ಕೈ ನಾಟಕ, ಬಿಜೆಪಿ ಚೌಕಿದಾರ್ ಕಥೆ ಈಗ ಮುಗಿಯುತ್ತೆ: ಮೈಸೂರಲ್ಲಿ ಮಾಯಾವತಿ ಭವಿಷ್ಯ

ಮುಂದಿನ ದಿನಗಳಲ್ಲಿ ಎನ್. ಮಹೇಶ್ ಅವರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಮಾಯಾವತಿ ಭರವಸೆ ನೀಡಿದ್ಧಾರೆ.

G Hareeshkumar | news18
Updated:April 10, 2019, 5:26 PM IST
ಕೈ ನಾಟಕ, ಬಿಜೆಪಿ ಚೌಕಿದಾರ್ ಕಥೆ ಈಗ ಮುಗಿಯುತ್ತೆ: ಮೈಸೂರಲ್ಲಿ ಮಾಯಾವತಿ ಭವಿಷ್ಯ
ಬಿಎಸ್​ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ.
G Hareeshkumar | news18
Updated: April 10, 2019, 5:26 PM IST
ಮೈಸೂರು(ಏ. 10):  ಸ್ವಾತಂತ್ರ್ಯಾ ನಂತರ ತುಂಬಾ ವರ್ಷಗಳ ಕಾಲ ಕಾಂಗ್ರೆಸ್, ಬಿಜೆಪಿ ಹಾಗೂ ಇತರೆ ಪಕ್ಷಗಳ ಕೈಯಲ್ಲೇ ಅಧಿಕಾರ ಇತ್ತು. ಆದರೆ ಬಡತನ ತೊಲಗಿಸಲು ಸಾಧ್ಯವಾಗಲಿಲ್ಲ. ಈಗ ಕಾಂಗ್ರೆಸ್​ನವರ ನಾಟಕಗಳು, ಪ್ರಚಾರಗಳು ಮುಗಿಯಲಿವೆ. ಚೌಕಿದಾರ್ ಕಥೆಯೂ ಈ ಚುನಾವಣೆಯಲ್ಲಿ ಮುಗಿಯಲಿದೆ ಎಂದು ಬಿಎಸ್​ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಹೇಳಿದಾರೆ.

ಬಿಜೆಪಿಯವರ ಹೊಸ ಚೌಕಿದಾರ್ ನಾಟಕ ಈ‌ ಚುನಾವಣೆಯಲ್ಲಿ ನಡೆಯೋದಿಲ್ಲ. ಇವರ ನಾಟಕಗಳು ಎಲ್ಲವೂ ಈ‌ ಲೋಕಸಭೆಯಲ್ಲಿ ಮುಗಿಯುತ್ತೆ. ರೈತರಿಂದ ಹಿಡಿದು ಅನೇಕ ವರ್ಗದವರಿಗೆ ಪ್ರಧಾನಿ ಮೋದಿ ಕೊಟ್ಟಂತಹ ಭರವಸೆಗಳೆಲ್ಲವು ಹುಸಿಯಾಗಿದೆ. ಮೋದಿ ಸರ್ಕಾರ ಪ್ರಚಾರಕ್ಕಾಗಿಯೇ ನೀರಿನ ರೀತಿ ಸಾವಿರಾರು ಕೋಟಿ ನಷ್ಟ ಮಾಡಿದೆ. ನರೇಂದ್ರ ಮೋದಿ ಚುನಾವಣೆ ವೇಳೆ ಮಾತ್ರ ಏನೇನೋ ಘೋಷಣೆ ಮಾಡ್ತಾರೆ. ಇದನ್ನೆಲ್ಲ ಚುನಾವಣೆ ಘೋಷಣೆ ಮುನ್ನವೇ ಮಾಡಬಹುದಿತ್ತು. ರೈತರಿಗೆ ವಿದ್ಯುತ್ ಸೇರಿ ಎಲ್ಲ ರೀತಿಯ ಸಮಸ್ಯೆ ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಕಾಂಗ್ರೆಸ್​ನಂತೆ ಏನೂ ಮಾಡದೆ ಜನರನ್ನ ವಂಚಿಸಿದೆ ಎಂದು  ಬಿಎಸ್‌ಪಿ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ವಿರುದ್ದ ಮಾಯಾವತಿ ಕಿಡಿ ಕಾರಿದರು.

ದೇಶವನ್ನು ಬಿಜೆಪಿ ಸರಕಾರ ಸುರಕ್ಷಿತವಾಗಿಟ್ಟಿಲ್ಲ. ದೇಶದ ಭದ್ರತೆ ವಿಚಾರದಲ್ಲೂ ಸರಕಾರ ಭ್ರಷ್ಟಾಚಾರ ನಡೆಸಿದೆ. ಕೇಂದ್ರ ಸರಕಾರದಲ್ಲಿ ಭ್ರಷ್ಟಾಚಾರ ತುಂಬಿದೆ.

ಜಿಎಸ್‌ಟಿ ಮಧ್ಯಮ ವರ್ಗ ಮತ್ತು ಬಡವರಿಗೆ ಹೊರೆಯಾಗಿದೆ. ಭ್ರಷ್ಟಾಚಾರವೂ ಮೋದಿ ಸರ್ಕಾರದಲ್ಲಿ ಹೆಚ್ಚಾಗಿದೆ. ಕಾಂಗ್ರೆಸ್​ನ ಬೋಫೋರ್ಸ್, ಬಿಜೆಪಿಯ ರಫೇಲ್ ಹಗರಣ ಬಯಲಾಗಿದೆ. ಐಟಿ ಅಧಿಕಾರಿಗಳು ವಿರೋಧ ಪಕ್ಷದವರಿಗೆ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಯಾವತಿ ಟೀಕಿಸಿದರು.

ಬಿಎಸ್​ಪಿ ಹೇಳೊಲ್ಲ; ಮಾಡಿ ತೋರಿಸುತ್ತೆ:

ಚುನಾವಣಾ ಪೂರ್ವ ಪ್ರಣಾಳಿಕೆಗಳು ಕೇವಲ ಪ್ರಣಾಳಿಕೆ ಅಷ್ಟೇ. ಬಿಎಸ್ಪಿ ಹೇಳಲ್ಲ ಕೆಲಸ ಮಾಡುತ್ತೆ. ನಮ್ಮದೂ ಮಾತು ಕಡಿಮೆ, ಕೆಲಸ ಜಾಸ್ತಿ. ಜನರಿಗೆ ಹಣ ಕೊಟ್ಟರೆ ಬಡತನ ದೂರವಾಗಲ್ಲ. ಕಾಂಗ್ರೆಸ್ - ಬಿಜೆಪಿ ಎರಡು ಪಕ್ಷಗಳು ಈ ಹಣ ಕೊಡುವ ಯೋಜನೆ ಮಾಡಿವೆ. ಬಿಎಸ್ಪಿ ಮಾತ್ರ ಬಡವರಿಗೆ ಉದ್ಯೋಗ ಕೊಟ್ಟ ಬಡತನ ನಿರ್ಮೂಲನೆ ಮಾಡುವ ಪಣ ತೊಟ್ಡಿದೆ ಎಂದು  ಮಾಯಾವತಿ ಹೇಳಿದರು.
Loading...

ಕರ್ನಾಟಕದಲ್ಲೂ ಕಡು ಬಡವರು, ಅಸಹಾಯಕರು ಇದ್ದಾರೆ. ಅವರಿಗೆ ಒಳಿತು ಮಾಡುವ ಉದ್ದೇಶ ನಮ್ಮದಾಗಿದೆ. ನಾವು ದೆಹಲಿಯ ಗದ್ದುಗೆ ಏರಬೇಕಿದೆ. ಇಲ್ಲಿಂದಲೂ ನಮಗೆ ಸಹಕಾರ ನೀಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿ ಎಂದು ಬಿಎಸ್​ಪಿ ಮುಖ್ಯಸ್ಥೆ ಮನವಿ ಮಾಡಿದರು.

ಇದನ್ನೂ ಓದಿ :  ಮೋದಿ ಬಳಿಕ ಮೈಸೂರಿನಲ್ಲಿಂದು ಮಾಯಾವತಿ; ಹಳೇ ಮೈಸೂರು ಭಾಗದ ಅಭ್ಯರ್ಥಿಗಳ ಪರ ಬಿಎಸ್​ಪಿ ಮುಖ್ಯಸ್ಥೆ ಪ್ರಚಾರ

ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳಿವೆ. ಅದರಲ್ಲಿ‌ ಬಿಜೆಪಿ ಒಂದು ಕ್ಷೇತ್ರವೂ ಗೆಲ್ಲದೆ ವಾಶ್ ಔಟ್ ಆಗಲಿದೆ. ನೀವೂ ಮೈಸೂರಿನಿಂದಲೇ ಅಭ್ಯರ್ಥಿ ಗೆಲ್ಲಿಸಿ ಸಹಕರಿಸಿ. ನಮ್ಮ‌ ಅಭ್ಯರ್ಥಿಗಳನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿ. ರಾಜ್ಯದಲ್ಲಿ ಬಿಎಸ್‌ಪಿ ಒಂದು ಹೆಜ್ಜೆ ಮುಂದುಟ್ಟಿದೆ. ಈಗಾಗಲೇ ಎನ್. ಮಹೇಶ್ ಗೆಲ್ಲಿಸಿ ಕೊಟ್ಟಿದ್ರಿ. ಇದರಿಂದ ಮಹೇಶ್ ಸಚಿವರು ಕೂಡ ಆಗಿದ್ದರು. ಮುಂದಿನ ಕರ್ನಾಟಕದ ಚುನಾವಣೆಯಲ್ಲಿ ಬಿಎಸ್‌ಪಿ ಅಧಿಕಾರಕ್ಕೆ ಬರಲಿದೆ. ಆ ವೇಳೆ ಮಹೇಶ್‌ರನ್ನ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಮಾಯಾವತಿ ಭರವಸೆ ನೀಡಿದರು.

First published:April 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...