BS Yediyurappa Resigns: ಬಿಎಸ್​ವೈ ಈಗ ಹಂಗಾಮಿ ಸಿಎಂ; ಹಂಗಾಮಿ ಮುಖ್ಯಮಂತ್ರಿಗೆ ಏನೆಲ್ಲಾ ಅಧಿಕಾರ ಇರುತ್ತೆ?

BS Yediyurappa Resigns: ಇತ್ತ ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆ, ಅತ್ತ ಕೇಂದ್ರ ಗೃಹ ಸಚಿವ ಅಮಿತ್​ ಶಾ ತುರ್ತು ಸಭೆ ಕರೆದಿದ್ದಾರೆ. ಸಂಸತ್​ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರಹ್ಲಾದ್ ಜೋಶಿ, ಅರುಣ್ ಸಿಂಗ್ ಭಾಗಿಯಾಗಿದ್ದಾರೆ.

ಬಿ.ಎಸ್.​ ಯಡಿಯೂರಪ್ಪ.

ಬಿ.ಎಸ್.​ ಯಡಿಯೂರಪ್ಪ.

 • Share this:
  ಬೆಂಗಳೂರು(ಜು.26): ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಇಂದು ಬಿಎಸ್​ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷಗಳು ತುಂಬಿದ ಸಂಭ್ರಮ ಒಂದೆಡೆಯಾದರೆ, ಬಿಎಸ್​ವೈ ರಾಜೀನಾಮೆ ನೀಡಿದ್ದು ಮತ್ತೊಂದೆಡೆಯಾಗಿದೆ.  ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ನಡೆದ ಸಾಧಕ ಸಮಾವೇಶದಲ್ಲಿ ಬಿಎಸ್​ ಯಡಿಯೂರಪ್ಪ ರಾಜೀನಾಮೆ ಘೋಷಿಸಿದರು. ಬಳಿಕ ಅಲ್ಲಿಂದ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಬಿಎಸ್​ವೈ ಅವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.

  ಮುಂದಿನ ಸಂಪುಟ ರಚನೆವರೆಗೂ ಹಂಗಾಮಿ ಸಿಎಂ ಆಗಿ ಮುಂದುವರೆಯುವಂತೆ ರಾಜ್ಯಪಾಲರು ಬಿಎಸ್​ವೈಗೆ ಸೂಚನೆ ನೀಡಿದ್ದಾರೆ. ಯಡಿಯೂರಪ್ಪ ಕೇರ್ ಟೇಕರ್ ಮುಖ್ಯಮಂತ್ರಿಯಾಗಿ ಮುಂದುವರಿಯುಂತೆ ಆದೇಶ ನೀಡಲಾಗಿದೆ. ಮುಂದಿನ ಸಿಎಂ ಆಯ್ಕೆವರೆಗೂ ಹಂಗಾಮಿ ಸಿಎಂ ಆಗಿ ಮುಂದುವರೆಯಲು ಆದೇಶ ನೀಡಿದ್ದಾರೆ. ರಾಜೀನಾಮೆ ಅಂಗೀಕಾರದ ಬಳಿಕ ಬಿಎಸ್​ ಯಡಿಯೂರಪ್ಪ ಸಂಪುಟ ವಿಸರ್ಜನೆ ಆಗಿದೆ. ಮುಂದಿನ ಸಿಎಂ ಆಯ್ಕೆಯಾದ ಬಳಿಕ ಹೊಸ ಸಚಿವ ಸಂಪುಟ ರಚನೆ ಆಗಲಿದೆ. ಅಲ್ಲಿಯರೆಗೂ ಬಿಎಸ್​ವೈ ಕೇರ್  ಟೇಕರ್​ ಆಗಿ ಮುಂದುವರೆಯುತ್ತಾರೆ.

  ಇದನ್ನೂ ಓದಿ:Gold Price Today: ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ; ನಿನ್ನೆಯಿಂದ ಚಿನ್ನದ ಬೆಲೆ ಏರಿಕೆಯಾಗಿಲ್ಲ..!

  ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ವೈ ರಾಜೀನಾಮೆ ಹಿನ್ನೆಲೆ,  ಸಚಿವರ ಜೊತೆಗೆ ಹಂಗಾಮಿ ಸಿಎಂ ಬಿಎಸ್ವೈ ಸಭೆ ನಡೆಸಿದ್ದಾರೆ. ತಮ್ಮ ರಾಜೀನಾಮೆ ನಿರ್ಧಾರ, ಹೈಕಮಾಂಡ್ ಕೊಟ್ಟ ಸಂದೇಶ ಹಾಗೂ ಮುಂದಿನ ವರಿಷ್ಠರ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಾವೇರಿ ನಿವಾಸದಲ್ಲಿ ಹಂಗಾಮಿ ಮಹತ್ವದ ಸಮಾಲೋಚನೆ ನಡೆಯುತ್ತಿದೆ. ಅಧಿಕಾರದಿಂದ ಕೆಳಗೆ ಇಳಿದ ನಂತರ ಹಂಗಾಮಿ ಸಿಎಂ ರಿಂದ ಚರ್ಚೆ ನಡೆಯುತ್ತಿದೆ. ಬಸವರಾಜ್ ಬೊಮ್ಮಾಯಿ, ಲಕ್ಷ್ಮಣ ಸವದಿ, ಅಶ್ವಥ್ ನಾರಾಯಣ್, ಸುಧಾಕರ್,ಸಿಸಿ ಪಾಟೀಲ್, ಎಂಟಿಬಿ ನಾಗರಾಜ್, ಶಾಸಕರಾದ ಮುನಿರತ್ನ, ಎಂಪಿ ರೇಣುಕಾಚಾರ್ಯ ಕೂಡ ಭಾಗಿಯಾಗಿದ್ದಾರೆ.

  ಇತ್ತ ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆ, ಅತ್ತ ಕೇಂದ್ರ ಗೃಹ ಸಚಿವ ಅಮಿತ್​ ಶಾ ತುರ್ತು ಸಭೆ ಕರೆದಿದ್ದಾರೆ. ಸಂಸತ್​ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರಹ್ಲಾದ್ ಜೋಶಿ, ಅರುಣ್ ಸಿಂಗ್ ಭಾಗಿಯಾಗಿದ್ದಾರೆ.

  ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಯಡಿಯೂರಪ್ಪ,  ದೇಶದ ಪ್ರಧಾನಿ ಮೋದಿ ಅವರಿಗೆ  ಕೃತಜ್ಞತೆ ಸಲ್ಲಿಸುತ್ತೇನೆ. 75 ವಯಸ್ಸು ಮೀರಿದವರಿಗೆ ಎಲ್ಲೂ ಹುದ್ದೆ ನೀಡಿಲ್ಲ. ಆದರೆ ನನಗೆ ಅವಕಾಶ ಮಾಡಿಕೊಟ್ಟಿದ್ದರು. ಎರಡು ತಿಂಗಳ ಹಿಂದೆ ರಾಜೀನಾಮೆ ನೀಡಲು ತೀರ್ಮಾನ ಮಾಡಿದ್ದೆ, ಅದರಂತೆ ಇಂದು ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದೇನೆ. ಗೃಹ ಸಚಿವರಾದ ಅಮಿತ್ ಶಾ ಅವರಿಗೂ ಅಭಿನಂದನೆಗಳನ್ನು ಸಲ್ಲಿಸ್ತೀನಿ. ಶಿಕಾರಿಪುರದ ಜನತೆ ಹಾಗೂ ರಾಜ್ಯದ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

  ಇದನ್ನೂ ಓದಿ:BS Yediyurappa Resigns: ಬಿ ಎಸ್ ಯಡಿಯೂರಪ್ಪ ರಾಜೀನಾಮೆ; 2 ವರ್ಷಗಳ ಹಾದಿಯ ಏಳು-ಬೀಳುಗಳು ಸಾಮಾನ್ಯದ್ದಲ್ಲ!

  ಮುಂದುವರೆದ ಅವರು, ನನಗೆ ಹೈಕಮಾಂಡ್ ಯಾವುದೇ ಒತ್ತಡ ಹೇರಿಲ್ಲ. ನಾನೇ ರಾಜೀನಾಮೆ ನೀಡಿ ತೆರಳುತ್ತಿದ್ದೇನೆ. ಹೈಕಮಾಂಡ್‌ ರಾಜೀನಾಮೆ ನೀಡಲು‌ ಹೇಳಿಲ್ಲ. ಸಿಎಂ ಸ್ಥಾನಕ್ಕೆ ನಾನು ಯಾವುದೇ ವ್ಯಕ್ತಿಯನ್ನು ಸೂಚಿಸಿಲ್ಲ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಹೇಳುವುದಿಲ್ಲ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ರಾಜ್ಯಪಾಲ ಹುದ್ದೆ ನನಗೆ ಬೇಡ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಇದ್ದಾಗ ಕೇಂದ್ರ ಮಂತ್ರಿ ಮಾಡಲು ಕೇಳಿದ್ದರು.  ನಾನು ಕರ್ನಾಟಕ ಬಿಟ್ಟು ಹೋಗಿಲ್ಲ, ಈಗಲೂ ಅಷ್ಟೇ ಎಂದರು.

  ಹಂಗಾಮಿ ಸಿಎಂ ಯಾವೆಲ್ಲಾ ಅಧಿಕಾರ ಇರುತ್ತೆ?

  ಸದ್ಯ ಬಿಎಸ್​ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯಪಾಲರು ಈಗಾಗಲೇ ರಾಜೀನಾಮೆಯನ್ನು ಅಂಗೀಕಾರ ಕೂಡ ಮಾಡಿದ್ದಾರೆ. ಬಿಎಸ್​ವೈ ಈಗ ಸಿಎಂ ಆಗಿ ಉಳಿದಿಲ್ಲ. ಬದಲಾಗಿ ಹಂಗಾಮಿ ಸಿಎಂ ಆಗಿ ಮುಂದುವರೆಯುವಂತೆ ರಾಜ್ಯಪಾಲರು ಯಡಿಯೂರಪ್ಪನವರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಮುಂದಿನ ಮುಖ್ಯಮಂತ್ರಿ ಆಯ್ಕೆಯಾಗುವವರೆಗೂ ಬಿಎಸ್​ವೈ ಹಂಗಾಮಿ ಸಿಎಂ ಆಗಿ ಇರಲಿದ್ದಾರೆ.

  ಹಂಗಾಮಿ ಸಿಎಂಗೆ ಮುಖ್ಯಮಂತ್ರಿಗಳಿಗೆ ಇರುವ ಅಧಿಕಾರ ಇರುವುದಿಲ್ಲ. ಯಾವುದೇ ಹೊಸ ಬಿಲ್​ ಪಾಸ್​ ಮಾಡುವ ಅಧಿಕಾರ ಇರಲ್ಲ.  ಸಿಎಂ ರೀತಿಯೇ ಇರುತ್ತಾರೆ, ಆದರೆ ತಾತ್ಕಾಲಿಕವಾಗಿ ಇರುತ್ತಾರೆ. ಯಾವುದೇ ವಿಶೇಷ ಅಧಿಕಾರವೂ ಇರುವುದಿಲ್ಲ. ಈಗಾಗಲೇ ಬಿಲ್ ಪಾಸ್ ಮಾಡಿರುವ, ಅಂದರೆ ಬಾಕಿ ಉಳಿದಿರುವ, ಆಗಲೇಬೇಕಿರುವ ಕೆಲಸಗಳನ್ನು ಮಾಡಬಹುದು.

  ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆ ಅಂಗೀಕರಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಂದಿನ ಸಿಎಂ ನೇಮಕವಾಗುವವರೆಗೆ ಹಂಗಾಮಿ ಸಿಎಂ ಆಗಿರುವಂತೆ ಬಿಎಸ್ ಯಡಿಯೂರಪ್ಪಗೆ ಸೂಚನೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನದ ನಂತರ 2019 ಜುಲೈ 26 ರಂದು ಬಿಎಸ್ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
  Published by:Latha CG
  First published: