ಶಿವಮೊಗ್ಗ: ಭದ್ರಾವತಿ (Bhadravati) ಪಟ್ಟಣದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್ಎಲ್) (Visvesvaraya Iron and Steel Plant) ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಾರ್ಖಾನೆ ಸ್ಥಗಿತಗೊಳಿಸುವ ಬಗ್ಗೆ SAIL (ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ) ಆಡಳಿತ ಮಂಡಳಿಯಲ್ಲಿ ಪ್ರಸ್ತಾವನೆ ಅಂಗೀಕಾರವಾಗಿದೆ. ಈ ಬಗ್ಗೆ ಅಧಿಕೃತವಾಗಿ ಕಾರ್ಮಿಕ ಸಂಘಕ್ಕೆ (Labor Union) ವಿಐಎಸ್ಎಲ್ ಮಾಹಿತಿ ನೀಡಿದೆ ಎನ್ನಲಾಗಿದೆ. ಇತ್ತ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು, ಪರಿಸ್ಥಿತಿ ನಮ್ಮ ಕೈ ಮೀರಿ ಹೋಗಿದೆ ಎಂದು ಹೇಳಿದ್ದಾರೆ.
ಭದ್ರಾವತಿಯ ವಿಐಎಸ್ಎಲ್ ಗೆ ಕೊನೆಯ ಮೊಳೆ
ಸೈಲ್ ಆಡಳಿತ ಮಂಡಳಿಯಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮುಚ್ಚುವ ಪ್ರಸ್ತಾವನೆ ಅಂಗೀಕಾರ ಆಗುವುದರೊಂದಿಗೆ 10 ವರ್ಷಗಳ ಕಾರ್ಮಿಕರ ಹೋರಾಟ ಅಂತ್ಯವಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, ವಿಐಎಸ್ಎಲ್ ಮುಚ್ಚುವ ನಿರ್ಧಾರ ವಿಚಾರ ನಮ್ಮ ಕೈ ಮೀರಿ ಹೋಗಿದೆ ಎಂದು ಅಸಹಾಯಕತೆ ತೋರ್ಪಡಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಬಿಎಸ್ವೈ ಜೊತೆ ಪ್ರಧಾನಿ ಮೋದಿ 1 ಗಂಟೆ ಮಾತುಕತೆ; ಮತ್ತೆ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಮಣೆ!
ಅಸಹಾಯಕತೆ ವ್ಯಕ್ತಪಡಿಸಿದ ಬಿಎಸ್ ಯಡಿಯೂರಪ್ಪ
ಕಾರ್ಖಾನೆ ಸ್ಥಗಿತ ಮಾಡದಂತೆ ನಾವು, ಸಂಸದರು ಬಹಳ ಪ್ರಯತ್ನ ಮಾಡಿದ್ದೇವು. ಆದರೆ ಈ ನಿರ್ಧಾರ ಇಡೀ ದೇಶದಲ್ಲಿ ಕೈಗೊಂಡಿದ್ದಾರೆ. ವಿಐಎಸ್ಎಲ್ ಒಂದೇ ಮುಚ್ಚುತ್ತಿಲ್ಲ. ನಷ್ಟದಲ್ಲಿರುವ ಹಲವು ಕಾರ್ಖಾನೆ ಮುಚ್ಚುತ್ತಿದ್ದಾರೆ. ಅದರಲ್ಲಿ ಭದ್ರಾವತಿಯ ವಿಐಎಸ್ಎಲ್ ಕೂಡ ಒಂದು ಎಂದು ತಿಳಿಸಿದ್ದಾರೆ.
ಇದೇ ವೇಳೆ ನಾಳೆ ನಡೆಯಲಿರುವ ಜೆ.ಪಿ ನಡ್ಡಾ ಕಾರ್ಯಕ್ರಮ ವಿಚಾರ ಪ್ರತಿಕ್ರಿಯೆ ನೀಡಿ, ಮುಂದಿನ ದಿನಗಳಲ್ಲಿ ಎಲ್ಲಾ ನಾಯಕರೂ ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರಧಾನಿ ಮೋದಿಯವರಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಮಾತು ಕೊಟ್ಟಿದ್ದೇವೆ. ಕಾರ್ಯಕಾರಿಣಿಯಲ್ಲಿ ನೀಡಿದ ಮಾರ್ಗದರ್ಶನದಂತೆ ನಾವು ಕೆಲಸ ಮಾಡ್ತೇವೆ ಎಂದರು.
102 ವರ್ಷದ ಇತಿಹಾಸ ಇರುವ ಕಾರ್ಖಾನೆ ಉಳಿಸಿಕೊಳ್ಳಲು ಕಾರ್ಮಿಕರ ಹೋರಾಟ
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ತಯಾರಾದ ಕಬ್ಬಿಣ ಮತ್ತು ಉಕ್ಕು ದೇಶದ ರಕ್ಷಣಾ ಇಲಾಖೆಗೆ ನೀಡಲಾಗುತ್ತಿತ್ತು. ಅಷ್ಟೊಂದು ಉತೃಷ್ಠವಾದ ಕಬ್ಬಿಣ ಮತ್ತು ಉಕ್ಕು ಇಲ್ಲಿ ತಯಾರಾಗುತ್ತಿತ್ತು. ಕಾರ್ಖಾನೆ ಮತ್ತಷ್ಠು ಅಭಿವೃದ್ಧಿ ಕಾಣಲಿ ಎಂದು ರಾಜ್ಯ ಸರ್ಕಾರ 1989-90 ರಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಕೇವಲ 1 ರೂಪಾಯಿಗೆ ಕಾರ್ಖಾನೆ ಸೇರಿದಂತೆ ಅದರ ಎಲ್ಲಾ ಆಸ್ತಿಗಳನ್ನು ನೀಡಿತ್ತು. ಅದರೆ ಆಗಿದ್ದೇ ಬೇರೆ. ಸೇಲ್ ಇಲ್ಲಿಯವರೆಗೆ 700 ಕೋಟಿ ಹಣ ಹೂಡಿಕೆ ಮಾಡಿದ್ದು ಬಿಟ್ಟರೆ, ಕಾರ್ಖಾನೆ ಬಗ್ಗೆ ನಿರ್ಲಕ್ಷ ವಹಿಸಿದ್ದೇ ಹೆಚ್ಚು.
1918- 1919 ರಲ್ಲಿ ಆರಂಭವಾದ ಕಾರ್ಖಾನೆಯಲ್ಲಿ 19 ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದರು. 102 ವರ್ಷದ ಇತಿಹಾಸ ಇರುವ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಕಾರ್ಮಿಕರು ಹಲವು ಹೋರಾಟಗಳನ್ನು ಮಾಡಿದ್ದರು.
ಇದನ್ನೂ ಓದಿ: BJP ಯಡಿಯೂರಪ್ಪ ಅಧಿಕಾರ ಕಿತ್ತುಕೊಳ್ಳಬಹುದು ಆದ್ರೆ, ಅವ್ರ ಶಕ್ತಿ ಕಿತ್ತುಕೊಳ್ಳಲು ಆಗಲ್ಲ- ಜನಾರ್ದನ ರೆಡ್ಡಿ
ರಾಜಕಾರಣಿಗಳು ಕೇವಲ ಭರವಸೆಗಳನ್ನಷ್ಟೇ ನೀಡಿದ್ದರು
ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಕೇಂದ್ರದಿಂದ ಸಚಿವರುಗಳು ಬಂದು ಈ ಕಾರ್ಖಾನೆ ನಾಳೆಯೇ ಉದ್ಧಾರ ಮಾಡುತ್ತೇವೆ ಎಂದು ಹೇಳುತ್ತಿದ್ದರು. 5, 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತೇವೆ ಎಂದು ಹೇಳಿ ಹೋಗುತ್ತಿದ್ದರು. ಚುನಾವಣೆ ಮುಗಿದು ಫಲಿತಾಂಶ ಬಂದ ಮೇಲೆ ಇದರ ಬಗ್ಗೆ ಯೋಚನೆ ಸಹ ಮಾಡುತ್ತಿರಲಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರು ಸಹ ಕಾರ್ಖಾನೆ ಉಳಿಸುತ್ತೇವೆ ಎಂದು ಎರಡು ಮೂರು ಬಾರಿ ಕೇಂದ್ರ ಸಚಿವರನ್ನು ಭದ್ರಾವತಿಗೆ ಕರೆ ತಂದು ಭರವಸೆಗಳನ್ನು ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ