ಮಾಂಸ ಪ್ರಿಯರಿಗೆ ಸಿಹಿ ಸುದ್ದಿ; ಸರ್ಕಾರದಿಂದಲೇ ಮಟನ್​ ಸ್ಟಾಲ್​ ಆರಂಭಿಸಲು ಚಿಂತನೆ

ಕುರಿ ಹಾಗೂ ಮೇಕೆ ಸಾಕಣೆದಾರರ ಸಹಕಾರ ಸಂಘದ ಅಧ್ಯಕ್ಷ ಬಿ.ಸಿ ಲೋಕೇಶ್ ಗೌಡ, ಈ ರೀತಿಯಾದ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಟ್ಟಿದ್ದು, ಸರ್ಕಾರ ಕೂಡ ಇದಕ್ಕೆ ಹಸಿರು ನಿಶಾನೆ ತೋರಿದೆ. 

Seema.R | news18-kannada
Updated:October 16, 2019, 6:00 PM IST
ಮಾಂಸ ಪ್ರಿಯರಿಗೆ ಸಿಹಿ ಸುದ್ದಿ; ಸರ್ಕಾರದಿಂದಲೇ ಮಟನ್​ ಸ್ಟಾಲ್​ ಆರಂಭಿಸಲು ಚಿಂತನೆ
ಸಾಂದರ್ಭಿಕ ಚಿತ್ರ
Seema.R | news18-kannada
Updated: October 16, 2019, 6:00 PM IST
ಬೆಂಗಳೂರು (ಅ.16): ರಾಜ್ಯ ಸರ್ಕಾರದ ವತಿಯಿಂದ ಮಾಂಸ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಸರ್ಕಾರದ ವತಿಯಿಂದಲೇ ಅವರಿಗೆ ಮಟನ್​ ಭಾಗ್ಯ ಕರುಣಿಸಲು ಬಿಎಸ್​ ಯಡಿಯೂರಪ್ಪ ಸರ್ಕಾರ ಚಿಂತನೆ  ನಡೆಸಿದೆ. 

ಈ ಹಿಂದೆ ಹಲವು ಭಾಗ್ಯಗಳನ್ನು ಕರುಣಿಸಿದ್ದ ಸಿದ್ದರಾಮಯ್ಯ ಸರ್ಕಾರದಲ್ಲಿ ಕೂಡ ಇದೇ ರೀತಿಯಾದ ಚಿಂತನೆ ನಡೆದಿತ್ತು. ಆದರೆ, ಕಾರಣಾಂತರಗಳಿಂದ ಈ ಯೋಜನೆ ಚಾಲನೆಗೆ ಬರಲಿಲ್ಲ. ಈಗ ಬಿಎಸ್​ವೈ ಸರ್ಕಾರದ ಮುಂದೆ ಇದೇ ರೀತಿಯ ಪ್ರಸ್ತಾವವೊಂದು ಬಂದಿದೆ.

ಕುರಿ ಹಾಗೂ ಮೇಕೆ ಸಾಕಣೆದಾರರ ಸಹಕಾರ ಸಂಘದ ಅಧ್ಯಕ್ಷ ಬಿ.ಸಿ ಲೋಕೇಶ್ ಗೌಡ, ಈ ರೀತಿಯಾದ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಟ್ಟಿದ್ದು, ಸರ್ಕಾರ ಕೂಡ ಇದಕ್ಕೆ ಹಸಿರು ನಿಶಾನೆ ತೋರಿದೆ.

ಕುರಿ ಸಾಗಣೆಗಾರರ ಹಾಗೂ ಉಣ್ಣೆ ಉದ್ಯಮದವರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಗೊಂಡು ಜನರಿಗೆ ಆರೋಗ್ಯಯುತ ಮಟನ್​ ಸೇವೆ ನೀಡಲು ಈ ಯೋಜನೆಗೆ ಅಂಕಿತ ಹಾಕಲಾಗಿದೆ. ಇದರಿಂದ ಕುರಿ ಸಾಗಣೆಗೆ ಪ್ರೋತ್ಸಾಹ ಸಿಗುವ ನಿರೀಕ್ಷೆ ಇದೆ.  ಇನ್ನು ಈ ಯೋಜನೆಗೆ  ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್, ಕಾರ್ಯದರ್ಶಿ ರಶ್ಮಿ ಮಹೇಶ್, ಸಂಘ ಕೂಡ  ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಇದನ್ನು ಓದಿ: ಚುನಾವಣಾ ಪ್ರಚಾರಕ್ಕೆ ಕರೆಸಿ ಹಲವು ತಾಸು ಕಾಯಿಸುತ್ತಿರುವ ಮಹಾರಾಷ್ಟ್ರ ಬಿಜೆಪಿ; ಬಿಎಸ್ವೈ ಅಸಮಾಧಾನ

ಶೀಘ್ರದಲ್ಲಿಯೇ ಈ ಯೋಜನೆ ರಾಜ್ಯದಲ್ಲಿ ಚಾಲನೆಗೆ ಬರಲಿದ್ದು, ಸದ್ಯಕ್ಕೆ ಶಿರಾ, ಕೋಲಾರದಲ್ಲಿ ಸರ್ಕಾರದಿಂದ ಮಟನ್ ಸ್ಟಾಲ್ ಶುರುವಾಗಲಿದೆ. ಯೋಜನೆ ಯಶಸ್ವಿಯಾದರೆ ರಾಜ್ಯಾದ್ಯಂತ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ.

ಇಷ್ಟೇ ಅಲ್ಲದೇ ಆ್ಯಪ್ ಮೂಲಕ ಮಟನ್ ಮಾರಾಟ, ಕುರಿಗಳ ಖರೀದಿಗೂ ವ್ಯವಸ್ಥೆ ಮಾಡಲಾಗುತ್ತಿದೆ. ಡಯಲ್ ಫಾರ್ ಮಟನ್ ಆ್ಯಪ್ ಮೂಲಕ ಮಟನ್ ವ್ಯಾಪಾರ ಮಾಡುವುದರ ಕುರಿತು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘದಿಂದ ಮೆಗಾ ಪ್ಲ್ಯಾನ್ ನಡೆಸಿದ್ದು, ಮಧ್ಯವರ್ತಿಗಳನ್ನ ದೂರವಿಟ್ಟು, ರೈತರಿಗೆ ಅನುಕೂಲ ಮಾಡಿಕೊಡಲು ಈ ಆ್ಯಪ್​ ಸಹಾಯಕವಾಗಲಿದೆ ಎನ್ನಲಾಗಿದೆ.
Loading...

First published:October 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...