• Home
 • »
 • News
 • »
 • state
 • »
 • ನಾಲ್ವರು ಶಾಸಕರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೇಮಕ ಹಿಂಪಡೆದ ರಾಜ್ಯ ಸರ್ಕಾರ

ನಾಲ್ವರು ಶಾಸಕರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೇಮಕ ಹಿಂಪಡೆದ ರಾಜ್ಯ ಸರ್ಕಾರ

ಬಿ.ಎಸ್‌. ಯಡಿಯೂರಪ್ಪ.

ಬಿ.ಎಸ್‌. ಯಡಿಯೂರಪ್ಪ.

ಚಿತ್ರದುರ್ಗ ಶಾಸಕ ಜೆ ಎಚ್ ತಿಪ್ಪಾರೆಡ್ಡಿರಿಗೆ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಕಾಪು ಶಾಸಕ ಲಾಲಾಜಿ ಮೆಂಡನ್​​ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕನಕಗಿರಿ ಶಾಸಕ ಬಸವರಾಜ ದಡೇಸೂರ್​ಗೆ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ನೀಡಲಾಗಿತ್ತು.

ಮುಂದೆ ಓದಿ ...
 • Share this:

  ಬೆಂಗಳೂರು(ಜು.27): ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ. ಇದೇ ಸಂಭ್ರಮದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಈ ಬೆನ್ನಲ್ಲೇ ಏನಾಯ್ತೋ ಆಗಲೇ ಸರ್ಕಾರ 24 ಶಾಸಕರ ಪೈಕಿ ನಾಲ್ವರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವಾಪಸ್ಸು ಪಡೆದಿದೆ. ಚಿತ್ರದುರ್ಗ ಶಾಸಕ ಜೆ ಎಚ್ ತಿಪ್ಪಾರೆಡ್ಡಿರಿ, ಕಾಪು ಶಾಸಕ ಲಾಲಾಜಿ ಮೆಂಡನ್, ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ ದಡೇಸೂರ್ ಸ್ಥಾನ ವಾಪಸ್ಸು ಪಡೆದು ಆದೇಶಿಸಿದೆ. ಲಾಲಾಜಿ ಆರ್ ಮೆಂಡನ್​​​ ಅವರದ್ದು ತಾಂತ್ರಿಕ ಕಾರಣದಿಂದ ನೇಮಕ ವಾಪಸ್ಸು ಪಡೆಯಲಾಗಿದೆ.
  ಚಿತ್ರದುರ್ಗ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ತನಗೆ ನೀಡಿದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ, ನನ್ನ ನಿರೀಕ್ಷೆಯೇ ಬೇರೆ ಇತ್ತು. ಈಗ ದೇವರಾಜ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ನನಗೆ ಬೇಸರವಾಗಿದೆ ಎಂದಿದ್ದರು.


  1994ರಲ್ಲೇ ನಾನು ಗೃಹ ಮಂಡಳಿ ಅಧ್ಯಕ್ಷನಾಗಿದ್ದೆ. ಈಗ ಮತ್ತೆ ಯಾವುದೋ ಅಧ್ಯಕ್ಷ ಸ್ಥಾನ ನೀಡಿ ಅವಮಾನ ಮಾಡಿದ್ದಾರೆ. ಯಾಕೋ ರಾಜಕೀಯಕ್ಕೆ ಬಂದಿದ್ದೇ ತಪ್ಪು ಎಂಬ ಭಾವನೆ ಬಂದಿದೆ. ನನಗೆ ಹೀಗೆ ಮಾಡಿರುವುದು ನೋವಿನ ಸಂಗತಿ ಎಂದು ಬಿ.ಎಸ್​ ಯಡಿಯೂರಪ್ಪರ ವಿರುದ್ಧ ತಿಪ್ಪಾರೆಡ್ಡಿ ಸಿಡಿಮಿಡಿಕೊಂಡಿದ್ದರು.


  ಈ ಬೆನ್ನಲ್ಲೇ ಈಗ ರಾಜ್ಯ ಸರ್ಕಾರ ನಾಲ್ವರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವಾಪಸ್ಸು ಪಡೆದಿದೆ. ಇದಕ್ಕೆ ಬಿಜೆಪಿ ಶಾಸಕರ ಬಂಡಾಯವೇ ಕಾರಣ ಇರಬಹುದೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.


  ಇದನ್ನೂ ಓದಿ: ಸಚಿವಾಕಾಂಕ್ಷಿಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ: ರಾಯಚೂರು ಬಿಜೆಪಿ ಶಾಸಕರಿಂದ ಬಂಡಾಯ ಸಾಧ್ಯತೆ


  ಚಿತ್ರದುರ್ಗ ಶಾಸಕ ಜೆ ಎಚ್ ತಿಪ್ಪಾರೆಡ್ಡಿರಿಗೆ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಕಾಪು ಶಾಸಕ ಲಾಲಾಜಿ ಮೆಂಡನ್​​ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕನಕಗಿರಿ ಶಾಸಕ ಬಸವರಾಜ ದಡೇಸೂರ್​ಗೆ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ನೀಡಲಾಗಿತ್ತು.

  Published by:Ganesh Nachikethu
  First published: