ಚುನಾವಣಾ ಪ್ರಚಾರಕ್ಕೆ ಕರೆಸಿ ಹಲವು ತಾಸು ಕಾಯಿಸುತ್ತಿರುವ ಮಹಾರಾಷ್ಟ್ರ ಬಿಜೆಪಿ; ಬಿಎಸ್ವೈ ಅಸಮಾಧಾನ

ಮಹಾರಾಷ್ಟ್ರ ಬಿಜೆಪಿಯಿಂದ ಸಿಎಂ ಎಸ್ ವೈ ಯಡಿಯೂರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಕಾಯಿಸಲಾಗಿದ್ದು, ಇದರಿಂದ ಸಿಟ್ಟಿಗೆದ್ದ ಸಿಎಂ ಚುನಾವಣಾ ಪ್ರಚಾರಕ್ಕೆ ಹೋಗುವುದಾ, ಬೇಡವಾ ಎಂಬ ಗೊಂದಲದಲ್ಲಿ ಸಿಲುಕಿದರು.

Seema.R | news18-kannada
Updated:October 16, 2019, 12:21 PM IST
  • Share this:
ಬೆಳಗಾವಿ (ಅ. 16): ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಬೆಳಗಾವಿಗೆ ಆಗಮಿಸಿದ ಬಿಎಸ್​ ಯಡಿಯೂರಪ್ಪ ಇಂದು ಬೆಳಗ್ಗೆ 8.30ಕ್ಕೆ ಸೊಲ್ಲಾಪುರದಲ್ಲಿ ಪ್ರಚಾರ ಆರಂಭಿಸಬೇಕಿತ್ತು. ಆದರೆ, ಮಹಾರಾಷ್ಟ್ರ ಬಿಜೆಪಿ ಘಟಕದಲ್ಲಿ ಉಂಟಾದ ಗೊಂದಲಗಳಿಂದ ಯಡಿಯೂರಪ್ಪ ಇನ್ನೂ ಕೂಡ ಬೆಳಗಾವಿಯ ಸರ್ಕ್ಯೂಟ್​ ಹೌಸ್​ನಲ್ಲಿಯೇ ಕಾಲ ಕಳೆಯುವಂತೆ ಆಗಿದೆ. 

ಇಂದು ನಾಳೆ ಬಿಎಸ್​ ಯಡಿಯೂರಪ್ಪ ಅವರು  ಮಹಾರಾಷ್ಟ್ರದ ಸೊಲ್ಲಾಪುರ, ಜತ್ತ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಇದಕ್ಕಾಗಿ ಅವರು ನಿನ್ನೆಯೇ ಬೆಳಗಾವಿಗೆ ಬಂದಿಳಿದಿದ್ದಾರೆ. ಅವರೊಟ್ಟಿಗೆ ಉಪಮುಖ್ಯಮಂತ್ರಿ ಅಶ್ವಥ್​ ನಾರಾಯಣ ಕೂಡ ಉಪಸ್ಥಿತರಿದ್ದಾರೆ.

ಬೆಳಗಾವಿ ಸರ್ಕ್ಯೂಟ್​ ಹೌಸ್​ನಲ್ಲಿ ತಂಗಿದ್ದ ಬಿಎಸ್​ ಯಡಿಯೂರಪ್ಪ ಇಂದು ಬೆಳಗ್ಗೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರಕ್ಕೆ ತೆರಳಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವರ ಪ್ರಯಾಣ ತಡವಾಗಿದೆ. ಮೂಲಗಳ ಪ್ರಕಾರ ಮಹಾರಾಷ್ಟ್ರ ಬಿಜೆಪಿ ಅವರಿಗೆ ಮಧ್ಯಾಹ್ನ ಹೊರಡುವಂತೆ ತಿಳಿಸಿದೆ. ಅವರ ಸಂವಹನದಲ್ಲಿ ಉಂಟಾದ ಗೊಂದಲದಿಂದ ಬಿಎಸ್​ವೈ ಸಮಯ ವ್ಯರ್ಥವಾಗಿದೆ ಎನ್ನಲಾಗಿದೆ.

ಮಹಾರಾಷ್ಟ್ರ ಬಿಜೆಪಿಯಿಂದ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಕಾಯಿಸಲಾಗಿದ್ದು, ಇದರಿಂದ ಅಸಮಾಧಾನಗೊಂಡಿರುವ ಸಿಎಂ ಚುನಾವಣಾ ಪ್ರಚಾರಕ್ಕೆ ಹೋಗುವುದಾ, ಬೇಡವಾ ಎಂಬ ಗೊಂದಲದಲ್ಲಿದ್ದಾರೆ. ಅಲ್ಲದೇ ಈ ಕುರಿತು ಡಿಸಿಎಂ ಲಕ್ಷ್ಮಣ್​​ ಸವದಿ ವಿರುದ್ಧ ಕೂಡ ಅವರು ಅಸಮಾಧಾನ ಹೊರಹಾಕಿದ್ದು, ಎಷ್ಟು ಹೊತ್ತಿಗೆ ವಿಮಾನ ಎಂದು ಕೂಗಾಡಿದರೆನ್ನಲಾಗಿದೆ.

ಇದನ್ನು ಓದಿ: ರೈತರ ಸಂಪೂರ್ಣ ಸಾಲಮನ್ನಾ ಇಲ್ಲ, ನೆರೆ ಪರಿಹಾರಕ್ಕೆ ಹಣ ಬಳಕೆ ; ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಬಳಿಕ ಡಿಸಿಎಂ ಬೆಳಗ್ಗೆ 11 ಗಂಟೆಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು. ಆದರೆ, ಅಷ್ಟು ಬೇಗ ಹೋಗಿ ಏನು ಮಾಡುವುದು. ಮಹಾರಾಷ್ಟ್ರ ಬಿಜೆಪಿ ಘಟಕ ಮಧ್ಯಾಹ್ನ ಬರಲು ತಿಳಿಸಿದೆ ಎಂದು ಅಸಮಾಧಾನ ಹೊರ ಹಾಕಿ ಮತ್ತೆ, ಸರ್ಕ್ಯೂಟ್​ ಹೌಸ್​ ಒಳಗೆ ಹೋದರು. ಹಾಗೆ ಬೆಂಗಳೂರಿಗೆ ಹಿಂದಿರುಗಲು ಎಷ್ಟೋತ್ತಿಗೆ ವಿಮಾನವಿದೆ ಎಂದು ಕೂಡ ವಿಚಾರಣೆ ನಡೆಸಿದರು ಎನ್ನಲಾಗಿದೆ.

ಇನ್ನು ಬಿಎಸ್​ ಯಡಿಯೂರಪ್ಪ ಸಿಟ್ಟಾಗಿರುವುದನ್ನು ತಿಳಿದ ಮಹಾರಾಷ್ಟ್ರ ಸಿಎಂ ಕಡೆಗೂ ಅವರಿಗೆ ಹೆಲಿಕ್ಯಾಪ್ಟರ್​ ವ್ಯವಸ್ಥೆ ಮಾಡಿದ್ದಾರೆ. ಮಧ್ಯಾಹ್ನ 12.15ಕ್ಕೆ ಅವರಿಗೆ ಹೆಲಿಕ್ಯಾಪ್ಟರ್​ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯವರೆಗೆ ಸಿಎಂ ಕಾಯುವುದು ಅನಿವಾರ್ಯವಾಗಿದೆ.(ವರದಿ : ಚಂದ್ರಕಾಂತ ಸುಗಂಧಿ) 
First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading