ಮಾಯಾವತಿ ಮಾತು ಮೀರಿ ದೋಸ್ತಿ ಸರ್ಕಾರದ ವಿರುದ್ಧ ಹೋದ ಬಿಎಸ್​ಪಿ ಎನ್​ ಮಹೇಶ್​ ಅಮಾನತು

ತಾವು ನಂಬಿದ ಆದರ್ಶ, ಸಿದ್ಧಾಂತಗಳನ್ನು ಹಣದ ಆಮಿಶ ಅಥವಾ ಸೂಕ್ತ ಸ್ಥಾನಮಾನಕ್ಕಾಗಿ ಮಹೇಶ್​ ತ್ಯಾಗ ಮಾಡಿದರೇ ಎಂಬ ಮಾತುಗಳೂ ಕೇಳಿ ಬರುತ್ತಿದೆ

Sharath Sharma Kalagaru | news18
Updated:July 23, 2019, 9:02 PM IST
ಮಾಯಾವತಿ ಮಾತು ಮೀರಿ ದೋಸ್ತಿ ಸರ್ಕಾರದ ವಿರುದ್ಧ ಹೋದ ಬಿಎಸ್​ಪಿ ಎನ್​ ಮಹೇಶ್​ ಅಮಾನತು
ಫೈಲ್​ ಫೋಟೊ: ಮಾಯಾವತಿ
Sharath Sharma Kalagaru | news18
Updated: July 23, 2019, 9:02 PM IST
ಬಹುಜನ ಸಮಾಜವಾದಿ ಪಕ್ಷದ ಕರ್ನಾಟಕದ ಏಕೈಕ ಶಾಸಕ ಎನ್​ ಮಹೇಶ್​ರನ್ನು ಪಕ್ಷದಿಂದ ಅಮಾನತ್ತುಗೊಳಿಸಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಆದೇಶಿಸಿದ್ಧಾರೆ. ವಿಶ್ವಾಸಮತ ಯಾಚನೆ ವೇಳೆ ಎಚ್​ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮಾಯಾವತಿ ಎನ್​ ಮಹೇಶ್​ಗೆ ಸ್ಪಷ್ಟ ಸೂಚನೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಮಾಯಾವತಿ ಸ್ಪಷ್ಟಪಡಿಸಿದ್ದರು.

ಪಕ್ಷದ ವಿರಷ್ಠೆಯ ಸೂಚನೆಯನ್ನೂ ಮೀರಿ ಎನ್​ ಮಹೇಶ್​ ಸದನಕ್ಕೆ ಗೈರಾಗುವ ಮೂಲಕ ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ತೆಗೆದುಕೊಂಡಿರುವ ಮಾಯಾವತಿ, ಮಹೇಶ್​ರ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್​ನಲ್ಲಿ ಮಾಯಾವತಿ ಮಾಹಿತಿ ನೀಡಿದ್ದು, ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಸದನಕ್ಕೆ ಗೈರಾದ ಮಹೇಶ್​ರನ್ನು ಪಕ್ಷದಿಂದ ಉಚ್ಛಾಟಿಸಿರುವುದಾಗಿ ಹೇಳಿದ್ದಾರೆ.




ಸಮಾಜವಾದಿ ಹಿನ್ನೆಲೆಯಿಂದ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಎನ್​ ಮಹೇಶ್​, ಹಿಂದುತ್ವದ ಪ್ರತಿಪಾದಕರೆಂದೇ ಕರೆಸಿಕೊಳ್ಳುವ ಬಿಜೆಪಿಗೆ ಬೆಂಬಲ ನೀಡಿರುವುದು ಸಾಮಾಜಿಕವಾಗಿ ಖಂಡನೆಗೆ ಗುರಿಯಾಗುತ್ತಿದೆ. ತಾವು ನಂಬಿದ ಆದರ್ಶ, ಸಿದ್ಧಾಂತಗಳನ್ನು ಹಣದ ಆಮಿಶ ಅಥವಾ ಸೂಕ್ತ ಸ್ಥಾನಮಾನಕ್ಕಾಗಿ ಮಹೇಶ್​ ತ್ಯಾಗ ಮಾಡಿದರೇ ಎಂಬ ಮಾತುಗಳೂ ಕೇಳಿ ಬರುತ್ತಿದೆ.
First published:July 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...