• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BS Yediyurappa: ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಮಾಸ್ಟರ್ ಪ್ಲಾನ್, ಜೆಪಿ ನಡ್ಡಾಗೆ ಬಿಎಸ್‌ವೈ ದೂರವಾಣಿ ಕರೆ!

BS Yediyurappa: ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಮಾಸ್ಟರ್ ಪ್ಲಾನ್, ಜೆಪಿ ನಡ್ಡಾಗೆ ಬಿಎಸ್‌ವೈ ದೂರವಾಣಿ ಕರೆ!

ಜೆಪಿ ನಡ್ಡಾಗೆ ಬಿಎಸ್‌ವೈ ಕರೆ

ಜೆಪಿ ನಡ್ಡಾಗೆ ಬಿಎಸ್‌ವೈ ಕರೆ

ಇಂದು ಪ್ರಮುಖರ ಜೊತೆ ಚರ್ಚೆ ನಡೆಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೇಂದ್ರದ ಬಿಜೆಪಿ ನಾಯಕರ ಜೊತೆಯೂ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ (Karnataka assembly election result) ಕ್ಷಣಗಣನೆ ಆರಂಭವಾಗಿದೆ. ಮೇ 10ರಂದು 224 ಕ್ಷೇತ್ರದಲ್ಲೂ ಒಂದೇ ಹಂತದಲ್ಲಿ ಚುನಾವಣೆ (Election) ನಡೆದಿತ್ತು. ಕಾಂಗ್ರೆಸ್ (Congress), ಬಿಜೆಪಿ (BJP), ಜೆಡಿಎಸ್‌ (JDS), ಇತರೇ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 2615 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಎಲ್ಲಾ ಅಭ್ಯರ್ಥಿಗಳ ಹಣೆ ಬರಹ ನಾಳೆ ತಿಳಿಯಲಿದೆ. ಈ ನಡುವೆ ಬಹುತೇಕ ಎಲ್ಲಾ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಬಿಜೆಪಿ ನಾಯಕರು, ಈಗಾಗಲೇ ರಣತಂತ್ರ ಹೆಣೆದಿದ್ದಾರೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು (BJP government) ಅಧಿಕಾರಕ್ಕೆ ತರಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಇಂದು ಪ್ರಮುಖರ ಜೊತೆ ಚರ್ಚೆ ನಡೆಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಕೇಂದ್ರದ ಬಿಜೆಪಿ ನಾಯಕರ ಜೊತೆಯೂ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.


ಸರಳ ಬಹುಮತದ ಸರ್ಕಾರ ರಚಿಸುವ ವಿಶ್ವಾಸ


ಫಲಿತಾಂಶ ಪ್ರಕಟಕ್ಕೂ ಮುನ್ನ ಬಿಜೆಪಿ ಹೈ ಅಲರ್ಟ್ ಆಗಿದೆ. ಬಿಜೆಪಿಯಲ್ಲಿ ಸರ್ಕಾರ ರಚನೆಗೆ ಕಸರತ್ತು ತೀವ್ರಗೊಂಡಿದೆ. ಬಿಜೆಪಿ ಈ ಬಾರಿ ರಾಜ್ಯದಲ್ಲಿ ಸರಳ ಬಹುಮತದೊಂದಿಗೆ ಸರ್ಕಾರ ರಚಿಸುವ ವಿಶ್ವಾಸವನ್ನು ಬಿಎಸ್‌ವೈ ವ್ಯಕ್ತಪಡಿಸಿದ್ದಾರೆ. ಇಂದು ಬಿಜೆಪಿ ಪ್ರಮುಖರ ಜೊತೆ ಸಭೆ ನಡೆಸಿದ ಬಿಎಸ್‌ವೈ, ದೆಹಲಿ ಬಿಜೆಪಿ ವರಿಷ್ಠರ ಜೊತೆಗೂ ಮಾತನ್ನಾಡಿದ್ದಾರೆ.


ನಾಳೆಯೇ ರಾಜ್ಯಕ್ಕೆ ಬರುವಂತೆ ನಡ್ಡಾಗೆ ಆಹ್ವಾನ


ಇನ್ನು ದೂರವಾಣಿ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಸಮಾಲೋಚನೆ ನಡೆಸಿದ ಯಡಿಯೂರಪ್ಪ, ನಾಳೆ ರಾಜ್ಯಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ. ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆಗೂ ಚರ್ಚೆ ನಡೆಸಿದ್ದಾರೆ.


ಪಕ್ಷೇತರರನ್ನು ಸೆಳೆಯುವ ಯತ್ನ


ಫಲಿತಾಂಶದಲ್ಲಿ ಸರಳ ಬಹುಮತ ಬರುವ ಬಗ್ಗೆ ಬಿಎಸ್ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ಸರ್ವೆ ಪ್ರಕಾರ  ಸರಳ ಬಹುಮತಕ್ಕಿಂಲೂ ಜಾಸ್ತಿ ಬರುತ್ತದೆ ಎಂದಿದ್ದಾರೆ. ಗೆಲ್ಲುವಂತ ನಾಲ್ಕೈದು ಪಕ್ಷೇತರರಿಗೆ ದೂರವಾಣಿ ಕರೆ ಮೂಲಕವೂ ಮಾತುಕತೆ ನಡೆಸಿದ್ದಾರೆ. ನಾಳೆ ಅವರು ಗೆದ್ದ ಕೂಡಲೇ ಬೆಂಗಳೂರಿಗೆ ಕರೆತರುವ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.


ಬಿಎಸ್‌ವೈ ಭೇಟಿಯಾದ ಅಶೋಕ್


ಇಂದು ಮಧ್ಯಾಹ್ನ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಚಿವ ಆರ್. ಅಶೋಕ್ ಅವರು ಭೇಟಿ ಮಾಡಿದ್ದಾರೆ. ಬಿಎಸ್‌ವೈರವರ ಕಾವೇರಿ ನಿವಾಸದಲ್ಲಿ ಭೇಟಿಯಾದ ಅಶೋಕ್, ಮಾತನಾಡಿದ್ದಾರೆ. ಬಳಿಕ ಯಡಿಯೂರಪ್ಪ ರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಅಶೋಕ್, ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: Narendra Modi: ಮೋದಿಯವರ 'ಡಬಲ್ ಇಂಜಿನ್ ಸರ್ಕಾರ', ಬದಲಾಯಿಸಿತಾ ರಾಜ್ಯ ರಾಜಕೀಯದ ಲೆಕ್ಕಾಚಾರ?


ಬಿಜೆಪಿಯಲ್ಲಿ ತೀವ್ರಗೊಂಡ ಕಸರತ್ತು


ಇನ್ನು ನಾಳಿನ ಫಲಿತಾಂಶದಲ್ಲಿ ಅತಂತ್ರ ವಿಧಾನಸಭೆ ರಚನೆಯಾದರೆ ಮುಂದೆ ಯಾವ ರೀತಿ ನಡೆ ಅನುಸರಿಸಬೇಕು ಎಂಬ ಬಗ್ಗೆ ಬಿಜೆಪಿ ನಾಯಕರು ಚರ್ಚಿಸಿದ್ದಾರೆ. ಒಂದು ವೇಳೆ ಪಕ್ಷಕ್ಕೆ ಬಹುಮತ ಬಂದಿಲ್ಲ ಅಂದರೆ ಆಪರೇಷನ್ ಕಮಲ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸಲಾಗುತ್ತದೆ ಎನ್ನಲಾಗುತ್ತದೆ. ಇನ್ನು ಆರ್ ಅಶೋಕ್ ಈಗಾಗಲೇ ಆಪರೇಷನ್ ಸುಳಿವು ನೀಡಿದ್ದಾರೆ.

First published: