• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Yediyurappa: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇಕೆ ಬಿಎಸ್‌ವೈ? ಗುಟ್ಟು ಬಿಚ್ಚಿಟ್ಟ ಯಡಿಯೂರಪ್ಪ!

Yediyurappa: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇಕೆ ಬಿಎಸ್‌ವೈ? ಗುಟ್ಟು ಬಿಚ್ಚಿಟ್ಟ ಯಡಿಯೂರಪ್ಪ!

ಬಿ.ಎಸ್.ಯಡಿಯೂರಪ್ಪ (ಸಂಗ್ರಹಚಿತ್ರ)

ಬಿ.ಎಸ್.ಯಡಿಯೂರಪ್ಪ (ಸಂಗ್ರಹಚಿತ್ರ)

ಅವರನ್ನು ಬಿಜೆಪಿಯಲ್ಲಿ (BJP) ಮೂಲೆಗುಂಪು ಮಾಡಿದ್ದಾರೆ, ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಕ್ಕೆ ಇಳಿಸಲಾಯಿತು ಎಂಬ ಆರೋಪ ಕೇಳಿ ಬಂದಿತ್ತು. ಲಿಂಗಾಯತ ಸಮುದಾಯದ ಕೆಲ ಸ್ವಾಮೀಜಿಗಳು, ಬಿಎಸ್ವೈ ಆಪ್ತರು ಸೇರಿದಂತೆ ಹಲವರು ಆರೋಪ ಮಾಡಿದ್ದರು. ಇದೀಗ ಈ ಎಲ್ಲಾ ಆರೋಪ, ವದಂತಿಗಳಿಗೆ ಖುದ್ದು ಬಿಎಸ್ ಯಡಿಯೂರಪ್ಪ ಅವರೇ ತೆರೆ ಎಳೆದಿದ್ದಾರೆ.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Bangalore, India
 • Share this:

ನೆಲಮಂಗಲ, ಬೆಂಗಳೂರು ಗ್ರಾಮಾಂತರ: ರಾಜ್ಯದ ಹಿರಿಯ ರಾಜಕಾರಣಿ, ಲಿಂಗಾಯತ (Lingayat) ಸಮುದಾಯದ ಪ್ರಭಾವಿ ನಾಯಕ, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಸಿಎಂ ಆಗಿಯೂ ಅನುಭವ ಗಳಿಸಿದವರು. 26 ಜುಲೈ 2019ರಂದು ಅಧಿಕಾರ ಸ್ವೀಕರಿಸಿದ ಬಿಎಸ್ ಯಡಿಯೂರಪ್ಪ, ಬಳಿಕ ಜುಲೈ 28, 2021ರಂದು ಅಧಿಕಾರದಿಂದ ಕೆಳಕ್ಕಿಳಿದರು. ಬಳಿಕ ಅವರದ್ದೇ ಸಂಪುಟದಲ್ಲಿ ಗೃಹಸಚಿವರಾಗಿದ್ದ ಬಸವರಾಜ ಬೊಮ್ಮಾಯಿ (Basavaraj Bommai) ಎಂ ಸ್ಥಾನಕ್ಕೆ ಏರಿದರು. ಆಗಿಂದ ಬಿಎಸ್‌ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ (BJP) ಮೂಲೆಗುಂಪು ಮಾಡಿದ್ದಾರೆ, ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಕ್ಕೆ ಇಳಿಸಲಾಯಿತು ಎಂಬ ಆರೋಪ ಕೇಳಿ ಬಂದಿತ್ತು. ಲಿಂಗಾಯತ ಸಮುದಾಯದ ಕೆಲ ಸ್ವಾಮೀಜಿಗಳು, ಬಿಎಸ್‌ವೈ ಆಪ್ತರು ಸೇರಿದಂತೆ ಹಲವರು ಆರೋಪ ಮಾಡಿದ್ದರು. ಇದೀಗ ಈ ಎಲ್ಲಾ ಆರೋಪ, ವದಂತಿಗಳಿಗೆ ಖುದ್ದು ಬಿಎಸ್ ಯಡಿಯೂರಪ್ಪ ಅವರೇ ತೆರೆ ಎಳೆದಿದ್ದಾರೆ.    


“ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ಮನವಿ”


ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ವೀರಶೈವ ಮಹಾಸಭಾ ಜನರಲ್ಲಿ ಕೆಲವರು ಬಿಎಸ್ ಯಡಿಯೂರಪ್ಪ ಅವರನ್ನು ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಅನ್ನೋ ವಿಚಾರಕ್ಕೆ ಸ್ಪಷ್ಟನೆ ನೀಡುತ್ತಿದ್ದೇನೆ. ಯಡಿಯೂರಪ್ಪ ಅವರನ್ನ ಅಧಿಕಾರದಿಂದ ಕೆಳಗೇಳಿಸಿದೆ ಅನ್ನುವ ಅಪಪ್ರಚಾರ ನಡೆಯುತ್ತಿದೆ. ಆದರೆ ಯಾರು ನನ್ನ ಬಗ್ಗೆ ಇಂತಹ ಒಳ್ಳೆ ಮಾತನಾಡುತ್ತಾ ಅಪಪ್ರಚಾರವನ್ನು ಮಾಡುತ್ತಿದ್ದರೋ ಅಂಥವರಿಗೆ ನನ್ನದೊಂದು ಕಿವಿಮಾತು ಹೇಳುತ್ತೇನೆ ಅಂತ ಹೇಳಿದ್ದಾರೆ.
“ನಾನು ಸ್ವಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇನೆ”


ನಾನು ತೆಗೆದುಕೊಂಡಿರುವಂತ ತೀರ್ಮಾನ ನನ್ನ ಸ್ವಂತದ್ದಾಗಿದೆ, ಸ್ವಇಚ್ಛೆಯಿಂದಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನರೇಂದ್ರ ಮೋದಿ ಆಗಲಿ, ಬೇರೆ ಯಾರೇ ಆಗಲಿ ನನಗೆ ಒತ್ತಾಯ ಮಾಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.


“ನಾನು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ”


ಮನೆಯಲ್ಲಿ ಕುಳಿತುಕೊಳ್ಳದೇ ನಾನು ರಾಜ್ಯದ ಉದ್ದಗಲಕ್ಕೂ ಹೊರಡುತ್ತಿದ್ದೇನೆ. ನನಗೆ ಜಾತಿ ಗೊತ್ತಿಲ್ಲ, ಹಿಂದೂ ಮುಸ್ಲಿಂ ಎಲ್ಲರೂ ಸಹ ಒಂದೇ ತಾಯಿ ಮಕ್ಕಳಂತೆ  ಗೌರವದಿಂದ ಬಾಳಬೇಕು ಅಂತ ಯಡಿಯೂರಪ್ಪ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ  ಹಾಗೂ ನನ್ನ ನೇತೃತ್ವದಲ್ಲಿ ರೈತರಿಗೆ ಬೇಕಾಗಿರುವ ನೀರಾವರಿ ಸೌವಲತ್ತುಗಳನ್ನು ನಮ್ಮ ಶಕ್ತಿಯ ಮೀರಿ ಮಾಡಿದ್ದೇವೆ ಅಂತ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.ೆ


ಇದನ್ನೂ ಓದಿ: MLA’s Salary: ನಮ್ಮ ಶಾಸಕರ ಸಂಬಳವೆಷ್ಟು? ಸಚಿವರ ವೇತನದ ಬಗ್ಗೆ ನಿಮಗೆಷ್ಟು ಗೊತ್ತು?


ಬೊಮ್ಮಾಯಿ ಮತ್ತೆ ಸಿಎಂ ಆಗ್ತಾರೆ –ತೇಜಸ್ವಿ ಸೂರ್ಯ


ರಾಜ್ಯ ಜನರು ಬಿಜೆಪಿ ಸರ್ಕಾರದ ಪರ ಇದ್ದು, ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಯಾದಗಿರಿ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ತೇಜಸ್ವಿ ಸೂರ್ಯ ಅವರು ಭಾಗಿಯಾಗಿದ್ದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮತ್ತೆ ತಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ನೀಡಿದ್ದ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ರಾಜ್ಯದ ಜನರು ನಮ್ಮ ಪರವಿದ್ದಾರೆ. ನಾವು ಗೆದ್ದು ಅಧಿಕಾರ ಪಡೆದುಕೊಳ್ಳುತ್ತೇವೆ, ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.


 ಬೊಮ್ಮಾಯಿ ಅವರು ಹೇಳಿಕೆ ನೂರಕ್ಕೆ ನೂರು ಸರಿ

top videos


  ಬೊಮ್ಮಾಯಿ ಅವರು ಹೇಳಿಕೆ ನೂರಕ್ಕೆ ನೂರು ಸರಿ, ಪಿಎಂ ಮೋದಿ, ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಹೀಗಾಗಿ ನಿಶ್ಚಳವಾಗಿ ಬಿಜೆಪಿ ಅಧಿಕಾರಕ್ಕೆ ಬರುವದರಲ್ಲಿ ಯಾವುದೇ ಡೌಟು ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  First published: