HOME » NEWS » State » BS YEDIYURAPPA TO MEET MINISTER OF THE CABINET TOMORROW RMD

ನಾಳೆ ರಾಜ್ಯ ಸಂಪುಟ ಸಚಿವರೊಂದಿಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ಸಭೆ; ಅಧೀವೇಶನದ ಬಗ್ಗೆ ಚರ್ಚೆ

ವಿವಿಧ ಇಲಾಖೆಗಳಲ್ಲಿ ಮಾಡಿರೋ ಕಾರ್ಯಗಳ ಬಗ್ಗೆ ಪರಿಶೀಲನೆ, ಕೊರೋನಾ ತಡೆತೆ ಕ್ರಮಗಳು, ಪ್ರವಾಹಕ್ಕೆ ಕೈಗೊಂಡ ಕ್ರಮಗಳು, ಅಭಿವೃದ್ಧಿ ಕಾರ್ಯಗಳು,  ಸಚಿವರ ಕಾರ್ಯ ವೈಖರಿ ಬಗ್ಗೆ ಬಿಎಸ್​​ವೈ ಪರಿಶೀಲನೆ ನಡೆಸಲಿದ್ದಾರೆ.

news18-kannada
Updated:September 6, 2020, 1:21 PM IST
ನಾಳೆ ರಾಜ್ಯ ಸಂಪುಟ ಸಚಿವರೊಂದಿಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ಸಭೆ; ಅಧೀವೇಶನದ ಬಗ್ಗೆ ಚರ್ಚೆ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು (ಸೆಪ್ಟೆಂಬರ್​ 6): ಕೊರೋನಾ ವೈರಸ್​ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ, ಆರ್ಥಿಕ ಚಟುಕವಟಿಕೆಗಳು ಮಾತ್ರವಲ್ಲ ಸರ್ಕಾರದ ಕೆಲಸಗಳು ಕೂಡ ನಿಧಾನ ಗತಿಯಲ್ಲಿ ಸಾಗುತ್ತಿವೆ. ಎಲ್ಲವೂ ಸರಿಯಿದ್ದಿದ್ದರೆ ಈಗಾಗಲೇ ಮುಂಗಾರು ಅಧಿವೇಶನ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಅಧಿವೇಶನ ಮುಂದೂಡಲಾಗಿತ್ತು. ಈಗ ರಾಜ್ಯದ ಮುಂಗಾರು ಅಧಿವೇಶನ ಸೆಪ್ಟೆಂಬರ್ 21ರಿಂದ ಆರಂಭಗೊಳ್ಳುತ್ತಿದೆ. ಹೀಗಾಗಿ, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನಾಳೆ ರಾಜ್ಯ ಸಂಪುಟ ಸಚಿವರ ಸಭೆ ಕರೆದಿದ್ದಾರೆ. ಈ ವೇಳೆ ಮಹತ್ವದ ವಿಚಾರಗಳು ಚರ್ಚೆಗಳು ನಡೆಯಲಿವೆ.

ಗೃಹ ಕಚೇರಿ ಕೃಷ್ಣಾದಲ್ಲಿ  ಸಂಜೆ 6 ಗಂಟೆಗೆ ಸಭೆ ನಡೆಯಲಿದೆ. ಸಭೆಯಲ್ಲಿ ಸಂಪುಟ ಸಚಿವರುಗಳು ಭಾಗವಹಿಸಲಿದ್ದಾರೆ. ಮುಂಗಾರು ಅಧಿವೇಶನವನ್ನು ಹೇಗೆ ನಡೆಸಬೇಕು ಎನ್ನುವ ವಿಚಾರ ಪ್ರಮುಖವಾಗಿ ಚರ್ಚೆಗೆ ಬರಲಿದೆ.  ಕೊರೋನಾ ತಡೆಗಟ್ಟಲು ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದೇ ವಿಚಾರ ಇಟ್ಟುಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯುವ ಸಾಧ್ಯತೆ ಇದೆ. ಹೀಗಾಗಿ, ಅಧಿವೇಶನದಲ್ಲಿ ಹೇಗೆ ಇದಕ್ಕೆ ಉತ್ತರ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲು ಬಿಎಸ್​ ವೈ ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇಂದಿನಿಂದ ನಾಲ್ಕು ದಿನ ಗುಡುಗು ಸಹಿತ ಭಾರೀ ಮಳೆ

ವಿವಿಧ ಇಲಾಖೆಗಳಲ್ಲಿ ಮಾಡಿರೋ ಕಾರ್ಯಗಳ ಬಗ್ಗೆ ಪರಿಶೀಲನೆ, ಕೊರೋನಾ ತಡೆತೆ ಕ್ರಮಗಳು, ಪ್ರವಾಹಕ್ಕೆ ಕೈಗೊಂಡ ಕ್ರಮಗಳು, ಅಭಿವೃದ್ಧಿ ಕಾರ್ಯಗಳು,  ಸಚಿವರ ಕಾರ್ಯ ವೈಖರಿ ಬಗ್ಗೆ ಬಿಎಸ್​​ವೈ ಪರಿಶೀಲನೆ ನಡೆಸಲಿದ್ದಾರೆ. ಅಧಿವೇಶನ ಹಾಗೂ ಮುಂದಿನ ನಡೆ ಬಗ್ಗೆ ಸಚಿವರುಗಳಿಗೆ ಕೆಲವು ಸಿಎಂ ಒಂದಿಷ್ಟು ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಡ್ರಗ್ಸ್​ ದಂಧೆ ತಲೆ ಎತ್ತಿದೆ ಅನ್ನೋ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅದರಲ್ಲೂ ಸ್ಯಾಂಡಲ್​ವುಡ್​ ಡ್ರಗ್​ ಸಮಾಚಾರ ಚರ್ಚೆಯಲ್ಲಿ ಮುಂದಿರುವ ವಿಚಾರ. ಹೀಗಾಗಿ, ಈ ಬಗ್ಗೆ ಸಚಿವರ ಜೊತೆ ಸಿಎಂ ಮಾತುಕತೆ ನಡೆಸಲಿದ್ದಾರೆ.
Published by: Rajesh Duggumane
First published: September 6, 2020, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories