• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BS Yediyurappa: ನರೇಂದ್ರ ಮೋದಿಯಂತಹ ಪ್ರಧಾನಿ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ: ಬಿಎಸ್‌ ಯಡಿಯೂರಪ್ಪ

BS Yediyurappa: ನರೇಂದ್ರ ಮೋದಿಯಂತಹ ಪ್ರಧಾನಿ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ: ಬಿಎಸ್‌ ಯಡಿಯೂರಪ್ಪ

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಪ್ರಧಾನಿ ನರೇಂದ್ರ ಮೋದಿ ಅವರ ಹೆಜ್ಜೆಗೆ ಹೆಜ್ಜೆ ಹಾಕುವ ಸರ್ಕಾರ ರಾಜ್ಯದಲ್ಲಿ ಬೇಕಾಗಿದೆ ಎಂದ ಬಿಎಸ್‌ವೈ, ರಾಜ್ಯದ ಅಭಿವೃದ್ಧಿ ಮುಖ್ಯವಾಗಿ, ರೈತರು, ಮಹಿಳೆಯರು, ಯುವಕರು, ಮಕ್ಕಳ ಭವಿಷ್ಯಕ್ಕಾಗಿ ಮೋದಿಯವರ ಕೈ ಬಲಪಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

  • News18 Kannada
  • 4-MIN READ
  • Last Updated :
  • Bangalore, India
  • Share this:

ಬೆಂಗಳೂರು: ಕರ್ನಾಟಕದಲ್ಲಿ ಡಬಲ್ ಎಂಜಿನ್ (Double Engine Govt) ಸರ್ಕಾರ ಅಗತ್ಯ ಇದೆ. ಪ್ರಧಾನಿ ನರೇಂದ್ರ ಮೋದಿಯಂತಹ (Narendra Modi) ಮುತ್ಸದ್ದಿ ಪ್ರಧಾನಿ ದೇಶದ ಅಭಿವೃದ್ಧಿ ಬಗ್ಗೆ ಹಗಲಿರುಳು ಕೆಲಸ ಮಾಡ್ತಿದ್ದಾರೆ ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ (BS Yediyurappa) ಅಭಿಪ್ರಾಯಪಟ್ಟಿದ್ದಾರೆ.


ಚುನಾವಣೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ ಯಡಿಯೂರಪ್ಪ, ದೇಶ ವಿದೇಶಕ್ಕೆ ಹೋಗಿ ಬಂದರೂ ವಿಶ್ರಾಂತಿ ತೆಗೆದುಕೊಳ್ಳದೇ ದೇಶದ ಉದ್ದಗಲಕ್ಕೂ ನರೇಂದ್ರ ಮೋದಿ ಓಡಾಡ್ತಿದ್ದಾರೆ. ಇವಾಗ ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅಮಿತ್ ಶಾ ಮತ್ತು ನರೇಂದ್ರ ಮೋದಿ ವಿಶೇಷ ಪ್ರಯತ್ನ ಮಾಡ್ತಿದ್ದಾರೆ. ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ಬರುವ ಪ್ರಧಾನಿ ನಮಗೆಲ್ಲರಿಗೂ ಸಿಕ್ಕಿರುವುದು ಸೌಭಾಗ್ಯ ಎಂದು ಹೇಳಿದರು.


ಇದನ್ನೂ ಓದಿ: Karnataka Elections: ಸಿಎಂ ಕುರ್ಚಿಗಾಗಿ ಡಿಕೆಶಿ, ಸಿದ್ದು ಫೈಟ್​ ಮಧ್ಯೆ ಬಿಜೆಪಿ ಕೈ ಸೇರಿತು ಪ್ರಮುಖ ಅಸ್ತ್ರ!


'ನರೇಂದ್ರ ಮೋದಿ ಸಿಕ್ಕಿರೋದು ನಮ್ಮ ಸೌಭಾಗ್ಯ'


ಪ್ರಧಾನಿ ನರೇಂದ್ರ ಮೋದಿ ಅವರ ಹೆಜ್ಜೆಗೆ ಹೆಜ್ಜೆ ಹಾಕುವ ಸರ್ಕಾರ ರಾಜ್ಯದಲ್ಲಿ ಬೇಕಾಗಿದೆ ಎಂದ ಬಿಎಸ್‌ವೈ, ರಾಜ್ಯದ ಅಭಿವೃದ್ಧಿ ಮುಖ್ಯವಾಗಿ, ರೈತರು, ಮಹಿಳೆಯರು, ಯುವಕರು, ಮಕ್ಕಳ ಭವಿಷ್ಯಕ್ಕಾಗಿ ಮೋದಿಯವರ ಕೈ ಬಲಪಡಿಸುವ ಅವಶ್ಯಕತೆ ಇದೆ ಎಂದರಲ್ಲದೇ, ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮನೆ ಮನೆಗೂ ಶುದ್ದ ಕುಡಿಯುವ ನೀರಿನ ಕೆಲಸ ಆಗ್ತಿದೆ. ಮನೆ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗ್ತಿದೆ. ಮಕ್ಕಳ ಭವಿಷ್ಯಕ್ಕೆ ಒಬ್ಬ ನಾಯಕ ಸಿಕ್ಕಿರೋದು ನಮ್ಮ ಸೌಭಾಗ್ಯ ಎಂದು ಹೇಳಿದರು.


ಇದನ್ನೂ ಓದಿ: Saundatti Constituency: ರಂಗೇರಿದ ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಲ್ಲಮ್ಮನ ಕೃಪೆ ಯಾರಿಗೆ?


ದೇಶ ಆರ್ಥಿಕ ಪ್ರಗತಿ ಹೊಂದಿದೆ


ಇನ್ನು ಕೊರೋನಾದಂತಹ ಮಹಾಮಾರಿ ಬಂದಾಗ ನಮ್ಮ ಜೊತೆ ನಿಂತು ನರೇಂದ್ರ ಮೋದಿ ಅವರು ಕೋವಿಡ್‌ ನಿರ್ವಹಣೆ ಮಾಡಿದ್ದಾರೆ ಎಂದ ಯಡಿಯೂರಪ್ಪ, ದೇಶವು ಆರ್ಥಿಕ ಪ್ರಗತಿ ಹೊಂದಿದೆ. ಆರ್ಥಿಕವಾಗಿ ಸದೃಢವಾಗಿರುವ ಪಟ್ಟಿಯಲ್ಲಿ ನಮ್ಮ ದೇಶ 5ನೇ ಸ್ಥಾನದಲ್ಲಿ ಇದೆ ಮುಂದಿನ 25 ವರ್ಷಗಳಲ್ಲಿ ಭಾರತ ಪ್ರಪಂಚದಲ್ಲಿ ಮೊದಲೇ ಸ್ಥಾನದಲ್ಲಿ ಬರೋದ್ರಲ್ಲಿ ಸಂಶಯ ಇಲ್ಲ ಎಂದರು.


ಇನ್ನು ನಡ್ಡಾ, ಮೋದಿ, ಅಮಿತ್ ಶಾ ಜನರ ಬೆಂಬಲ ಕೇಳಲು ರಾಜ್ಯದ ಉದ್ದಗಲಕ್ಕೂ ಓಡಾಡಿದ್ಸಾರೆ ಎಂದ ಬಿಎಸ್‌ವೈ, ಮೋದಿಯವರು ಕರ್ನಾಟಕದ ನಾಡಿ ಮಿಡಿತ ತಿಳಿದುಕೊಂಡಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ಈ ಬಾರಿ 125 ಸೀಟು ಗೆಲ್ಲೋದು‌, ಸಮ್ಮಿಶ್ರ ಸರ್ಕಾರದ ಅನುಭವ ನನಗೆ ಆಗಿದೆ. ಇದು ಮತ್ತೊಮ್ಮೆ ಆಗಬಾರದು. ಈ ಬಾರಿ ಸ್ವಂತ ಬಲದಲ್ಲಿ ಅಧಿಕಾರ ರಚಿಸಬೇಕು ಎಂದರು.

First published: