ಬಜೆಟ್​ ಮಂಡನೆ ಬಳಿಕ ರಾಜ್ಯದ ಖಜಾನೆ ಸ್ಥಿತಿ ತಿಳಿಯಲಿದೆ; ಸಿದ್ದರಾಮಯ್ಯಗೆ ಸಿಎಂ ತಿರುಗೇಟು

ಮಾರ್ಚ್​ನಲ್ಲಿ ಬಜೆಟ್​ ಮಂಡಿಸಲಾಗುವುದು. ಆಗ ಸದನದಲ್ಲಿಯೇ ಸಿದ್ದರಾಮಯ್ಯ ಅವರ ಟೀಕೆಗೆ ಉತ್ತರಿಸುತ್ತೇನೆ. ಆಗ ಬಜೆಟ್​ ಖಾಲಿಯಾಗಿದೆಯಾ ಇಲ್ಲವೋ ಎಂಬುದು ಅವರಿಗೆ ತಿಳಿಯಲಿದೆ

news18-kannada
Updated:January 26, 2020, 2:05 PM IST
ಬಜೆಟ್​ ಮಂಡನೆ ಬಳಿಕ ರಾಜ್ಯದ ಖಜಾನೆ ಸ್ಥಿತಿ ತಿಳಿಯಲಿದೆ; ಸಿದ್ದರಾಮಯ್ಯಗೆ ಸಿಎಂ ತಿರುಗೇಟು
ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು (ಜ.26): ರಾಜ್ಯದ ಖಜಾನೆ ಖಾಲಿಯಾಗುತ್ತಿದೆ. ಅಧಿಕಾರಿಗಳು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.  ಬಜೆಟ್ ಮಾಡೋದು ಹೇಗಪ್ಪಾ ಎಂದು ಕುಳಿತಿದ್ದಾರೆ ಎಂಬ ಸಿದ್ದರಾಮಯ್ಯ ಟ್ವೀಟ್​ಗೆ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಬಜೆಟ್​ ಮಂಡನೆ ಬಳಿಕ ರಾಜ್ಯದ ಹಣಕಾಸು ಸ್ಥಿತಿ ಹೇಗಿದೆ ಎನ್ನುವುದು ತಿಳಿಯಲಿದೆ ಎಂದು ತಿರುಗೇಟು ನೀಡಿದ್ದಾರೆ. 

ಸುತ್ತೂರಿನ ಮಠದಲ್ಲಿ ಮಾತನಾಡಿದ ಅವರು, ಮಾರ್ಚ್​ನಲ್ಲಿ ಬಜೆಟ್​ ಮಂಡಿಸಲಾಗುವುದು. ಆಗ ಸದನದಲ್ಲಿಯೇ ಸಿದ್ದರಾಮಯ್ಯ ಅವರ ಟೀಕೆಗೆ ಉತ್ತರಿಸುತ್ತೇನೆ. ಆಗ ಬಜೆಟ್​ ಖಾಲಿಯಾಗಿದೆಯಾ ಇಲ್ಲವೋ ಎಂಬುದು  ಅವರಿಗೆ ತಿಳಿಯಲಿದೆ ಎಂದರು.

ಇದೇ ವೇಳೆ ದಾವೋಸ್​ ಪ್ರವಾಸದ ಕುರಿತು ಮಾತನಾಡಿದ ಅವರು, ಎಸ್ ಎಂ ಕೃಷ್ಣ ನಂತರ ನಾನು ದಾವೋಸ್ ಪ್ರವಾಸಕ್ಕೆ ಹೋಗಿ ಬಂದಿದ್ದೇನೆ. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಬಂಡಾವಳ ಹೂಡಿಕೆಗೆ ಪ್ರಮುಖ ಒಪ್ಪಂದ ಆಗಿದೆ. ಭವಿಷ್ಯದಲ್ಲಿ ಅವರ ಜೊತೆ ನಿಖಟ ಸಂಪರ್ಕ ಇಟ್ಟುಕೊಂಡು ಬಂಡವಾಳ ಹೂಡಿಕೆ ಮಾಡಿಸುತ್ತೇವೆ. ಇದು ಅತ್ಯಂತ ಫಲಪ್ರದಾಯಕ ವಿದೇಶ ಪ್ರವಾಸ ಎಂದರು.

ಇದನ್ನು ಓದಿ: ರಾಜ್ಯದ ಖಜಾನೆ ಖಾಲಿ, ಯಡಿಯೂರಪ್ಪನವರೇ ನಿಮ್ಮ ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ; ಸರಣಿ ಟ್ವೀಟ್ ಮೂಲಕ ಸರ್ಕಾರಕ್ಕೆ ಸಿದ್ದರಾಮಯ್ಯ ತರಾಟೆ

ಇನ್ನು ರಾಜ್ಯದ ವಿಧಾನಮಂಡಲದ ಜಂಟಿ ಅಧಿವೇಶನ ಫೆ.17ರಿಂದ ಪ್ರಾರಂಭವಾಗಲಿದ್ದು, ಮಾ.5ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಆಯವ್ಯಯ ಮಂಡನೆ ಮೇಲೆ  ಉಭಯಸದನಗಳಲ್ಲಿ ಚರ್ಚೆ ನಡೆಯಲಿದ್ದು, ಬಜೆಟ್​ಗೆ ಅನುಮೋದನೆ ಪಡೆಯುವ ಸಾಧ್ಯತೆ ಇದೆ.
First published:January 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ