ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಯಡಿಯೂರಪ್ಪ ವಾಗ್ದಾಳಿ


Updated:September 2, 2018, 1:48 PM IST
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಯಡಿಯೂರಪ್ಪ ವಾಗ್ದಾಳಿ

Updated: September 2, 2018, 1:48 PM IST
ರಾಚಪ್ಪ ಬನ್ನಿದಿನ್ನಿ, ನ್ಯೂಸ್​ 18 ಕನ್ನಡ

ಬಾಗಲಕೋಟೆ(ಸೆ.02): ಸಿಎಂ ಆಗುವ ವಿಚಾರದಲ್ಲಿ ಹಗಲುಗನಸು ಕಾಣುವುದು ನಾನಾ ಅಥವಾ ಸಿದ್ದರಾಮಯ್ಯನಾ ಅಂತ ಸದ್ಯದಲ್ಲೇ ಗೊತ್ತಾಗಲಿದೆ. ಸಮನ್ವಯ ಸಮಿತಿ ಸಭೆ ನಡೆಸಿದ್ದೆ ಒಂದು ದೊಡ್ಡ ಸಾಧನೆಯಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ, ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿಲ್ಲ ಎಂದು ಎಂದು ಬಿಜೆಪಿಪಿ ರಾಜ್ಯಾದ್ಯಕ್ಷ ಬಿ‌.ಎಸ್‌.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರ 53ನೇ ವರ್ಷದ ಹುಟ್ಟುಹಬ್ಬ ಕಾಯ೯ಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಗಳೊಂದಿಗೆ ಮಾತನಾಡಿದ್ದರು. ರಾಜ್ಯ ಸರ್ಕಾರ 100 ದಿನ ಪೂರೈಸಿದ್ದು ಎಲ್ಲ ಇಲಾಖೆಗಳಲ್ಲಿ ವರ್ಗಾವಣೆ ದಂಧೆ ನಡೆಸಿದ್ದೆ ದೊಡ್ಡ ಸಾಧನೆಯಾಗಿದೆ. ಹಣ ಕೊಟ್ಟಷ್ಟು ನಿರೀಕ್ಷಿತ ಹುದ್ದೆಗಳು ಸಿಗುವಂತೆ ಮಾಡಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾಯ೯ ಮಾಡದೇ ತುಘಲಕ್ ದರ್ಬಾರ್​ ನಡೆಯುತ್ತಿದೆ. ಹೀಗಾಗಿ ಸಕಾ೯ರ ಬದುಕಿದ್ದು ಸತ್ತಂತಾಗಿದ್ದು, ಈ ಮೈತ್ರಿ ಸರ್ಕಾರ ಒಂದು ಸಾಂದರ್ಭಿಕ ಶಿಶು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಶ್ರೀರಾಮುಲು, ಯಡಿಯೂರಪ್ಪ ಸಿಎಂ ಆಗುತ್ತಾರೋ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕಾಲ ಬಂದಾಗ ನೋಡೋಣ, ಈ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಹೇಳಿದ್ದೇನೆ. ಮೈತ್ರಿ ಸರ್ಕಾರದಲ್ಲಿ ಗೊಂದಲ ಕಚ್ಚಾಟ ಹೆಚ್ಚಾಗಿದೆ, ನಾವು ಹೇಳಿಕೆ ನೀಡಿ ಅವರನ್ನು ಒಂದಾಗಿಸುವುದು ಬೇಡ. ಇನ್ನು ಸರ್ಕಾರದಲ್ಲಿನ ಕಚ್ಚಾಟ ನೋಡಿದ್ರೆ ಮೈತ್ರಿ ಸರ್ಕಾರ ನನಗನ್ನಿಸಿದ ಹಾಗೆ ಬಹಳ ಉಳಿಯೋದಿಲ್ಲವೆಂದು ಭವಿಷ್ಯ ನುಡಿದಿದ್ದಾರೆ.

ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ:

ಸಿದ್ದರಾಮಯ್ಯ ನಾನೇ ಸಿಎಂ ಆಗ್ತೀನಿ ಅಂತ ಬೇರೆಯವರ ಕಡೆಗೆ ಹೇಳಿಸುವುದನ್ನು ಹಾಗೂ ಮತ್ತು ಕಾಂಗ್ರೆಸ್​ನ ಲಕ್ಷ್ಮೀ ಹೆಬ್ಬಾಳ್ಕರ್​ ಮತ್ತು ಜಾರಕಿಹೊಳಿ ಸಹೋದರರ ಜೊತೆಗಿನ ಕಚ್ಚಾಟಗಳು ಹಾಗೂ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಮುಂದೂಡುತ್ತಾ ಹೋಗುತ್ತಿರುವುದನ್ನು ನೋಡಿದರೆ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಗೊತ್ತಾಗುತ್ತದೆ ಎಂದಿದ್ದಾರೆ ಬಿ. ಎಸ್​ ಯಡಿಯೂರಪ್ಪ.

ಇನ್ನು ಈ ಹಿಂದೆ ಸಿದ್ದರಾಮಯ್ಯ ಫೋನ್ ಸಹಿತ ಕದ್ದಾಲಿಕೆ ಆಗುತ್ತಿದೆ ಎಂದಿದ್ದ ಬಿಎಸ್​ವೈ ಸಿದ್ದರಾಮಯ್ಯ ಫೋನ್ ಕದ್ದಾಲಿಕೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ ಎಂದು ತಮ್ಮ ಮಾತುಗಳಿಂದ ಯೂಟರ್ನ್​ ಹೊಡೆದಿದ್ದಾರೆ. ಅಲ್ಲದೇ ನನ್ನದು ಹಾಗೂ ನನ್ನ ಸ್ನೇಹಿತರ ಪೋನ್ ಕದ್ದಾಲಿಕೆ ಆಗುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ, ಈ ಬಗ್ಗೆ ತನಿಖೆ ಆಗಲಿ ಎಂದಿದ್ದಾರೆ.
Loading...

ನಾವೇ ಗೆಲ್ಲುತ್ತೇವೆ:

ಇಷ್ಟೇ ಅಲ್ಲದೇ ಸಿದ್ದರಾಮಯ್ಯ ಎಲ್ಲಿ ಬೇಕಾದರೂ ಹೋಗಿ ಲೋಕಸಭೆಗೆ ಸ್ಫರ್ಧಿಸಲಿ ಮೋದಿಯವರ ಅಭಿವೃದ್ಧಿ ಕಾರ್ಯದಿಂದ ಗೆಲ್ಲುವುದು ನಾವೇ. ಅಭಿವೃದ್ಧಿ ಸಹಿಸದೇ ರಾಹುಲ್ ಗಾಂಧಿ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಗರಂ ಆಗಿದ್ದಾರೆ.  ಈ ಸಂದರ್ಭದಲ್ಲಿ ಪ್ರಧಾನಿ ಮಂತ್ರಿ ಮೋದಿ ಹತ್ಯೆ ಸಂಚು ರೂಪಿಸಿರುವುದನ್ನು ಕೇಂದ್ರ ಸರ್ಕಾರ ಸಿಬಿಐಗೆ ಯಾಕೆ ವಹಿಸ್ತಿಲ್ಲವೆಂದು ಕೇಳಲಾದ ಪ್ರಶ್ನೆಗೆ ಬಿಎಸ್ವೈ ಪ್ರತಿಕ್ರಿಯೆ ನೀಡದೆ ಸುಮ್ಮನಾದರು.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ