• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Elections 2023: ಒಬ್ಬರಿಬ್ಬರು ಬೇರೆ ಕಡೆ ಹೋದರೆ ಚುನಾವಣೆ ಮೇಲೆ ಪರಿಣಾಮ ಬೀಳುವುದಿಲ್ಲ; ಬಂಡಾಯ ನಾಯಕರಿಗೆ ಬಿಎಸ್​ವೈ ಟಾಂಗ್

Karnataka Elections 2023: ಒಬ್ಬರಿಬ್ಬರು ಬೇರೆ ಕಡೆ ಹೋದರೆ ಚುನಾವಣೆ ಮೇಲೆ ಪರಿಣಾಮ ಬೀಳುವುದಿಲ್ಲ; ಬಂಡಾಯ ನಾಯಕರಿಗೆ ಬಿಎಸ್​ವೈ ಟಾಂಗ್

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಯಡಿಯೂರಪ್ಪ ಮಕ್ಕಳಿಗೆ ಟಿಕೆಟ್ ಸಿಕ್ತು ಇತರರ ಮಕ್ಕಳಿಗೆ ಸಿಗಲಿಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಬಿಎಸ್​ವೈ, ಹೈಕಮಾಂಡ್ ಗಮನಕ್ಕೆ ತರುತ್ತೇನೆ, ಅವರು ಏನು ಹೇಳುತ್ತಾರೆ ಅದನ್ನ ನಿಮಗೆ ತಿಳಿಸ್ತೇನೆ ಎಂದು ನಕ್ಕು ಸುಮ್ಮನಾದರು.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಕರ್ನಾಟಕ ವಿಧಾಸಸಭಾ ಚುನಾವಣೆಯ (Karnataka Assembly Election) ನಾಮಪತ್ರ ಸಲ್ಲಿಕೆಗೆ ಒಂದು ದಿನ ಮಾತ್ರ ಬಾಕಿ ಇರುವ ಸಂದರ್ಭದಲ್ಲಿ ಆಡಳಿತರೂಢ ಭಾರತೀಯ ಜನತಾ ಪಾರ್ಟಿ (BJP) ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಪಟ್ಟಿ ಬಿಡುಗಡೆ ಬಳಿಕ ಬಿಜೆಪಿ ಪಾಳಯದಲ್ಲಿ ಕೊತ ಕೊತನೆ ಕುದಿಯುತ್ತಿದೆ. ಉತ್ತರ ಕರ್ನಾಟಕದಿಂದ ದಕ್ಷಿಣದವರೆಗೆ ಕಮಲದಲ್ಲಿ ಬಂಡಾಯದ (Rebellion) ಬೇಗೆ ಭುಗಿಲೆದ್ದಿದೆ. ಈ ನಡುವೆ ಅಸಮಾಧಾನಿತರ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa) ಅವರು, ಒಬ್ಬರಿಬ್ಬರು ಎಂಎಲ್​​ಸಿ (MLC) ಸ್ಥಾನ ಕೊಟ್ಟಿದ್ದರೂ ಅವರು ಬೇರೆ ಕಡೆ ಹೋಗಬಹುದು. ಆದರೆ ಅವರಿಂದ ಚುನಾವಣೆ ಮೇಲೂ ಏನು ಪರಿಣಾಮ ಬೀಳುವುದಿಲ್ಲ ಎಂದು ಹೇಳಿದ್ದಾರೆ.


ಯಾರ ಬಲ ಇಲ್ಲದೆ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರುತ್ತೇವೆ


ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಎರಡು ಮೂರು ಕಡೆ ಗೊಂದಲ ಇದ್ದರೂ ಕೂಡ, ಉಳಿದ ಎಲ್ಲಾ ಕಡೆ ಒಳ್ಳೆಯ ಅಭ್ಯರ್ಥಿಗಳ ಆಯ್ಕೆಯನ್ನು ಸಂಸದೀಯ ಮಂಡಲಿ ಮಾಡಿದೆ. ಯಾರ ಬಲ ಇಲ್ಲದೆ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.


ಇದನ್ನೂ ಓದಿ: BJP MLA: ಉಡುಪಿ ಟಿಕೆಟ್ ತಪ್ಪಿದ್ದಕ್ಕೆ ಗಳಗಳನೇ ಅತ್ತ ರಘುಪತಿ ಭಟ್


ಒಬ್ಬರಿಬ್ಬರು ಎಂಎಲ್​​ಸಿ ಸ್ಥಾನ ಕೊಟ್ಟಿದ್ದರೂ ಅವರು ಬೇರೆ ಕಡೆ ಹೋಗಬಹುದು. ಆದರೆ ಅವರಿಂದ ಚುನಾವಣೆ ಮೇಲೂ ಏನು ಪರಿಣಾಮ ಬೀಳುವುದಿಲ್ಲ. ನಾಳೆಯಿಂದ ನಾಮಪತ್ರ ಸಲ್ಲಿಕೆ ಶುರುವಾಗುತ್ತಿದೆ. ಇದೆಲ್ಲದರ ಜೊತೆ ಎಲ್ಲ ಕಡೆ ಪ್ರವಾಸ ಮಾಡಿ ಸಭೆ ಮಾಡುತ್ತೇವೆ. ಯಾರ ಹಂಗು ಇಲ್ಲದೆ ನಾವು ಸ್ಪಷ್ಟ ವಾಗಿ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರೋದು ನಿಶ್ಚಿತ. ಇವತ್ತು ರಾಜ್ಯದಲ್ಲಿ ಬಿಜೆಪಿ ಗಾಳಿ ಬೀಸಿದೆ, ಅಧಿಕಾರಕ್ಕೆ ಬರಲು ನಮಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.


ಜಗದೀಶ್ ಶೆಟ್ಟರ್ ಅವರಿಗೆ ಪಕ್ಷ ಟಿಕೆಟ್ ಕೊಟ್ಟೆ ಕೊಡುತ್ತದೆ


ಅಲ್ಲದೆ, ಪಕ್ಷ ಸ್ಥಳೀಯರ ಅಭಿಪ್ರಾಯದಂತೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಎಲ್ಲಿಲ್ಲಿ ಬೇಸರ ಆಗಿದೆ ಅವರನ್ನು ಕರೆದು ಮಾತನಾಡಿಸುತ್ತೇವೆ. ಎಲ್ಲವೂ ಇವತ್ತು ನಾಳೆ ಸರಿ ಹೋಗುತ್ತದೆ. ಜಗದೀಶ್ ಶೆಟ್ಟರ್ ಡೆಲ್ಲಿಗೆ ಹೋಗಿದ್ದಾರೆ. ಅವರಿಗೆ ಪಕ್ಷ ಟಿಕೆಟ್ ಕೊಟ್ಟೆ ಕೊಡುತ್ತದೆ. ಅವರಿಗೆ ಟಿಕೆಟ್ ಕೊಡುವಂತೆ‌ ನಾನು ವರಿಷ್ಠರಿಗೂ ಹೇಳಿದ್ದೇನೆ.


ಸವದಿಯವರಿಗೆ ಎಲ್ಲ ಸ್ಥಾನಮಾನ ಕೊಟ್ಟರು ಕೂಡ ಈ ರೀತಿ ತೀರ್ಮಾನ ಮಾಡಿರುವುದು ಅವರೇ ಯೋಚನೆ ಮಾಡಬೇಕು. ಅವರಿಗೆ ಪಕ್ಷ ಎಲ್ಲವನ್ನೂ ಸ್ಥಾನಮಾನ ಕೊಟ್ಟಿದೆ.
ಈಶ್ವರಪ್ಪನವರು ನನ್ನಂತೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಯಾರಿಗೆ ಟಿಕೆಟ್ ಎಂಬುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.
ಯಾರಿಗೆ ಅಸಮಾಧಾನ ಇದೆ ಅವರನ್ನು ಕರೆದು ಮಾತಾಡುವ ಕೆಲಸ ಮಾಡುತ್ತೇವೆ


ಪಕ್ಷ ಹತ್ತಾರು ಬಾರಿ ಯೋಚನೆ ಮಾಡಿಯೇ ಅಭ್ಯರ್ಥಿಗಳ ಆಯ್ಕೆ ಮಾಡುವ ತೀರ್ಮಾನ ಮಾಡಿದೆ. ಯಾರಿಗೆ ಅಸಮಾಧಾನ ಇದೆ ಅವರನ್ನು ಕರೆದು ಮಾತಾಡುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ. ಆದರೂ ಒಂದಿಬ್ಬರು ಪಕ್ಷದಲ್ಲಿ ಇರಲ್ಲ ಅಂದರೆ ಅವರಿಗೆ ನಾವು ವಿರೋಧ ಮಾಡೋಕೆ ಹೋಗುವುದಿಲ್ಲ. ಆದರೆ ಪ್ರತಿಯೊಬ್ಬರಿಗೂ ನಾವು ಮನವೊಲಿಕೆ ಮಾಡುತ್ತೇವೆ. ಯಾವ ಕಾರಣಕ್ಕೆ ನಿಮಗೆ ಟಿಕೆಟ್ ಸಿಕ್ಕಿಲ್ಲ, ಮುಂದೆ ಸರ್ಕಾರ ಬಂದ ಮೇಲೆ ನಿಮಗೆ ಸೂಕ್ತ ಸ್ಥಾನಮಾನ ಕೊಡುವ ಬಗ್ಗೆ ಮಾತನಾಡುತ್ತೇವೆ. ಆದರೆ ಇದರ ಮೇಲೆಯೂ ಅವರ ಏನೂ ತೀರ್ಮಾನ ಮಾಡುತ್ತಾರೆ ಅವರಿಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.


ಇದೇ ವೇಳೆ ಯಡಿಯೂರಪ್ಪ ಮಕ್ಕಳಿಗೆ ಟಿಕೆಟ್ ಸಿಕ್ತು ಇತರರ ಮಕ್ಕಳಿಗೆ ಸಿಗಲಿಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಬಿಎಸ್​ವೈ, ಹೈಕಮಾಂಡ್ ಗಮನಕ್ಕೆ ತರುತ್ತೇನೆ, ಅವರು ಏನು ಹೇಳುತ್ತಾರೆ ಅದನ್ನ ನಿಮಗೆ ತಿಳಿಸ್ತೇನೆ ಎಂದು ನಕ್ಕು ಸುಮ್ಮನಾದರು.

First published: