Rahul Gandhi ಬಗ್ಗೆ ಗೌರವ ಇದೆ, ಹಾಗೆ ಮಾತಾಡಬಾರದು: ಕಟೀಲ್ ಹೇಳಿಕೆಗೆ ಯಡಿಯೂರಪ್ಪ ಅಸಮಾಧಾನ

ರಾಹುಲ್ ಗಾಂಧಿ ಅವರ ಬಗ್ಗೆ ಗೌರವ ಇದೆ. ಅಗೌರವ ತರುವ ಹಾಗೆ ಯಾರೂ ಮಾತನಾಡಬಾರದು, ಈ ರೀತಿ ಯಾರು ಮಾತನಾಡಬಾರದು ಎಂದು ಹೇಳುವ ಮೂಲಕ ನಳಿನ್ ಕುಮಾರ್ ಕಟೀಲ್ ಹೇಳಿಗೆ ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದರು.

ಬಿ ಎಸ್ ಯಡಿಯೂರಪ್ಪ

ಬಿ ಎಸ್ ಯಡಿಯೂರಪ್ಪ

  • Share this:
ವಿಜಯಪುರ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಡ್ರಗ್ ಅಡಿಕ್ಟ್ ಮತ್ತು ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಅಸಮಾಧಾನ ಹೊರ ಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ (Sindagi By Election) ಮೊರಟಗಿಯಲ್ಲಿ ಮಾತನಾಡಿದ ಮಾಜಿ ಸಿಎಂ, ರಾಹುಲ್ ಗಾಂಧಿ ಅವರ ಬಗ್ಗೆ ಗೌರವ ಇದೆ. ಅಗೌರವ ತರುವ ಹಾಗೆ ಯಾರೂ ಮಾತನಾಡಬಾರದು, ಈ ರೀತಿ ಯಾರು ಮಾತನಾಡಬಾರದು ಎಂದು ಹೇಳುವ ಮೂಲಕ ನಳಿನ್ ಕುಮಾರ್ ಕಟೀಲ್ ಹೇಳಿಗೆ ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದರು.

ಹೆಚ್ ಡಿಕೆ, ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ (H D Kumaraswamy ) ಮತ್ತು ಸಿದ್ದರಾಮಯ್ಯ (Siddaramaiah) ಭ್ರಮೆಯಲ್ಲಿದ್ದಾರೆ.ಅನಗತ್ಯವಾಗಿ ಏನೋ ಸಾಧನೆ ಮಾಡಿದ್ದೇವೆ ಎಂಬ ರೀತಿಯಲ್ಲಿ ಇಬ್ಬರು ಮಾತನಾಡುತ್ತಿದ್ದಾರೆ, ಆರ್ ಎಸ್ಎಸ್ (RSS) ಬಗ್ಗೆ ಮಾತನಾಡೋದರಿಂದ ಯಾವುದೇ ಲಾಭ ಇಲ್ಲ. ಆರ್‌ಎಸ್ಎಸ್ ಹೆಸರು ಬಳಸುವುದು ಅಗತ್ಯ ಇಲ್ಲ. ಕುಮಾರಸ್ವಾಮಿ ಯಾವಾಗ ಏನು ಮಾತನಾಡುತ್ತಾರೆ ಎಂಬುವುದು ಅವರಿಗೆ ಗೊತ್ತಿರಲ್ಲ. ಮತದಾರರಿಗೆ ಗೊತ್ತು ಇದೆ ಯಾವುದು ಸರಿ ಯಾವುದು ತಪ್ಪು. ಈ ಬಾರಿ ಚುನಾವಣೆಯಲ್ಲಿ ಮತದಾರರು ಉತ್ತರ ನೀಡುತ್ತಾರೆ ಎಂದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ:  Rahul Gandhi ಅಫೀಮ್ ನಲ್ಲಿರ್ತಾರೆ, HDK ರಹಸ್ಯ ನನ್ನ ಬಳಿಯಲ್ಲಿದೆ: ಶಾಸಕ Yatnal

ಬಿಜೆಪಿ ಸರ್ಕಾರದ ಸಾಧನೆ ತಿಳಿಸಿದ BSY

ಮೊದಲು ಕಾಂಗ್ರೆಸ್ ಸುಳ್ಳು ಹೇಳಿಕೊಂಡು ಅಧಿಕಾರ ಮಾಡುತ್ತಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ (Prime Minister Narendra Modiನೇತೃತ್ವದಲ್ಲಿ ೨೬ರಾಜ್ಯಗಳಲ್ಲಿ ಅಧಿಕಾರ ನಡೆಸ್ತಿದ್ದೇವೆ. ತಿಂಗಳಿಗೆ ೧,೨೦೦ ಹೆಣ್ಣು ಮಕ್ಕಳಿಗೆ, ವೃದ್ಯಾಪ್ಯ ವೇತನ ಕೊಡುತ್ತಿರುವುದರಿಂದ ಮನೆಯಲ್ಲಿ ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ. ಇನ್ನೆರಡು ವರ್ಷದಲ್ಲಿ ಎಲ್ಲ‌ ಬಡವರಿಗೂ ಜಾಗ ಕೊಟ್ಟು, ನಿಮ್ಮ ಮನೆ ಬಾಗಿಲಿಗೆ ಬಂದು ಮನೆ ಕಟ್ಟಿಸಿ ಕೊಡುವ ಕೆಲಸ ಮಾಡಲಿದ್ದೇವೆ. ರಾಜ್ಯದಲ್ಲಿನ ರೈತರಿಗೆ ಸುವರ್ಣ ಭೂಮಿ ಯೋಜನೆ, ಪ್ರವಾಹ ಪೀಡಿತ ಕುಟುಂಬಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಕೊಡುವ ಕೆಲಸ ಆರಂಭವಾಗಿದೆ ಎಂದು ತಿಳಿಸಿದರು.

ಅಭ್ಯರ್ಥಿ ಪರ ಮತಯಾಚನೆ:

ಎರಡು ಸಾವಿರ ಕೋಟಿ ಖರ್ಚು ಮಾಡಿ ಕಾಗಿನೆಲೆಯನ್ನು ಸುಂದರ ನಗರವಾಗಿ ಪರಿವರ್ತನೆ ಮಾಡಿದ್ದೇವೆ, ಹಾಲುಮತ ಜನರು ಬಂದು ನೋಡಬಹುದು. ಮನೆ ಹಾಳಾದವರಿಗೆ ಹತ್ತು ಸಾವಿರದಿಂದ ಐದು ಲಕ್ಷದ ವರೆಗೆ ಪರಿಹಾರ ಕೊಟ್ಟಿದ್ದೇವೆ. ಎಲ್ಲ ವರ್ಗದ ಜನರಿಗೆ ಒಂದೇ ತಾಯಿ ಮಕ್ಕಳಂತೆ ನೋಡುವ ಕೆಲಸ ನಾವು ಮಾಡಿದ್ದೇವೆ. ದಯಮಾಡಿ ರಮೇಶ್ ಭೂಸನೂರಗೆ ಮತ ಹಾಕಿ ಚುನಾಯಿಸಿ. ಕಮಲದ ಹೂವಿನ ಗುರುತಿಗೆ 30ಕ್ಕೆ ತಪ್ಪದೆ ಬಂದು ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ:  Rahul Gandhi ಡ್ರಗ್​ ಪೆಡ್ಲರ್​ ಎಂಬ ಹೇಳಿಕೆ: ಬಿಜೆಪಿ ಅಧ್ಯಕ್ಷ ಕಟೀಲ್​ ಒಬ್ಬ ಅವಿವೇಕಿ ಎಂದ ಗುಂಡೂರಾವ್​

ರಾಜಾಹುಲಿ ಘೋಷಣೆ

ತೋಟಗಾರಿಕೆ ಕ್ಷೇತ್ರಕ್ಕೆ ಮೂರು ಉತ್ಕಷ್ಟ ಕೇಂದ್ರ ಸ್ಥಾಪಿಸಲಾಗಿದೆ. ರೈತರ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇದು ಮಹತ್ತರವಾದ ಚುನಾವಣೆ ಇದೆ. ಈ ಚುನಾವಣೆ ವೇಳೆ ಕಾಂಗ್ರೆಸ್ ನಾಯಕರು, ವಿರೋಧಿಗಳು ಮೋದಿ ಬಗ್ಗೆ ಹಗುರವಾಗಿ ಮಾತಾಡ್ತಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಮುಂದಿನ ಚುನಾವಣೆಯಲ್ಲಿ ಮೋದಿ ಅವರೇ ಗೆದ್ದು ಪ್ರಧಾನಿ‌ಯಾಗಿ ದೇಶವನ್ನು ಪ್ರಪಂಚದಲ್ಲೇ ಮುನ್ನೆಡೆಸುತ್ತಾರೆ ಎಂದು ಹೇಳಿದರು. ಇನ್ನು ಯಡಿಯೂರಪ್ಪನವರು ವೇದಿಕೆಯತ್ತ ಅಗಮಿಸುತ್ತಿದ್ದಂತೆ ಅಭಿಮಾನಿಗಳು ರಾಜಾಹುಲಿ ಎಂದು ಘೋಷಣೆ ಕೂಗಲಾರಂಭಿಸಿದರು. ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಎಂಟಿಬಿ ನಾಗರಾಜ್ ಹಾಗೂ ಇತರ ಜನಪ್ರತಿನಿಧಿಗಳು ಯಡಿಯೂರಪ್ಪನವರಿಗೆ ಸಾಥ್ ನೀಡಿದರು.

ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?

ರಾಹುಲ್ ಗಾಂಧಿ(Rahul Gandhi) ಒಬ್ಬ ಡ್ರಗ್ ಅಡಿಕ್ಟ್(Drug Addict), ಡ್ರಗ್  ಪೆಡ್ಲರ್(Drug Peddler) ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(BJP State President Nalin Kumar Kateel) ವಿವಾದಾತ್ಮಕ ಹೇಳಿಕೆ(Controversial Statement) ನೀಡಿದ್ದಾರೆ. ಹುಬ್ಬಳ್ಳಿ(Hubli)ಯಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣೆ ಪೂರ್ವ ಸಿದ್ಧತೆ ಸಭೆ(Pre-Poll Election preparation meeting)ಯಲ್ಲಿ ಮಾತನಾಡಿದ ಕಟೀಲ್, ರಾಹುಲ್ ಗಾಂಧಿ ಒರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತ ವರದಿ ಇವೆ ಎಂದು ಆರೋಪಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ(National Congress President)ರೂ ಜೈಲಿಗೆ ಹೋಗಿದ್ದರು. ಇತ್ತ ರಾಜ್ಯಾಧ್ಯಕ್ಷ ತಿಹಾರ್ ಜೈಲಿಗೆ ಹೋಗಿದ್ದರು. ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋದ್ರಾ..? ಇಲ್ಲಾ ಸಂಗ್ರಾಮದ ಕಥೆ ಬರೆಯಲು ಹೋಗಿದ್ರಾ..?ಇಂಥವರು ನಮ್ಮ ಮೋದಿ ಬಗ್ಗೆ ಟೀಕಿಸ್ತಾರೆ ಎಂದು ಕಿಡಿಕಾರಿದರು.
Published by:Mahmadrafik K
First published: