ಬೆಂಗಳೂರು: ಯಡಿಯೂರಪ್ಪ (Former CM B.S Yediyurappa) ಬಿಜೆಪಿ (BJP) ಯಲ್ಲಿ ಮೂಲೆಗುಂಪಾಗಿದ್ದಾರೆ. ಹೀಗಂತ ಮಾಜಿ ಸಿಎಂಗಳಾದ ಸಿದ್ದರಾಮಯ್ಯ (Siddaramaiah), ಕುಮಾರಸ್ವಾಮಿ (HD Kumaraswamy) ಇಬ್ಬರೂ ಪದೇ ಪದೆ ಹೇಳುತ್ತಿದ್ದರು. ಈಗ ಮತ್ತೆ ಯಡಿಯೂರಪ್ಪರಿಗೆ ಬಿಜೆಪಿ ಮಣೆ ಹಾಕಿದೆ. ವಿಜಯೇಂದ್ರಗೆ (B.Y Vijayendra) ಪಕ್ಷ ಹೊಸ ಹೊಣೆ ಕೊಟ್ಟಿದೆ. ಹೌದು, ರಾಜ್ಯದಲ್ಲಿ ಚುನಾವಣೆ ರಂಗು (Karnataka Election 2023) ದಿನೇ ದಿನೇ ಜೋರಾಗುತ್ತಿದೆ. ಗೆಲುವಿಗೆ ತಂತ್ರ ಪ್ರತಿತಂತ್ರಗಳು ಮಸ್ತಾಗಿಯೇ ನಡೆಯುತ್ತಿದೆ. ಕಾಂಗ್ರೆಸ್ (Congress) ಒಂದು ಪ್ಲಾನ್ ಮಾಡಿದ್ರೆ, ಜೆಡಿಎಸ್ (JDS) ಒಂದು ಪ್ಲಾನ್, ಬಿಜೆಪಿಯದ್ದು ಮತ್ತೊಂದು ಪ್ಲಾನ್. ಈ ಮಧ್ಯೆ ವಿಪಕ್ಷಗಳನ್ನ ಕಟ್ಟಿಹಾಕಿ ಮತಬೇಟೆಗೆ ಬಿಜೆಪಿ, ರಾಜಾಹುಲಿ ಆ್ಯಂಡ್ ಸನ್ಸ್‌ನ ಮತ್ತೆ ಮುನ್ನೆಲೆಗೆ ತರುತ್ತಿದ್ದಾರೆ.
ವಿರೋಧ ಪಕ್ಷಗಳ ಟೀಕೆಗೆ ರಾಜ್ಯ ಬಿಜೆಪಿ ಉತ್ತರ
ರಾಜ್ಯ ಬಿಜೆಪಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಎಂದರೆ ಅದರ ಖದರ್ರೇ ಬೇರೆ. ಸಿಎಂ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿದ ಬಳಿಕ ಸಂಸದೀಯ ಮಂಡಳಿಯಲ್ಲಿ ಸಕ್ರಿಯರಾಗಿದ್ದರು. ಇದು, ಜೆಡಿಎಸ್, ಕಾಂಗ್ರೆಸ್‌ಗೆ ಟೀಕೆಗೆ ಒಂದು ಅಸ್ತ್ರವಾಗುವುದರ ಜೊತೆಗೆ ಒಳಗೊಳಗೆ ಖುಷಿಯನ್ನೂ ಪಟ್ಟಿದ್ದವು.
ಅಷ್ಟೇ ಇಲ್ಲ ಇದೇ ವಿಚಾರವನ್ನ ಮುಂದಿಟ್ಟುಕೊಂಡು ಬಿಎಸ್ ಯಡಿಯೂರಪ್ಪ ಅವರನ್ನೇ ಸೈಡ್‌ಲೈನ್ ಮಾಡಿದ ಪಕ್ಷ ಬಿಜೆಪಿ ಅಂತೆಲ್ಲ ಪದೇ ಪದೆ ಟೀಕಿಸುತ್ತಿದ್ದರು. ಹೆಚ್‌ಡಿಕೆ ಕೂಡ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡುವ ಪ್ಲಾನ್ ನಡೆಯುತ್ತಿದೆ ಅಂತ ಬಾಂಬ್ ಸಿಡಿಸಿದ್ದರು. ಆದರೆ ಇದಕ್ಕೆಲ್ಲ ಈಗ ಮತ್ತೆ ರಾಜ್ಯ ಬಿಜೆಪಿ ಉತ್ತರ ಕೊಟ್ಟಿದೆ.
ರಾಜ್ಯ ಬಿಜೆಪಿಗೆ ಬಿಎಸ್‌ವೈ ಅನಿವಾರ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಚುನಾವಣೆ ಎಂದರೆ ಕೇಳಬೇಕಾ? ಇದೀಗ ಚುನಾವಣೆ ಗೆಲ್ಲುವ ದೃಷ್ಟಿಯಿಂದ ಅವರನ್ನೇ ಮುಖ್ಯ ನಾಯಕರಾಗಿ ಬಳಸಿಕೊಳ್ಳಲು ಪ್ಲಾನ್ ಮಾಡಿದೆ. ಫೆಬ್ರವರಿ ಕೊನೆಯ ವಾರದಿಂದ ಶುರುವಾಗಲಿರುವ ನಾಲ್ಕು ಭಾಗದ ರಥಯಾತ್ರೆಗಳಲ್ಲೂ ಬಿಎಸ್ ಯಡಿಯೂರಪ್ಪ ಅವರ ಮೂಲಕ ಪ್ರಚಾರಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.
ಬಿಎಸ್‌ವೈ ರಿಟರ್ನ್ ಯಾಕೆ? ಹೈಕಮಾಂಡ್ ಅಲರ್ಟ್ ಆಗಿದ್ದು ಏಕೆ?
ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಿಎಸ್ ಯಡಿಯೂಪ್ಪ ಅವರನ್ನು ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬ ಟೀಕೆ ಪದೇ ಪದೆ ಕೇಳಿ ಬರುತ್ತಿತ್ತು. ಅಲ್ಲದೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಬಗ್ಗೆ ಯಡಿಯೂರಪ್ಪ ಅವರು ಸಾಫ್ಟ್ ಕರ್ನರ್ ತೋರಿಸುತ್ತಿದ್ದಾರೆ, ಇದರ ಲಾಭ ಪಡೆಯಲು ಪ್ಲಾನ್ ಮಾಡಿದ್ದಾರೆ ಎಂಬ ಚರ್ಚೆ ಜೋರಾಗಿತ್ತು.
ಇದನ್ನೂ ಓದಿ: Karnataka Election 2023: ಬಿಎಸ್‌ವೈ ಜೊತೆ ಪ್ರಧಾನಿ ಮೋದಿ 1 ಗಂಟೆ ಮಾತುಕತೆ; ಮತ್ತೆ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಮಣೆ!
ಇದು ಕಾಂಗ್ರೆಸ್‌ಗೆ ಅನುಕೂಲ ಆಗುತ್ತೆ ಅನ್ನೋದು ಲೆಕ್ಕಾಚಾರ ಒಂದೆಡೆಯಾದರೆ, ಬಿಎಸ್ ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡುತ್ತಿಲ್ಲ ಅನ್ನೋ ಸಂದೇಶವನ್ನು ಬಿಜೆಪಿ ಹೈಕಮಾಂಡ್ ಕೊಡಬೇಕಾಗಿತ್ತು. ಜೊತೆಗೆ ಬಹುತೇಕ ಬಿಜೆಪಿ ಶಾಸಕರು ಕೂಡ ಪ್ರಚಾರಕ್ಕೆ ಬಿಎಸ್ ಯಡಿಯೂರಪ್ಪ ಅವರು ಬರಲೇಬೇಕು ಅಂತ ಪಟ್ಟು ಹಿಡಿದಿದ್ದರು. ಹೀಗಾಗಿ ವಿಚಾರ ಸೂಕ್ಷ್ಮ ಆಗುತ್ತಿದ್ದಂತೆ ಹೈಕಮಾಂಡ್ ಅಲರ್ಟ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ