• Home
  • »
  • News
  • »
  • state
  • »
  • Murugha Swamy: ಮುರುಘಾ ಸ್ವಾಮಿ ಇಷ್ಟು ಕೀಳು ಮಟ್ಟಕ್ಕೆ ಇಳಿತಾರೆ ಅಂದುಕೊಂಡಿರಲಿಲ್ಲ! ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಿಡಿ

Murugha Swamy: ಮುರುಘಾ ಸ್ವಾಮಿ ಇಷ್ಟು ಕೀಳು ಮಟ್ಟಕ್ಕೆ ಇಳಿತಾರೆ ಅಂದುಕೊಂಡಿರಲಿಲ್ಲ! ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಿಡಿ

ಮುರುಘಾ ಸ್ವಾಮಿ ವಿರುದ್ಧ ಬಿಎಸ್‌ವೈ ಆಕ್ರೋಶ

ಮುರುಘಾ ಸ್ವಾಮಿ ವಿರುದ್ಧ ಬಿಎಸ್‌ವೈ ಆಕ್ರೋಶ

ಮುರುಘಾ ಮಠದ ಶಿವಮೂರ್ತಿ ಸ್ವಾಮಿ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುರುಘಾ ಸ್ವಾಮೀಜಿ ಕ್ಷಮಿಸಲಾರದ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತಾ ನಿರೀಕ್ಷೆ ಮಾಡಿರಲಿಲ್ಲ" ಎಂದಿದ್ದಾರೆ.

ಮುಂದೆ ಓದಿ ...
  • Share this:

ಉಡುಪಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಸಿಲುಕಿಕೊಂಡು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದ ಮುರುಘಾ ಸ್ವಾಮಿ (Murugha Swami) ವಿರುದ್ಧ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ (Ex CM BS Yediyurappa) ಕಿಡಿಕಾರಿದ್ದಾರೆ. ಮುರುಘಾ ಸ್ವಾಮಿ ವಿರುದ್ಧದ ಪ್ರಕರಣದಲ್ಲಿ (case) ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, “ಮುರು ಘಾಮಠದ (Murugh Math) ಡಾ. ಶಿವಮೂರ್ತಿ ಸ್ವಾಮಿ (Dr. Shivamurthy Swamy) ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಅಂತ ಅಂದುಕೊಂಡಿರಲಿಲ್ಲ” ಅಂತ ಆಕ್ರೋಶದ ಮಾತನ್ನಾಡಿದ್ದಾರೆ. ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, “ಮುರುಘಾ ಸ್ವಾಮಿ ಮಾಡಿದ್ದು ಅಕ್ಷಮ್ಯ ಅಪರಾಧ” ಅಂತ ಹೇಳಿದ್ದಾರೆ.


“ಮುರುಘಾ ಸ್ವಾಮಿ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು”


ಮುರುಘಾ ಮಠದ ಶಿವಮೂರ್ತಿ ಸ್ವಾಮಿ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾ ಸ್ವಾಮೀಜಿ ಕ್ಷಮಿಸಲಾರದ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತಾ ನಿರೀಕ್ಷೆ ಮಾಡಿರಲಿಲ್ಲ ಅಂತ ಕಿಡಿಕಾರಿದ್ದಾರೆ.




“ಶ್ರೀಗಳಿಗೆ ತಕ್ಕ ಶಿಕ್ಷೆಯಾಗಬೇಕು”


ಮುರುಘಾ ಶ್ರೀಗಳು ಮಾಡಿದ್ದು ಅಕ್ಷಮ್ಯ ಅಪರಾಧ ಎಂದಿರುವ ಬಿಎಸ್ ಯಡಿಯೂರಪ್ಪ, ಇದನ್ನು ಎಲ್ಲರೂ ಖಂಡಿಸಬೇಕು ಅಂತ ಹೇಳಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.


ಇದನ್ನೂ ಓದಿ: Congress Twitter: ಕಾಂಗ್ರೆಸ್‌ಗೆ ಕೆಜಿಎಫ್‌ ಕಂಟಕ! ಅನುಮತಿ ಇಲ್ಲದೇ ಹಾಡು ಬಳಸಿದ್ದಕ್ಕೆ ಟ್ವಿಟರ್ ಅಕೌಂಟ್ ಬ್ಲಾಕ್!


ಮುರುಘಾ ಸ್ವಾಮಿ ವಿರುದ್ಧ ಚಾರ್ಜ್‌ಶೀಟ್‌


ಮುರುಘಾ ಸ್ವಾಮಿಯ ಕಾವಿ ಹಿಂದಿನ ಕಾಮಿಯ ಮೃಗದ ದರ್ಶನ ಚಾರ್ಜ್​ಶೀಟ್​​ನಲ್ಲಿ ಬಯಲಾಗಿದೆ. ಸಂತ್ರಸ್ತ ಬಾಲಕಿಯರು ನೀಡಿದ ಹೇಳಿಕೆಯಲ್ಲಿ ಶೇ.80 ರಷ್ಟು ಅಂಶಗಳು ಚಾರ್ಜ್​ಶೀಟ್​​ನಲ್ಲಿ ದಾಖಲಾಗಿರುವ ವಿಚಾರ ತಿಳಿದಿದೆ.


694 ಪುಟಗಳ ಚಾರ್ಜ್‌ಶೀಟ್!


ಮುರುಘಾ ಸ್ವಾಮಿ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಒಟ್ಟು 694 ಪುಟಗಳ ಚಾರ್ಜ್ ಶೀಟ್ ನಲ್ಲಿ ಮಠದಲ್ಲಿ ನಡೆಯುತ್ತಿದೆ ಎನ್ನಲಾದ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆ ಅಡಿಯಲ್ಲೂ ಕೇಸ್ ದಾಖಲಾಗಿದ್ದು, 342 ಪುಟಗಳ 2 ಸೆಟ್‌ನಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.


 “10ಕ್ಕೂ ಹೆಚ್ಚು ಮಕ್ಕಳ ಮೇಲೆ ದೌರ್ಜನ್ಯ”


ಇನ್ನು ಚಾರ್ಜ್​ಶೀಟ್​ ಸಲ್ಲಿಕೆ ಕುರಿತು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಒಡನಾಡಿ ಸಂಸ್ಥೆಯ ಪರಶು, ಹಲವು ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಚಾರ್ಜ್​ಶೀಟ್​ನಲ್ಲಿ ಮಕ್ಕಳ ಹೇಳಿಕೆ ಸತ್ಯ ಎಂದು ಪ್ರಕರಣದ ತನಿಖಾಧಿಕಾರಿಯೇ ಹೇಳುತ್ತಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಆದ್ರೆ ಪ್ರಕರಣ ಬೆಳಕಿಗೆ ಬರುತ್ತಲೇ ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗಿದೆ. ಮಕ್ಕಳಿಗೆ ಕೌನ್ಸಲಿಂಗ್ ಮಾಡಿಸೋದರಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದಿದ್ದಾರೆ.


ಇದನ್ನೂ ಓದಿ: Satish Jarkiholi: ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಗೆ ಕಾಂಗ್ರೆಸ್‌ನಲ್ಲೇ ವಿರೋಧ! ರಣದೀಪ್ ಸುರ್ಜೇವಾಲ ಖಂಡನೆ


ಮುರುಘಾ ಸ್ವಾಮಿ ಲೇಡಿ ವಾರ್ಡನ್ ಮೂಲಕ ಮಕ್ಕಳನ್ನು ಕರೆಸಿ, ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಮತ್ತು ಬರುವ ಔಷಧಿ ಬೆರೆಸಿದ ಸೇಬು, ಚಾಕಲೇಟ್ ನೀಡಿ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದಾರೆ. ಕಚೇರಿ, ಬೆಡ್ ರೂಂ, ಬಾತ್ ರೂಂಗೆ ಕರೆದೊಯ್ದು ಬಲಾತ್ಕಾರ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ.

Published by:Annappa Achari
First published: