​ ಫೋಟೊ

  • Share this:
    ಸಿಂದಗಿ, ಅ. 19 : ಸಿಂದಗಿಯಲ್ಲಿ (Sindagi By Election 2021) ಪಾಕ್ ಧ್ವಜ ಹಾರಿಸಿದ ಆರೋಪಿಗಳಿಗೆ ಜಾಮೀನು ನೀಡಲು ಸಹಕರಿಸಿದ ಹಾಗೂ ನೂತನ ಕ್ರೀಡಾಂಗಣದಲ್ಲಿರುವ ಮಸೀದಿಯನ್ನು ಇಂದಿನ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ರಮೇಶ ಭೂಸನೂರರವರು ತೆರವುಗೊಳಿಸುವಾಗ ಇಂದಿನ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಅಶೋಕ ಮನಗೂಳಿಯವರು (Sindagi By Election Congress Candidate Ashok Managuli) ಯಾವುದೇ ರೀತಿಯ ಪ್ರತಿಭಟನೆ ಮಾಡದೇ ಮೌನ ಸಮ್ಮತಿ ಸೂಚಿಸಿರುವುದು ಮನುವಾದಿ ಮನಸ್ಥಿತಿ ತೋರಿಸುತ್ತದೆ. ಪ್ರಸ್ತುತ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ ಮನಗೂಳಿ ಅವರಿಗೆ ಮುಸ್ಲಿಂ ಮತ ಕೇಳಲು ನಾಚಿಕೆಯಾಗುವುದಿಲ್ಲವೆ? ಎಂದು ಕಳೆದ ಲೋಕಸಭಾ ಬಿಎಸ್ಪಿ ಅಭ್ಯರ್ಥಿ ಆಗಿದ್ದ ನ್ಯಾಯವಾದಿ ಶ್ರೀನಾಥ್ ಪೂಜಾರಿ ಪ್ರಶ್ನಿಸಿದ್ದಾರೆ.

    ಪಟ್ಟಣದ ವೈಷ್ಣವಿ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಗರಡಿಯಲ್ಲಿ ಬೆಳೆದಿರುವ ಅಶೋಕ ಮನಗೂಳಿ ಅವರು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತಾರೆ ಎಂಬ ಭರವಸೆಯೇ ಸಿಂದಗಿ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರಿಗೆ ಇಲ್ಲದಂತಾಗಿದೆ. ಅದೇ ತೆರನಾಗಿ ಬಿಜೆಪಿ ಅಭ್ಯರ್ಥಿ ಸಹ ಗೋಮುಖ ವ್ಯಾಘ್ರವೇ ಸರಿ. ಅವರು ಸಹ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ.
    ಸಿಂದಗಿ ವಿಧಾನಸಭಾ ಕ್ಷೇತ್ರವನ್ನು (Sindagi Vidhan Sabha Constituency) ಹಿಂದುಳಿದ ವರ್ಗದವರಿಗೆ ನೀಡುವ ಸಂಪ್ರದಾಯವನ್ನು ಎಲ್ಲ ಪಕ್ಷದವರು ಪಾಲಿಸುತ್ತಾ ಬಂದಿದ್ದರು, ಕಾಂಗ್ರೆಸ್ ಸಹ ಕಳೆದ ಬಾರಿ ಹಿಂದುಳಿದ ವರ್ಗಕ್ಕೆ ಸೇರಿದ ಹಾಲುಮತ ಸಮುದಾಯಕ್ಕೆ ಟಿಕೇಟ್ ನೀಡಿತ್ತು, ಆದರೆ ಈ ಅವಕಾಶವನ್ನು ಹಿಂದುಳಿದ ವರ್ಗದವರಿಂದ ಕಸಿದುಕೊಂಡಿರುವ ಅಶೋಕ ಮನಗೂಳಿ ಹಿಂದುಳಿದ ವರ್ಗಗಳಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಅಶೋಕ ಮನಗೂಳಿ ಅವರಿಂದಾಗಿ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ಗಗನಕುಸುಮವಾಗಿದೆ:
    ಹಾಲುಮತ ಸಮುದಾಯಕ್ಕೆ ನೀಡಿದ ಟಿಕೇಟ್‌ನ್ನು ಈ ಬಾರಿ ಅಶೋಕ ಮನಗೂಳಿ ಕಸಿದುಕೊಂಡು ಹಾಲುಮತ ಸಮುದಾಯಕ್ಕೂ ಅನ್ಯಾಯ ಮಾಡಿದ್ದಾರೆ, ಈ ಚುನಾವಣೆಯಲ್ಲಿ ಹಾಲುಮತ ಸಮಾಜದ ಸಹೋದರರು ಈ ಚುನಾವಣೆಯಲ್ಲಿ ಅಶೋಕ ಮನಗೂಳಿ ಅವರಿಗೆ ತಕ್ಕಪಾಠ ಕಲಿಸುವ ಮೂಲಕ ಹಾಲುಮತ ಶಕ್ತಿ ಹಾಗೂ ಒಗ್ಗಟ್ಟು ಪ್ರದರ್ಶಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

    ಬಹುದಿನಗಳ ಕಾಲ ವಿಜಯಪುರ ಜಿಲ್ಲೆ ಪ್ರಮುಖ ರಾಜಕೀಯ ಶಕ್ತಿಯಾಗಿದ್ದ ಗಂಗಾಮತಸ್ಥ, ತಳವಾರ, ಕೋಳಿ, ಕಬ್ಬಲಿಗ ಎಂದು ಕರೆಯಿಸಿಕೊಳ್ಳುವ ಅತೀ ದೊಡ್ಡ ಸಮುದಾಯವನ್ನೂ ಸಹ ರಾಜಕೀಯವಾಗಿ ಪ್ರಾತಿನಿಧ್ಯ ದೊರಕಿಸದಂತೆ ಮಾಡುವ ಮೂಲಕ ಅಶೋಕ ಮನಗೂಳಿ ಗಂಗಾಮತಸ್ಥ ಸಮುದಾಯದ ಬಾಂಧವರಿಗೂ ದೊಡ್ಡ ಅನ್ಯಾಯ ಮಾಡಿದ್ದಾರೆ.

    ಹಿಂದುಳಿದ ವರ್ಗ, ಗಂಗಾಮತಸ್ಥ ಸಮುದಾಯಗಳಿಗೆ ಆಗಿರುವ ಅನ್ಯಾಯದ ಬಗ್ಗೆ ನಾನು ಹಾಗೂ ತಂಡ ಮನೆ-ಮನೆಗೂ ಹೋಗಿ ಈ ಬಗ್ಗೆ ಜಾಗೃತಿ ಮೂಡಿಸಿ, ಆಗಿರುವ ಅನ್ಯಾಯದ ವಿರುದ್ಧ ಮತ ಚಲಾಯಿಸುವಂತೆ ಕೈ ಮುಗಿದು ಬೇಡಿಕೊಳ್ಳುವೆ. ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯಾಗಿ ಚುನಾವಣಾ ಕಣದಲ್ಲಿರುವ ನಾಜೀಯಾ ಅಂಗಡಿ ಅವರನ್ನು ಬೆಂಬಲಿಸಿ ಎಂದು ಕೋರುವೆ, ಪಕ್ಷಕ್ಕಿಂತ ನಮಗೆ ಸಮುದಾಯ ಮುಖ್ಯ ಎಂದರು.

    ಇದನ್ನೂ ಓದಿ: ಬೊಮ್ಮಾಯಿ RSS​ನಲ್ಲಿ ಇದ್ರಾ? ನಾನು ಯಾವ ಕುಟುಂಬದ ಹಿಡಿತದಲ್ಲೂ ಇಲ್ಲ, HDKಗೆ ನನ್ನ ಕಂಡ್ರೆ ಭಯ: Siddaramaiah

    ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಅಥವಾ ಹಿಂದುಳಿದ ವರ್ಗದವರಿಗೆ ಟಿಕೆಟ್​ ನೀಡಿದರೆ ಅವರ ಪರವಾಗಿಯೇ ನಾನು ಕೆಲಸ ಮಾಡುತ್ತಿದೆ.
    ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲರು ಈ ಹಿಂದೆ ಯಾವ ಚುನಾವಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಸಾರಥ್ಯ ವಹಿಸದ ಉದಾಹರಣೆ ಇಲ್ಲ, ಇಲ್ಲಿ ಸ್ವಜಾತಿ ಎನ್ನುವ ಕಾರಣಕ್ಕೆ ಅಶೋಕ ಮನಗೂಳಿ ಅವರ ಪ್ರಚಾರದಲ್ಲಿ ಶಿವಾನಂದ ಪಾಟೀಲರು ಮುಂಚೂಣಿಯಲ್ಲಿದ್ದಾರೋ ಅಥವಾ ಮುಂದೆ ಇದೇ ಕ್ಷೇತ್ರದಲ್ಲಿ ಅವರೇ ಸ್ಪರ್ಧಿಸಲಿದ್ದಾರೋ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದ ಶ್ರೀನಾಥ್ ಪೂಜಾರಿ,
    ಸಂವಿಧಾನದ ಆಶೋತ್ತರಗಳಿಗೆ ಧಕ್ಕೆ ತರುತ್ತಿರುವ ಬಿಜೆಪಿ, ಅದನ್ನು ಪ್ರತಿಭಟಿಸದೇ ಸಮ್ಮತಿಸುತ್ತಿರುವ ಕಾಂಗ್ರೆಸ್ ಎರಡು ಸಹ ಮಾರಕವೇ. ಈ ಎರಡು ಪಕ್ಷಗಳು ಸಾಮಾಜಿಕ ನ್ಯಾಯವನ್ನೇ ಮೂಲೆಗುಂಪಾಗಿಸಿವೆ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಂಚಿನಲ್ಲಿರುವ ಈ ಸಂಧರ್ಭದಲ್ಲಿ ದಲಿತ ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಜನನಾಯಕರು ಮುಖಂಡರುಗಳು ಸಮುದಾಯದ ಭಾವುಟಗಳನ್ನು ಹಿಡಿದುಕೊಂಡು ಮತಯಾತನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಆಗಿದೆ ಎಂದ ತಿಳಿಸಿದರು.

    ಇದನ್ನೂ ಓದಿ: ಮುಸ್ಲಿಂ ಅಭ್ಯರ್ಥಿ ವಿವಾದ ಆರಂಭಿಸಿದ್ದೇ Siddaramaiah, ಅದಕ್ಕೆ ನಾನೇ ಅಂತ್ಯ ಹಾಡುತ್ತೇನೆ; HD Kumaraswamy

    ಚುನಾವಣೆ ಬಂದಾಗ ಅಲ್ಪಸಂಖ್ಯಾತರು, ಹಿಂದುಳಿದವರು ಕಾಂಗ್ರೆಸ್ ಪಕ್ಷಕ್ಕೆ ನೆನಪಾಗುತ್ತಾರೆ, ಆದರೆ ಟಿಕೇಟ್ ಹಂಚಿಕೆ ವಿಷಯ ಬಂದಾಗ ಈ ಯಾವ ಸಮುದಾಯದವರು ಕಾಂಗ್ರೆಸ್ ನಾಯಕರಿಗೆ ನೆನಪಾಗುವುದಿಲ್ಲ.
    ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತ, ದಲಿತ ಬಾಂಧವರು ಸಾಮಾಜಿಕ ನ್ಯಾಯಕ್ಕೆ ಮತ ಕೊಟ್ಟ ಪ್ರತೀಕವಾಗಿ ಅಲ್ಪಸಂಖ್ಯಾತ ಸಮುದಾಯದ ಸಹೋದರಿ ನಾಜೀಯಾ ಅಂಗಡಿ ಅವರಿಗೆ ಮತ ಚಲಾಯಿಸಬೇಕು ಎಂದು ಶ್ರೀನಾಥ್ ಪೂಜಾರಿ ಗೋಷ್ಠಿ ಮೂಲಕ ತಿಳಿಸಿದ್ದಾರೆ.
    Published by:Sharath Sharma Kalagaru
    First published: