ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಂದು ಲಿಂಗಾಯತ ಮುಖಂಡರ ಸಭೆ (Lingayat leaders meeting) ನಡೆಯಿತು. ಈ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಜಗದೀಶ್ ಶೆಟ್ಟರ್ (Jagadish Shettar) ವಿರುದ್ಧ ಗುಡುಗಿದ್ದಾರೆ. ನನ್ನ ರಕ್ತದಲ್ಲಿ ಬರೆದುಕೊಡುತ್ತೇನೆ. ಯಾವ ಕಾರಣಕ್ಕೂ ಶೆಟ್ಟರ್ ಇಲ್ಲಿಂದ ಗೆಲ್ಲಲು ಸಾಧ್ಯವಿಲ್ಲ. ಶತಾಯಗತಾಯ ಶೆಟ್ಟರ್ಗೆ ಸೋಲುಣಿಸೋದೇ ನಮ್ಮ ಗುರಿ ಅಂತ ಹೇಳಿದ್ರು.
ಶೆಟ್ಟರ್‌ಗೆ ಏನು ಅನ್ಯಾಯ ಮಾಡಿದ್ದೇವೆ?
ಜಗದೀಶ್ ಶೆಟ್ಟರ್ ಬಗ್ಗೆ ನಡೆದ ಬಗ್ಗೆ ಸತ್ಯ ಸಂಗತಿ ಹೇಳಲು ವೀರಶೈವ ಸಭೆ ಕರೆದಿದ್ದೇನೆ ಅಂತ ಮಾತು ಆರಂಭಿಸಿದ ಬಿಎಸ್‌ವೈ, ಶೆಟ್ಟರ್ ರನ್ನ ಸಿಎಂ, ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದೇವೆ. ಬಿ.ಬಿ.ಶಿ ವಪ್ಪ ಅವರನ್ನು ಬಿಟ್ಟು ಶೆಟ್ಟರ್ ಪರವಾಗಿ ನಿಂತು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದೆವು. ಅವರಿಗೆ ಏನು ಅನ್ಯಾಯ ಮಾಡಿದ್ದೆವು ಅಂತ ಪ್ರಶ್ನಿಸಿದ್ದರು.
ಪ್ರಧಾನಿಗಳ ಮಾತಿಗೂ ಒಪ್ಪಲಿಲ್ಲ ಶೆಟ್ಟರ್
ಸ್ವತಃ ಪ್ರಧಾನಿಗಳೇ ಮಾತನಾಡಿದರು. ನಿಮ್ಮ ಶ್ರೀಮತಿಯವರನ್ನು ನಿಲ್ಲಿಸಿ, ಅವರಿಗೆ ಟಿಕೇಟ್ ಕೊಡ್ತೇವೆ ಅಂದರು. ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿ ಆಗುವಂತೆ ಆಫರ್ ನೀಡಲಾಯಿತು. ಇಷ್ಟೆಲ್ಲ ಆದಮೇಲೂ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಗೆ ಹೋಗಿದ್ದಾರೆ ಅಂತ ಬಿಎಸ್‌ವೈ ಆರೋಪಿಸಿದರು.
ಶೆಟ್ಟರ್ಗೆ ದಯನೀಯ ಸೋಲಾಗುವಂತೆ ಮಾಡಿ
ಯಾವುದೇ ಕಾರಣಕ್ಕೂ ಶೆಟ್ಟರ್ ಪರವಾಗಿ ನಿಲ್ಲಬೇಡಿ, ಚುನಾವಣೆಯಲ್ಲಿ ದಯನೀಯ ಸೋಲಾಗುವಂತೆ ಮಾಡಬೇಕು. ಅದೇ ಅವರಿಗೆ ಪಾಠವಾಗಲಿದೆ ಅಂತ ಬಿಎಸ್‌ವೈ ಹೇಳಿದ್ದಾರೆ. ಬೆಂಗಳೂರಲ್ಲಿ 30 ಜನ ಮುಖಂಡರ ಸಭೆ ಮಾಡಿದ್ದೇನೆ. ಕಾಂಗ್ರೆಸ್ ನನ್ನ ಬಗ್ಗೆ ಸಿಂಪಥಿ ಕ್ರಿಯೇಟ್ ಮಾಡ್ತಿದಾರೆ. ಆದರೆ ಬೇರೆಯವರಿಗೆ ಸಿಎಂ ಮಾಡಲು ನಾನು ಸ್ವತಃ ರಾಜೀನಾಮೆ ನೀಡಿದ್ದೇನೆ. ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಅನ್ನೋ ಮಾತನ್ನ ಪಿಎಂಗೆ ಹೇಳಿದ್ದೆ ಅದರಂತೆಯೇ ಬಿಜೆಪಿಯನ್ನು ಅಧಿಕಾರಕ್ಕೆ ತರೋಕೆ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ ಅಂತ ಬಿಎಸ್‌ವೈ ಸ್ಪಷ್ಟಪಡಿಸಿದ್ರು.
ಶೆಟ್ಟರ್ ವಿರುದ್ಧ ಬಿಎಸ್‌ವೈ ಗುಡುಗು
ಜಗದೀಶ್ ಶೆಟ್ಟರ್ ಎಲ್ಲ ಬಿಟ್ಟು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇದನ್ನು ಸವಾಲಾಗಿ ಸ್ವೀಕಾರ ಮಾಡಿ, ನನ್ನ ರಕ್ತದಲ್ಲಿ ಬರೆದುಕೊಡ್ತೇನೆ ಯಾವ ಕಾರಣಕ್ಕೂ ಶೆಟ್ಟರ್ ಇಲ್ಲಿಂದ ಗೆಲ್ಲಲು ಸಾಧ್ಯವಿಲ್ಲ. ನಾಳೆ ರಾಲಿ ಏರ್ಪಡಸಲಾಗಿದೆ. ಹತ್ತಾರು ಸಾವಿರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ರಾಜಕೀಯ ದೊಂಬರಾಟ ಮಾಡೋರಿಗೆ ತಕ್ಕ ಪಾಠ ಕಲಿಸಬೇಕು ಅಂತ ಹೇಳಿದ್ದಾರೆ.
ಮನೆಯಲ್ಲಿ ಕುಳಿತ ಶೆಟ್ಟರ್‌ಗೆ ನಡುಕ ಉಂಟಾಗಬೇಕು!
ಬೃಹತ್ ಮೆರವಣಿಗೆ ಆಯೋಜಿಸಬೇಕು. ಹತ್ತು, ಹನ್ನೆರಡು ಸಾವಿರ ಜನರನ್ನು ಸೇರಿಸಿ ಮನೆಯಲ್ಲಿ ಕುಳಿತ ಶೆಟ್ಟರ್ ಗೆ ನಡುಕ ಉಂಟಾಗಬೇಕು. ಪ್ರಧಾನಿ ಮತ್ತೊಮ್ಮೆ ಬರೋ ಸಂಭವ ಇದೆ. ಇವತ್ತಿನಿಂದ ಜಗದೀಶ್ ಶೆಟ್ಟರ್ ಹೆಸರನ್ನು ಹೇಳಲ್ಲ, ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ ಎನ್ನುತ್ತೇನೆ. ಪಕ್ಷಾಂತರಿಗಳಿಗೆ ಕ್ಷಮಿಸೋದಿಲ್ಲ ಅನ್ನೋ ಸುದ್ದಿ ಎಲ್ಲೆಡೆ ಹೋಗಬೇಕು ಅಂತ ಕರೆ ಕೊಟ್ಟರು.
ಇದನ್ನೂ ಓದಿ: Lingayat: ಶೆಟ್ಟರ್, ಸವದಿಗೆ ಕಾಂಗ್ರೆಸ್‌ನಲ್ಲಿ ಜೈ! ಲಿಂಗಾಯತ ಮತಬುಟ್ಟಿಗೆ ಹಾಕಿದ್ರಾ 'ಕೈ'?
ಶೆಟ್ಟರ್ ಸೋಲಿಸೋದೇ ಕೆಲಸವಾಗಬೇಕು
ಪ್ರಹ್ಲಾದ್ ಜೋಶಿ ಮತ್ತು ಇತರೆ ನಾಯಕರು ಕೆಲಸ ಬದಿಗೊತ್ತಿ ಎಲ್ಲ ಮುಖಂಡರು ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಜಗದೀಶ್ ಶೆಟ್ಟರ್ ಕಂಪನಿಗೆ ಪಾಠ ಕಲಿಸಬೇಕು. ಶೆಟ್ಟರ್ ಸೋಲಿಸೋದೇ ಒಂದೇ ಒಂದು ಕಾರ್ಯಕ್ರಮ ಅಂತ ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ