ಸಂಪುಟ ವಿಸ್ತರಣೆಯಾದರೆ ಆರು ಸಚಿವ ಸ್ಥಾನ ಭರ್ತಿ; ಯಾರಿಗೆ ಒಲಿಯುತ್ತೆ ಸಂಪುಟ ಭಾಗ್ಯ?

ಸಂಪುಟ ಪುನಾರಚನೆಯಾದರೆ ಕೆಲವಾರು ತಲೆದಂಡಗಳಾಗಲಿವೆ. ಕೆಲ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಆಗ ಹೆಚ್ಚು ಹೊಸ ಮುಖಗಳಿಗೆ ಸಂಪುಟ ಭಾಗ್ಯ ಕಲ್ಪಿಸುವ ಅವಕಾಶ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ.

news18-kannada
Updated:July 28, 2020, 12:59 PM IST
ಸಂಪುಟ ವಿಸ್ತರಣೆಯಾದರೆ ಆರು ಸಚಿವ ಸ್ಥಾನ ಭರ್ತಿ; ಯಾರಿಗೆ ಒಲಿಯುತ್ತೆ ಸಂಪುಟ ಭಾಗ್ಯ?
ಬಿ.ಎಸ್‌. ಯಡಿಯೂರಪ್ಪ.
  • Share this:
ಬೆಂಗಳೂರು(ಜುಲೈ 28): ವಿಧಾನಪರಿಷತ್ ಸ್ಥಾನಗಳು ಬಹುತೇಕ ಭರ್ತಿಯಾಗುತ್ತಿದ್ದಂತೆಯೇ ಈಗ ಬಿಎಸ್​ವೈ ಮಂತ್ರಿಮಂಡಲದತ್ತ ಎಲ್ಲರ ಚಿತ್ತ ನೆಟ್ಟಿದೆ. ನೂತನ ವಿಧಾನಪರಿಷತ್ ಸದಸ್ಯರು ಈಗ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಯಡಿಯೂರಪ್ಪ ಕೂಡ ಸಂಪುಟ ಪುನಾರಚನೆಗೆ ಮನಸು ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಪುನಾರಚನೆಯಾದರೂ ಸರಿ, ಸಂಪುಟ ವಿಸ್ತರಣೆಯಾದರೂ ಯಾವುದಕ್ಕಾದರೂ ಅನುಮತಿ ನೀಡಿ ಎಂದು ಮುಖ್ಯಮಂತ್ರಿಗಳು ಹೈಕಮಾಂಡ್​ಗೆ ಮನವಿ ಮಾಡಿದ್ದಾರೆ.

ಸಂಪುಟ ಪುನಾರಚನೆಯಾದರೆ ಕೆಲವಾರು ತಲೆದಂಡಗಳಾಗಲಿವೆ. ಕೆಲ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಆಗ ಹೆಚ್ಚು ಹೊಸ ಮುಖಗಳಿಗೆ ಸಂಪುಟ ಭಾಗ್ಯ ಕಲ್ಪಿಸುವ ಅವಕಾಶ ಸಿಗಲಿದೆ. ನಿಗಮ ಮಂಡಳಿ ನೇಮಕದಲ್ಲೂ ಅಸಮಾಧಾನಗೊಂಡಿರುವ ಕೆಲ ಶಾಸಕರನ್ನ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಎಣಿಕೆ ಒಂದು ಕಡೆ ಇದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ: ನಿಗಮ ಮಂಡಳಿ ನೇಮಕ: ಸಿಎಂ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರುಗಳ ಅಸಮಾಧಾನ; ಹೈಕಮಾಂಡ್​ಗೆ ಕಟೀಲ್ ದೂರು ಸಾಧ್ಯತೆ

ಇನ್ನು, ಸಂಪುಟ ವಿಸ್ತರಣೆಗೆ ಮಾತ್ರ ಹೈಕಮಾಂಡ್ ಹಸಿರು ನಿಶಾನೆ ತೋರಿದರೆ ಆರು ಸಚಿವ ಸ್ಥಾನಕ್ಕಷ್ಟೇ ಅವಕಾಶ ಇರಲಿದೆ. ಹಾಗೇನಾದರೂ ಆದರೆ, ಎಂಟಿಬಿ ನಾಗರಾಜ್, ಆರ್ ಶಂಕರ್, ಅರವಿಂದ್ ಲಿಂಬಾವಳಿ, ಉಮೇಶ್ ಕತ್ತಿ ಮತ್ತು ಹಾಲಪ್ಪ ಆಚಾರ್ ಅವರಿಗೆ ಐದು ಸ್ಥಾನಗಳು ಫಿಕ್ಸ್ ಆಗಿವೆ. ಇನ್ನೊಂದು ಸ್ಥಾನ ಎ. ರಾಮದಾಸ್ ಅಥವಾ ಅಪ್ಪಚ್ಚು ರಂಜನ್ ಅವರಲ್ಲೊಬ್ಬರಿಗೆ ದಕ್ಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆರು ಮಂದಿ ಸಂಭಾವ್ಯ ಸಚಿವರು:
1) ಎಂಟಿಬಿ ನಾಗರಾಜ್
2) ಆರ್ ಶಂಕರ್3) ಅರವಿಂದ್ ಲಿಂಬಾವಳಿ
4) ಉಮೇಶ್ ಕತ್ತಿ
5) ಹಾಲಪ್ಪ ಆಚಾರ್
6) ಎಸ್.ಎ. ರಾಮದಾಸ್/ಅಪ್ಪಚ್ಚು ರಂಜನ್

ಇದನ್ನೂ ಓದಿ: ’ಆಪರೇಷನ್ ಕಮಲದ’ ವಿರುದ್ಧ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇದೆಯೇ?; ಕುಮಾರಸ್ವಾಮಿ ಚಾಟಿ



ಸಂಪುಟ ಪುನಾರಚನೆ ಅಥವಾ ವಿಸ್ತರಣೆ, ಯಾವುದಕ್ಕಾದರೂ ಹೈಕಮಾಂಡ್ ಒಪ್ಪಿಗೆ ಕೊಟ್ಟ ನಂತರ 10 ದಿನದಲ್ಲಿ ಯಡಿಯೂರಪ್ಪ ಅವರು ಎಲ್ಲವನ್ನೂ ಪೂರ್ಣಗೊಳಿಸಲು ಅಣಿಯಾಗಿದ್ದಾರೆ. ಈಗ ಅವರಿಗೇನಿದ್ದರೂ ಹೈಕಮಾಂಡ್ ಒಪ್ಪಿಗೆಯ ಅಗತ್ಯ ಮಾತ್ರ ಇದೆ.

ವರದಿ: ಚಿದಾನಂದ ಪಟೇಲ್
Published by: Vijayasarthy SN
First published: July 28, 2020, 12:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading