ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ (Hiriyuru) ಬಿಜೆಪಿ ವಿಜಯ ಸಂಕಲ್ಪ ಯಾತ್ರೆ (Vijaya sankalpa Yatra) ಭರ್ಜರಿಯಾಗಿ ಸಾಗಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಭರ್ಜರಿ ರೋಡ್ ಶೋ ನಡೆಸಲಾಗಿದ್ದು, ಹಿರಿಯೂರು ಪಟ್ಟಣದಲ್ಲಿ ಮಾತನಾಡಿ ಮಾಜಿ ಸಿಎಂ ಬಿಎಸ್ವೈ, ಹಿರಿಯೂರು ಶಾಸಕಿಯಾಗಿ ಪೂರ್ಣಿಮಾ ಶ್ರೀನಿವಾಸ್ (Poornima Srinivas) ಅಭಿವೃದ್ಧಿ ಕಾರ್ಯ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರ್ಣಿಮಾ ಶ್ರಮ ದೊಡ್ಡದಿದೆ. ನೀರಾವರಿ ಯೋಜನೆ, ರೈತಪರ ಯೋಜನೆ ತಂದಿದ್ದಾರೆ. ಸರ್ಕಾರಿ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಪೂರ್ಣಿಮಾ ಅವರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
ಒಳ್ಳೆಯ ಪ್ರಚಾರ ಸಿಗುತ್ತೆ ಬಿಡಿ ಎಂದ ಬಿಎಸ್ವೈ
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ, ಹಿರಿಯೂರು ಶಾಸಕಿ ಬಿಜೆಪಿ ತೊರೆಯುವ ವದಂತಿ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಪಕ್ಕದಲ್ಲೇ ನಿಂತಿದ್ದ ಶಾಸಕಿ ಪೂರ್ಣಿಮಾ ಅವರ ಹೆಗಲ ಮೇಲೆ ಕೈ ಹಾಕಿದ ಬಿಎಸ್ವೈ ಅವರು, ಹಿರಿಯೂರು ಶಾಸಕಿ ಪೂರ್ಣಿಮಾ ನಮ್ಮ ಜೊತೆಗೆ ಇದ್ದಾರೆ ಅಲ್ವಾ ಎಂದು ನಗು ಚೆಲ್ಲಿದರು. ಬಿಎಸ್ವೈ ಮಾತಿಗೆ ಪ್ರತಿಕ್ರಿಯೆ ನೀಡಿದ ಪೂರ್ಣಿಮಾ ಅವರು, ಮಾಧ್ಯಮಗಳು ಸುಖಾಸುಮ್ಮನೆ ನನ್ನನ್ನು ತೋರಿಸುತ್ತಿದ್ದಾರೆ ಎಂದರು. ಇದಕ್ಕೆ ಬಿಎಸ್ವೈ, ಹೋಗಲಿ ಬಿಡಿ, ಆ ರೀತಿಯಾದರೂ ನಿಮಗೆ ಒಳ್ಳೆಯ ಪ್ರಚಾರ ಸಿಗುತ್ತೆ ಎಂದು ಹೇಳಿದರು.
ಇದನ್ನೂ ಓದಿ: Operation Temple Land: ಅನ್ಯರ ವಶದಲ್ಲಿದ್ದ ಸ್ಥಳವನ್ನು ಕುಕ್ಕೆ ದೇವಸ್ಥಾನಕ್ಕೆ ಒಪ್ಪಿಸಿದ ಹಿಂದೂ ಜಾಗರಣ ವೇದಿಕೆ
ಮಹಿಳಾ ಶಾಸಕಿಯಾಗಿ ಅವರು ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಕ್ರಮಗಳ ವೇಗವನ್ನು ಹೆಚ್ಚಿಸಿದ್ದಾರೆ. ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಬಿಜೆಪಿ ಎಂದರೆ ಗ್ಯಾರಂಟಿ, ಗ್ಯಾರಂಟಿ ಎಂದರೆ ಬಿಜೆಪಿ. ರಸ್ತೆ, ರೈತರ ಖಾತೆಗೆ ಹಣ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಮುಂದಿನ ಚುನಾವಣೆಯಲ್ಲೂ ಕೂಡ ಪೂರ್ಣಿಮಾ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಬಿಎಸ್ವೈ ಮನವಿ ಮಾಡಿದರು.
ಅಲ್ಲದೆ, ರಾಜ್ಯದಲ್ಲಿ ನಮ್ಮ ನಿರೀಕ್ಷೆ ಮೀರಿ ಉತ್ತಮ ವಾತಾವರಣವಿದೆ. ಚಿತ್ರದುರ್ಗ ಸಭೆಯಲ್ಲಿ 40 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ, ರಾಜ್ಯದ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ನಾವೇ ಸಿಎಂ ಎಂದು ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ. ಕೆಲವರು ಮುಂದಿನ ಸಿಎಂ ನಾವೇ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇದನ್ನೂ ಓದಿ: Hosapete: ಆನಂದ್ ಸಿಂಗ್ ವಿರುದ್ಧ ಭೂಮಿ ಪರಭಾರೆ ಆರೋಪ; ಪುತ್ರ, ಅಳಿಯ ಸೇರಿ 9 ಮಂದಿ ಹೆಸರಿಗೆ ಆಸ್ತಿ ನೋಂದಣಿ!
ಇದೇ ತಿಂಗಳು ದಾವಣಗೆರೆಗೆ ಪ್ರಧಾನಿ ಮೋದಿ ಬರಲಿದ್ದಾರೆ. ಅಂದು ಅದ್ಭುತ ಕಾರ್ಯಕ್ರಮ ಆಗಲಿದೆ. ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಸರಿಸಮ ಅಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಸಿಎಂ ಯಾರೆಂಬುದು ಪಕ್ಷ ತೀರ್ಮಾನಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ