ಮಂತ್ರಿ ಸ್ಥಾನವಿಲ್ಲದಿದ್ದರೆ ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ; ಶಾಸಕ ಮಹೇಶ್ ಕುಮಟಳ್ಳಿ

ನನಗೆ ಕ್ಷೇತ್ರ ಮುಖ್ಯ. ಮಂತ್ರಿ ಸ್ಥಾನ ಸಿಗದಿದ್ದರೂ ಬೇಡ. ಕಚೇರಿಯಲ್ಲಿ ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ಶಾಸಕ ಮಹೇಶ ಕುಮಟಳ್ಳಿ ಹೇಳಿದ್ದಾರೆ.

ಶಾಸಕ ಮಹೇಶ್ ಕುಮಟಳ್ಳಿ​​

ಶಾಸಕ ಮಹೇಶ್ ಕುಮಟಳ್ಳಿ​​

  • Share this:
ಬೆಂಗಳೂರು (ಫೆ. 2): ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಮಂತ್ರಿ ಸ್ಥಾನ ಕೊಡದಿದ್ದರೆ ಯಡಿಯೂರಪ್ಪ ನಂಬಿಕೆ ದ್ರೋಹ ಮಾಡಿದಂತೆ ಎಂದು ಹೇಳಿಕೆ ನೀಡಿದ್ದ ಶಾಸಕ ಮಹೇಶ್ ಕುಮಟಳ್ಳಿ ಈಗ ಬೇರೆ ವರಸೆ ಶುರು ಮಾಡಿದ್ದಾರೆ. ನನಗೆ ಮಂತ್ರಿ ಸ್ಥಾನ ಕೊಡದಿದ್ದರೂ ಪರವಾಗಿಲ್ಲ, ಎಚ್. ವಿಶ್ವನಾಥ್ ಅವರನ್ನು ಮಂತ್ರಿ ಮಾಡಬೇಕು ಎಂದಿದ್ದಾರೆ.

ಒಂದೇ ಕ್ಷೇತ್ರಕ್ಕೆ ಎರಡು ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಹೇಶ್ ಕುಮಟಳ್ಳಿ, ನನ್ನ ವಿಚಾರ ಬೇರೆ, ಲಕ್ಷ್ಮಣ ಸವದಿ ವಿಚಾರ ಬೇರೆ. ಈ ಬಗ್ಗೆ ಅವರು ಮೊದಲೇ ಯೋಚನೆ ಮಾಡಬೇಕಿತ್ತು. ಗೆದ್ದವರಿಗೆಲ್ಲ ಸಚಿವ ಸ್ಥಾನ ನೀಡುವುದಾಗಿ ಮಾತು ಕೊಟ್ಟಿದ್ದಾರೆ.ಆ ಮಾತನ್ನು ಸಿಎಂ ಯಡಿಯೂರಪ್ಪ ಉಳಿಸಿಕೊಳ್ಳುತ್ತಾರೆ ಎಂದಿದ್ದಾರೆ.

ಮೂಲ ಬಿಜೆಪಿ ಶಾಸಕರ ವಿರುದ್ಧವೂ ಮಹೇಶ್ ಕುಮಟಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ. ನೀವೆಲ್ಲ ನಮ್ಮ ಪಕ್ಷಕ್ಕೆ ಬನ್ನಿ, ಸರ್ಕಾರ ರಚನೆ ಮಾಡೋಣ. ನಮ್ಮ ಕ್ಷೇತ್ರಗಳು ಅಭಿವೃದ್ಧಿ ಆಗಲಿ ಎಂದು ಸರ್ಕಾರ ರಚನೆಗೂ ಮುನ್ನ ಬಿಜೆಪಿ ಶಾಸಕರು ಹೇಳುತ್ತಿದ್ದರು. ಆದರೆ, ಇದೀಗ ಅವರು ವರಸೆ ಬದಲಿಸಿದ್ದಾರೆ. ನನಗೆ ಕ್ಷೇತ್ರ ಮುಖ್ಯ. ಮಂತ್ರಿ ಸ್ಥಾನ ಸಿಗದಿದ್ದರೂ ಬೇಡ. ಕಚೇರಿಯಲ್ಲಿ ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ಶಾಸಕ ಮಹೇಶ ಕುಮಟಳ್ಳಿ ಹೇಳಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ನನಗೆ ಮಂತ್ರಿ ಸ್ಥಾನ ಕೊಡದಿದ್ದರೆ ನಂಬಿಕೆ ದ್ರೋಹ ಮಾಡಿದಂತೆ; ಶಾಸಕ ಮಹೇಶ್ ಕುಮಟಳ್ಳಿ

ಎಚ್. ವಿಶ್ವನಾಥ್ ಸೋತಿರಬಹುದು ಆದರೆ ಅವರನ್ನು ಮಂತ್ರಿ ಮಾಡಬೇಕು. ಲಕ್ಷ್ಮಣ ಸವದಿ ವಿರುದ್ಧ ನಾನು ಕಾಂಗ್ರೆಸ್​ನಲ್ಲಿ ಚುನಾವಣೆ ಮಾಡಿದ್ದೇನೆ. ಬಳಿಕ ಬಿಜೆಪಿಗೆ ಬಂದು ಗೆದ್ದಿದ್ದೇನೆ. ಈಗ ಸಾರ್ವತ್ರಿಕ ಚುನಾವಣೆ ನಡೆದಿಲ್ಲ. ಉಪಚುನಾವಣೆಯಲ್ಲಿ ನಡೆದು ರಾಜಕೀಯ ಪುನರ್ಜನ್ಮ ಪಡೆದಿದ್ದೇವೆ. ಒಂದೇ ಕ್ಷೇತ್ರದಲ್ಲಿ ಇಬ್ಬರು ಸಚಿವರಾಗೋದರಲ್ಲಿ ತಪ್ಪೇನಿದೆ? ನಮ್ಮ ತ್ಯಾಗದಿಂದ ಸರ್ಕಾರ ಬಂದಿದ್ದು. ನಮ್ಮನ್ನ ಪರಿಗಣಿಸದಿದ್ದರೆ ಜನರಿಂದ ಬಿಜೆಪಿಗೆ ಮೋಸಗಾರ ಪಟ್ಟ ಬರುತ್ತದೆ. ಹೀಗಾಗಿ ಬಿಜೆಪಿ ನಮಗೆ ಹೇಳಿದ ರೀತಿ ನಡೆದುಕೊಳ್ಳಲಿ ಎಂದು ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

ಇದನ್ನೂ ಓದಿ: ಸಬ್​​ಅರ್ಬನ್​​ ಯೋಜನೆಗೆ ಕೇಂದ್ರ ಬಜೆಟ್​​ನಲ್ಲಿ ಅನುದಾನ; ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಸಿಎಂ ಬಿಎಸ್​ವೈ

ದೆಹಲಿಗೆ ತೆರಳಿ ಜೆ.ಪಿ. ನಡ್ಡಾ, ಅಮಿತ್​ ಶಾ ಅವರನ್ನು ಭೇಟಿಯಾಗಿದ್ದ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸಿದ್ದರು. ಮೂಲಗಳ ಪ್ರಕಾರ 11 ಶಾಸಕರ ಪೈಕಿ 10 ಜನರಿಗೆ ಸಚಿವ ಸ್ಥಾನ ನೀಡಲು ಅಮಿತ್​ ಶಾ ಸೂಚಿಸಿದ್ದಾರೆ. ಮಹೇಶ್​ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್​ ಇಬ್ಬರಲ್ಲಿ ಒಬ್ಬರು ಸಚಿವ ಸ್ಥಾನ ವಂಚಿತರಾಗಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಹೇಶ್ ಕುಮಟಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಟಿಕ್​ಟಾಕ್​ ಕಾರಣಕ್ಕೆ ಹೆಂಡತಿಗೆ ಚಾಕುವಿನಿಂದ ಇರಿದ ಗಂಡ; ಮೈಸೂರಿನಲ್ಲೊಂದು ವಿಚಿತ್ರ ಪ್ರಕರಣ

ಯಡಿಯೂರಪ್ಪ ಪ್ರಾಣ ಬೇಕಾದರೂ ಬಿಡುತ್ತಾರೆ, ಆದರೆ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂಬ ಮಾತಿದೆ. ವಿರೋಧಿಗಳು ಕೂಡ ಯಡಿಯೂರಪ್ಪ ಬಗ್ಗೆ ಇದನ್ನೇ ಹೇಳುತ್ತಾರೆ. ಚುನಾವಣೆ ಪ್ರಚಾರದ ವೇಳೆ 35 ಸಾವಿರ ಜನರ ಮುಂದೆ ಯಡಿಯೂರಪ್ಪನವರು ನನಗೆ ಮತ್ತು ಶ್ರೀಮಂತ ಪಾಟೀಲ್​ಗೆ ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದರು. ಯಡಿಯೂರಪ್ಪ ನಮ್ಮನ್ನು ಮಂತ್ರಿ ಮಾಡೋದಾಗಿ ಜನರ ಮುಂದೆಯೇ ಹೇಳಿದ್ದಾರೆ. ಹೀಗಾಗಿ, ಯಡಿಯೂರಪ್ಪ ಮಾತು ತಪ್ಪುವುದಿಲ್ಲ ಎಂದು ಮಹೇಶ್ ಕುಮಟಳ್ಳಿ ವಿಶ್ವಾಸ ವ್ಯಕ್ತಪಡಿಸಿದ್ದರು.
First published: