HOME » NEWS » State » BS YEDIYURAPPA IS A FAKE FARMER LEADER SIDDARAMAIAH LASHES OUT AT BJP GOVERNMENT SCT

ಸಿಎಂ ಯಡಿಯೂರಪ್ಪ ಡೋಂಗಿ ರೈತ ನಾಯಕ; ಸಿದ್ದರಾಮಯ್ಯ ವಾಗ್ದಾಳಿ

ಉಳುವವನೇ‌ ಭೂಮಿಯ ಒಡೆಯ ಎಂಬುದರ ಬದಲು ಬಿಜೆಪಿಯವರು ಉಳ್ಳವನೇ ಭೂಮಿ ಒಡೆಯ ಎಂದು ಮಾಡುತ್ತಿದ್ದಾರೆ. ಎಷ್ಟು ಲೂಟಿ ಹೊಡೆಯುತ್ತೀರಿ ಮಿಸ್ಟರ್ ಯಡಿಯೂರಪ್ಪ? ನೀವೊಬ್ಬ ಡೋಂಗಿ ರೈತ ನಾಯಕ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

news18-kannada
Updated:September 28, 2020, 3:23 PM IST
ಸಿಎಂ ಯಡಿಯೂರಪ್ಪ ಡೋಂಗಿ ರೈತ ನಾಯಕ; ಸಿದ್ದರಾಮಯ್ಯ ವಾಗ್ದಾಳಿ
ಸಿದ್ದರಾಮಯ್ಯ.
  • Share this:
ಬೆಂಗಳೂರು (ಸೆ. 28): ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಇಂದು ರೈತರು, ರೈತಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನೆಗೆ ಕಾಂಗ್ರೆಸ್ ಕೂಡ ಬೆಂಬಲ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಒಬ್ಬ ಡೋಂಗಿ ರೈತ ನಾಯಕ. ಹಸಿರು ಶಾಲು ಹಾಕಿಕೊಂಡು ರೈತಪರ ಎಂದು ಬಿಂಬಿಸಿದ್ದರು. ಅವರು ನಿಜವಾಗಲೂ ರೈತರ ಪರ ಇದ್ದಿದ್ದರೆ ಇಂತಹ ಕಾಯ್ದೆ ತರುತ್ತಿರಲಿಲ್ಲ ಎಂದು ಟೀಕಿಸಿದ್ದಾರೆ.

ದೇವರಾಜ ಅರಸು ಭೂ ಸುಧಾರಣೆ ಕಾಯ್ದೆ ತಂದಿದ್ದರು. ಉಳುವವನೇ ಭೂಮಿ ಒಡೆಯ ಎಂದು ಘೋಷಿಸಿದ್ದರು. ಜಮೀನು ಮಾಲೀಕರು ಅದಕ್ಕೆ ವಿರೋಧ ಮಾಡಿದ್ದರು. ಆದರೆ ಅದರಿಂದ ಭೂರಹಿತರು ಭೂ ಮಾಲೀಕರಾದರು. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಜಮೀನು ಕಸಿದುಕೊಳ್ಳುತ್ತಿದ್ದಾರೆ. ರೈತರು ಜಮೀನು ಮಾರಿ, ಅದೇ ಜಮೀನಿನಲ್ಲಿ ಕೂಲಿ ಮಾಡಲು ಹೋಗುತ್ತಾರೆ. ಉಳುವವನೇ‌ ಭೂಮಿಯ ಒಡೆಯ ಎಂಬುದರ ಬದಲು ಬಿಜೆಪಿಯವರು ಉಳ್ಳವನೇ ಭೂಮಿ ಒಡೆಯ ಎಂದು ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಎಷ್ಟು ಲೂಟಿ ಹೊಡೆಯುತ್ತೀರಿ ಮಿಸ್ಟರ್ ಯಡಿಯೂರಪ್ಪ? ಕೋವಿಡ್ ಸಮಯದಲ್ಲೂ ಲೂಟಿ ಹೊಡೆದಿದ್ದ ಗಿರಾಕಿಗಳು ಇವರು. ಯಡಿಯೂರಪ್ಪ ಮತ್ತು ಅವರ ಮಗ ರಾಜ್ಯವನ್ನೇ ಲೂಟಿ ಮಾಡುತ್ತಿದ್ದಾರೆ. ಯಡಿಯೂರಪ್ಪ ಮತ್ತು ಅವರ ತಂಡದವರು ಹಿಂದೆ ಚೆಕ್ ಮೂಲಕ ಲಂಚ ಪಡೆದಿದ್ದರು. ಆದರೆ ಈಗ ಆರ್‌ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ. ಆರ್‌ಟಿಜಿಎಸ್ ಮಾಡಿಕೊಂಡರೆ ಬೇಗ ಹಣ ಬರುತ್ತದೆ ಎಂದು ವಿಜಯೇಂದ್ರ ಹೆಸರು ಹೇಳಲು ಬಿಡಲಿಲ್ಲ. ಯಡಿಯೂರಪ್ಪನವರ ಅಳಿಯ ವಿರೂಪಾಕ್ಷಪ್ಪ, ಮೊಮ್ಮಗ ಶಶಿಧರ್ ಮರಡಿ 7.4 ಕೋಟಿ ಆರ್‌ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಇದನ್ನೂ ಓದಿ: Karnataka Bandh LIVE: ಕರ್ನಾಟಕ ಬಂದ್; ಬೆಂಗಳೂರಿನಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಭೂ ಸುಧಾರಣಾ ಕಾಯ್ದೆಗೆ ಅನಗತ್ಯ ತಿದ್ದುಪಡಿ ತರಲಾಗಿದೆ. ಎಪಿಎಂಸಿ, ಭೂಸುಧಾರಣಾ ಕಾಯ್ದೆ ರೈತರಿಗೆ ಮರಣ ಶಾಸನ ಆಗಿದೆ. ಕಾರ್ಮಿಕರ ನೀತಿಗಳ ತಿದ್ದುಪಡಿಯನ್ನು ಸಹ ವಿರೋಧ ಮಾಡಿದ್ದೇವೆ. ನಾವು ಇದರ ಬಗ್ಗೆ ತೀವ್ರ ವಿರೋಧ ಮಾಡಿದ್ದೇವೆ. ಪರಿಷತ್​ನಲ್ಲಿ ಕಾರ್ಮಿಕ ಕಾಯ್ದೆ ತಿರಸ್ಕಾರಗೊಂಡಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ಟೀಕಾಪ್ರಹಾರ ನಡೆಸಿದ್ದಾರೆ. ದೆಹಲಿಯಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಕೃಷಿಕರಿಗೆ ಮಾರಕವಾಗಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಯಡಿಯೂರಪ್ಪ ಉತ್ತರ ಕೊಡಬೇಕು. ಮೋದಿ, ಯಡಿಯೂರಪ್ಪ ಇಬ್ಬರೂ ಸೇರಿ ರೈತರ ಜೀವನ, ಅವರ ಕೌಶಲ್ಯದ ಮೇಲೆ ಹೊಡೆಯುತಿದ್ದಾರೆ. ಕೃಷಿ ಭೂಮಿಯನ್ನು ಕೆಲವರ ಕೈಗೆ ಇಡಲು ಮುಂದಾಗಿದ್ದಾರೆ, ರೈತರನ್ನು ಮುಗಿಸಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
Published by: Sushma Chakre
First published: September 28, 2020, 3:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories