HOME » NEWS » State » BS YEDIYURAPPA GOVERNMENT BANS THE KSRTC BMTC WORKERS STRIKE SESR

ಸಾರಿಗೆ ನೌಕರರ ಮೇಲೆ ಕಾನೂನು ಅಸ್ತ್ರ ಪ್ರಯೋಗ; ಮುಷ್ಕರವನ್ನೇ ನಿಷೇಧಿಸಿದ ಸರ್ಕಾರ

ಕೈಗಾರಿಕಾ ವಿವಾದ ಕಾಯ್ದೆ 1947 ಕಲಂ 10(3) ಅಡಿಯಲ್ಲಿ ಅಧಿಕಾರ ಬಳಸಿ ಮುಷ್ಕರ ನಿಷೇಧ ಮಾಡಿದೆ.

news18-kannada
Updated:April 9, 2021, 9:08 PM IST
ಸಾರಿಗೆ ನೌಕರರ ಮೇಲೆ ಕಾನೂನು ಅಸ್ತ್ರ ಪ್ರಯೋಗ; ಮುಷ್ಕರವನ್ನೇ ನಿಷೇಧಿಸಿದ ಸರ್ಕಾರ
ಸಾರಿಗೆ ನೌಕರರ ಪ್ರತಿಭಟನೆ.
  • Share this:
ಬೆಂಗಳೂರು (ಏ. 9):  ಕಳೆದ ಮೂರುದಿನಗಳಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ವಿರುದ್ಧ ಸರ್ಕಾರ ಕಾನೂನು ಅಸ್ತ್ರ ಪ್ರಯೋಗಿಸಿದೆ. ಸರ್ಕಾರದ ಒಪ್ಪಂದ ಮನವಿಗೆ ಒಪ್ಪದ ನೌಕರರ ಮುಷ್ಕರವನ್ನೇ ನಿಷೇಧಿಸಿ ಸರ್ಕಾರ ಆದೇಶಿಸಿದೆ. ಕೈಗಾರಿಕಾ ವಿವಾದ ಕಾಯ್ದೆ 1947 ಕಲಂ 10(3) ಅಡಿಯಲ್ಲಿ ಅಧಿಕಾರ ಬಳಸಿ ಮುಷ್ಕರ ನಿಷೇಧ ಮಾಡಿದೆ. ಸಾರ್ವಜನಿಕ ಉಪಯುಕ್ತ ಸೇವೆ ಎಂದು ಪರಿಗಣಿಸಿ ಮುಷ್ಕರ ನಿಷೇಧಿಸಿ ನಾಲ್ಕು ನಿಗಮಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಕೈಗಾರಿಕಾ ವಿವಾದ ಕಾಯ್ದೆ 21 (1) (d) ಅನ್ವಯ ಸಂಧಾನ ಪ್ರಕ್ರಿಯೆ ಬಾಕಿ ಇರುವಾಗ ಮುಷ್ಕರ ನಡೆಸುವಂತಿಲ್ಲ. ಈ ತಕ್ಷಣಕ್ಕೆ ಜಾರಿಗೆ ಬರುವಂತೆ ಮುಷ್ಕರ ನಿಷೇಧಿಸಿ ವಿವಾದವನ್ನು ನ್ಯಾಯ ನಿರ್ಣಯಕ್ಕಾಗಿ ಸರ್ಕಾರ ಕಳುಹಿಸಿದೆ. ಅಲ್ಲದೇ ಆರು ತಿಂಗಳ ಒಳಗಾಗಿ ತೀರ್ಪನ್ನು ಒಪ್ಪಿಸಲು ಔದ್ಯಮಿಕ ನ್ಯಾಯಾಧೀಕರಣಕ್ಕೆ ಕಳುಹಿಸಲಾಗಿದೆ.

ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಅನಾನೂಕುಲತೆ ಗಮನದಲ್ಲಿಟ್ಟುಕೊಂಡು ಹಾಗೂ ಕೈಗಾರಿಕಾ ವಿವಾದ ಕಾಯ್ದೆ 22 (2) (d)ರಲ್ಲಿ ತಿಳಿಸಿರುವಂತೆ ಕೈಗಾರಿಕಾ ವಿವಾದವು ಸಂಧಾನ ಪ್ರಕ್ರಿಯೆಯಲ್ಲಿ ಬಾಕಿ ಇರುವಾಗ ಕಾರ್ಮಿಕರು ಯಾವುದೇ ಮುಷ್ಕರವನ್ನು ಹೂಡಬಾರದೆಂಬ ನಿಯಮವಿರುತ್ತದೆ ಎಂದು ಆದೇಶ ನೀಡಲಾಗಿದೆ.


6ನೇ ವೇತನ ಆಯೋಗ ಜಾರಿ ಆರನೇ ವೇತನ ಆಯೋಗ ಅಸಾಧ್ಯ ಅಂತ ಸಾರಿಗೆ ನೌಕರರ ವಿರುದ್ಧ ಸೆಡ್ಡುಹೊಡೆದಿದೆ. ಈ ಸರ್ಕಾರ ಹಾಗೂ ನೌಕರರ ನಡುವಿನ ಜಂಗೀ ಕುಸ್ತಿಯಲ್ಲಿ ಸಾರ್ವಜನಿಕರು ಬಸವಳಿಯುವಂತಾಗಿದೆ. ಇನ್ನೊಂದೆಡೆ ಸರ್ಕಾರ ಯುಗಾದಿ ಹಾಗೂ ವೀಕೆಂಡ್ ಹಿನ್ನಲೆ ಹೆಚ್ಚುವರಿ ಬಸ್ ಸೇವೆ ಒದಗಿಸಲು ಮುಂದಾಗಿದೆ. ಖಾಸಗಿ ಬಸ್ ಜೊತೆಗೆ ಕೆಎಸ್ಆರ್​ಟಿಸಿ ನಿವೃತ್ತ ನೌಕರರನ್ನೂ ಬಳಸಿ ಬಸ್ ಓಡಿಸೋಕೆ ನಿಗಮ ಮುಂದಾಗಿದೆ. ನಿಗಮದ ಈ ತೀರ್ಮಾನ ಈಗ ಹೊಸ ತಲೆನೋವಿಗೂ ಕಾರಣವಾಗಿದೆ. ಇಂದು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಕೆಎಸ್ಆರ್​ಟಿಸಿ ಬಸ್ ಬರ್ತಿದ್ದಂತೆ ಖಾಸಗಿ ಬಸ್ ಮಾಲೀಕರು ಕಿರಿಕ್ ತೆಗೆದಿದ್ದಾರೆ. ಮುಷ್ಕರ ಮುಗಿಯುವವರೆಗೂ ನಮ್ಗೆ ಅವಕಾಶ ಕೊಟ್ಟಿದ್ದೀರಿ. ಮಧ್ಯೆ ನೀವು ಬಂದ್ರೆ ನಾವು ಹೇಗೆ ಬಸ್ ಓಡಿಸೋದು.. ಕೆಎಸ್ಆರ್ಟಿಸಿ ಬಸ್ ರಸ್ತೆಗಿಳಿಸಿದ್ರೆ ನಮ್ಮ ಸೇವೆ ನಿಲ್ಲಿಸ್ತಿವಿ ಅಂತ ಅಧಿಕಾರಿಗಳ ವಿರುದ್ಧ ಗುಟುರಿದ್ದಾರೆ. ಹೀಗಾಗಿ ಕೆಲಕಾಲ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಗದ್ದಲದ ವಾತಾವರಣವೂ ನಿರ್ಮಾಣವಾಗಿತ್ತು.  ಇನ್ನು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸಾಕಷ್ಟು ಖಾಸಗಿ ಬಸ್ ವ್ಯವಸ್ಥೆ ಮಾಡಿದ್ರು ಪ್ರಯಾಣಿಕರ ಬರ ಎದ್ದುಕಾಣ್ತಿತ್ತು
Published by: Seema R
First published: April 9, 2021, 8:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories