• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BS Yediyurappa: ಮಹಿಳೆ ಧರಿಸಿದ್ದ ನೆಕ್ಲೇಸ್ ನೋಡಿ ಸೂಪರ್ ಎಂದ ಬಿಎಸ್​​ವೈ; ಮಾಜಿ ಸಿಎಂಗೆ ಮುಸ್ಲಿಮರಿಂದ ಜೈಕಾರ!

BS Yediyurappa: ಮಹಿಳೆ ಧರಿಸಿದ್ದ ನೆಕ್ಲೇಸ್ ನೋಡಿ ಸೂಪರ್ ಎಂದ ಬಿಎಸ್​​ವೈ; ಮಾಜಿ ಸಿಎಂಗೆ ಮುಸ್ಲಿಮರಿಂದ ಜೈಕಾರ!

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಶಿವಮೊಗ್ಗದ ಶಿಕಾರಿಪುರದಲ್ಲಿ ನೂತನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣವನ್ನ ಮಾಜಿ ಸಿಎಂ ಬಿಎಸ್​ವೈ ಉದ್ಘಾಟಿಸಿದ್ದಾರೆ. ನೂತನ ಬಸ್​ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿಡಲಾಗಿದೆ.

  • News18 Kannada
  • 2-MIN READ
  • Last Updated :
  • Shimoga, India
  • Share this:

ಬೆಂಗಳೂರು: ಕರುನಾಡಲ್ಲಿ ಮತ್ತೆ ಕಮಲ ಅರಳಿಸಲು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa) ರಾಜ್ಯ ಪ್ರವಾಸವನ್ನು (State Tour) ಕೈಗೊಂಡಿದ್ದು, ಈಗಾಗಲೇ ಹಲವು ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷ ಸಂಘಟನೆಯ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇಂದು ಶಿವಮೊಗ್ಗಕ್ಕೆ (Shivamogga) ಆಗಮಿಸಿದ್ದ ಮಾಜಿ ಸಿಎಂ ಬಿಎಸ್​​ವೈ ಭರ್ಜರಿ ಸ್ವಾಗತ ಲಭಿಸಿದೆ. ಶಿಕಾರಿಪುರದಲ್ಲಿ (Shikaripura) ಇಂದು ಕೆಎಸ್​ಆರ್​​ಟಿಸಿ ನಿಲ್ದಾಣ (KSRTC Bus Stand) ಲೋಕಾರ್ಪಣೆಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸದರಾದ ಬಿವೈ ರಾಘವೇಂದ್ರ (BY Raghavendra), ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಾಥ್ ನೀಡಿದ್ದರು. ಸುಮಾರು 4.7 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಬಸ್​ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಎಸ್​​ವೈ ಅವರಿಗೆ ಆರತಿ ಬೆಳಗಿ ಮಹಿಳೆಯರು (Women) ಸ್ವಾಗತ ಕೋರಿದ್ದರು. ಈ ವೇಳೆ ಆರತಿ ಮಾಡುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಹಾರ ಗಮನಿಸಿದ ಮಾಜಿ ಸಿಎಂ, ನಕ್ಲೇಸ್​ (Necklace) ತುಂಬಾ ಚೆನ್ನಾಗಿ ಕಾಣುತ್ತಿದೆ ಎಂದು ಹೇಳಿ ತಮಾಷೆ ಮಾಡಿದ್ದಾರೆ. ಈ ದೃಶ್ಯ ನೆರೆದಿದ್ದ ಜನರ ಗಮನ ಸೆಳೆಯಿತು.


ಕಾರ್ಯಕರ್ತರ ವಿರುದ್ಧ ಸಂಸದ ರಾಘವೇಂದ್ರ ಗರಂ


ಶಿವಮೊಗ್ಗದ ಶಿಕಾರಿಪುರದಲ್ಲಿ ನೂತನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣವನ್ನ ಮಾಜಿ ಸಿಎಂ ಬಿಎಸ್​ವೈ ಉದ್ಘಾಟಿಸಿದ್ದಾರೆ. ನೂತನ ಬಸ್​ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿಡಲಾಗಿದೆ. ಉದ್ಘಾಟನೆ ಸಂದರ್ಭದಲ್ಲಿ ಸಂಸದ ಬಿವೈ ರಾಘವೇಂದ್ರ, ಕಾರ್ಯಕರ್ತರಲ್ಲಿ ಸಂಗೊಳ್ಳಿ ರಾಯಣ್ಣ ಪರ ಘೋಷಣೆ ಕೂಗುವಂತೆ ಹೇಳಿದ್ದಾರೆ.


ರಾಯಣ್ಣ ಹೆಸರಲ್ಲಿ ಘೋಷಣೆ ಕೂಗ್ರೋ, ಅದನ್ನೂ ಹೇಳಿಕೊಡಬೇಕಾ ಅಂತ ಕಾರ್ಯಕರ್ತರಿಗೆ ಗರಂ ಆಗಿ ಹೇಳಿದ್ದಾರೆ. 4 ಕೋಟಿ ರೂಪಾಯಿ ಖರ್ಚು ಮಾಡಿ ಬಸ್ ನಿಲ್ದಾಣ ನಿರ್ಮಿಸಿ, ರಾಯಣ್ಣ ಹೆಸರಿಟ್ಟಿದ್ದೀವಿ ಘೋಷಣೆ ಕೂಗಿ ಅಂತ ರಾಘವೇಂದ್ರ ಹೇಳಿದ್ದಾರೆ.


ಇದನ್ನೂ ಓದಿ: NA Harris: ತಿಗಳ ಸಮಾಜದ ಕ್ಷಮೆ ಕೇಳಿದ ಕಾಂಗ್ರೆಸ್ ಶಾಸಕ




ಬಿಎಸ್​​ವೈಗೆ ಅಲ್ಪಸಂಖ್ಯಾತರ ಜೈಕಾರ


ಇತ್ತ, ಬಿಎಸ್​ ಯಡಿಯೂರಪ್ಪ ಅವರಿಗೆ ಶಿಕಾರಿಪುರ ತಾಲೂಕಿನ ಮುಸ್ಲಿಂ ಸಮುದಾಯದವರಿಂದ ಯಡಿಯೂರಪ್ಪ ಅವರಿಗೆ ಅದ್ದೂರಿ ಸ್ವಾಗತ ಲಭಿಸಿದೆ. ಶಿಕಾರಿಪುರದಿಂದ ಉಡುಗಣಿಗೆ ತೆರಳುತ್ತಿದ್ದ ಯಡಿಯೂರಪ್ಪ ಅವರನ್ನು ರಸ್ತೆ ಮಧ್ಯೆದಲ್ಲಿ ತಡೆದು ಕಾರು ನಿಲ್ಲಿಸಿದ್ದಾರೆ.


ಈ ವೇಳೆ ಬಿಜೆಪಿ ಹಾಗೂ ಬಿಎಸ್​​ವೈ ಅವರಿಗೆ ಜೈಕಾರ ಘೋಷಣೆ ಹಾಕಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಉದ್ಘಾಟಿಸಿ ತೆರಳುವ ವೇಳೆ ಘಟನೆ ನಡೆದಿದ್ದು, ಉಡುತಡಿಗೆ ತೆರಳುವ ಮಾರ್ಗಮಧ್ಯೆ ಅಲ್ಪ ಸಂಖ್ಯಾತರು ಹೂವಿನ ಹಾರ ಹಾಕಿ ಬಿಎಸ್​​ವೈ ಅವರಿಗೆ ಸ್ವಾಗತ ಕೋರಿದ್ದಾರೆ.




150 ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸುವುದು ನನ್ನ ಗುರಿ


ಇನ್ನು, ಉಡುತಡಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಶಿವ ಶರಣೆ ಅಕ್ಕಮಹಾದೇವಿಯ 65 ಅಡಿ ಎತ್ತರದ ಪುತ್ಥಳಿ ಅನಾವರಣ ಮಾಡಲಾಗಿದೆ. ಈ ಕಾರ್ಯಕ್ಕಾಗಿ ಹಗಲು ರಾತ್ರಿ ಬಿವೈ ರಾಘವೇಂದ್ರರವರು ಶ್ರಮಿಸಿದ್ದಾರೆ. ಶಿವ ಶರಣೆಯರ ನಾಡು ಶಿಕಾರಿಪುರ. ಇಂತಹ ನಾಡಿನಲ್ಲಿ ಹುಟ್ಟಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ.


ಇದನ್ನೂ ಓದಿ: Chikkaballapur ಜನತೆಗೆ ಯುಗಾದಿ ಕೊಡುಗೆ; ಸಿಎಂಗೆ ಧನ್ಯವಾದ ಸಲ್ಲಿಸಿದ ಸಚಿವ ಸುಧಾಕರ್


ಬಸವರಾಜ್ ಬೊಮ್ಮಾಯಿಯವರು ರಾಜ್ಯದ ಅಭಿವೃದ್ಧಿಗಾಗಿ ಕಂಕಣ ಕಟ್ಟಿದ್ದಾರೆ. ನನಗೆ 8೦ ವರ್ಷ ಆಗಿದೆ, ನಾನೂ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ಇದರ ಬಗ್ಗೆ ಪ್ರತಿಪಕ್ಷದವರು ಮಾತನಾಡುತ್ತಾರೆ. ಚುನಾವಣೆ ರಾಜಕೀಯಕ್ಕೆ ನಿವೃತ್ತಿ ಹೇಳಿದ್ದೇನೆ ಅಷ್ಟೇ. ಅದಕ್ಕೂ ಕೆಲವರು ಟೀಕೆ ಮಾಡುತ್ತಿದ್ದಾರೆ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದೇ ನನ್ನ ಗುರಿ. ಮುಂದಿನ ದಿನಗಳಲ್ಲಿ ನಾಡಿನ ಉದ್ದಕ್ಕೂ ಸಂಚಾರ ಮಾಡಿ ಬಿಜೆಪಿ ಗೆಲ್ಲಿಸುತ್ತೇವೆ. ಇನ್ನಷ್ಟು ಅಭಿವೃದ್ಧಿ ಆಗುವಂತೆ ಮಾಡುತ್ತೇವೆ ಎಂದು ಹೇಳಿದರು.

Published by:Sumanth SN
First published: