ಅಧಿವೇಶನದ ಹಿನ್ನೆಲೆ ಸಂಪುಟ ಸಭೆ ಕರೆದಿರುವ ಬಿಎಸ್​ವೈ; ಪ್ರತಿಪಕ್ಷಗಳಿಗೆ ಟಾಂಗ್ ನೀಡಲು ಸಜ್ಜಾದ ಕಮಲ ಪಾಳಯ

ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ವಿಚಾರವೂ ಸಹ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

MAshok Kumar | news18-kannada
Updated:October 9, 2019, 5:29 PM IST
ಅಧಿವೇಶನದ ಹಿನ್ನೆಲೆ ಸಂಪುಟ ಸಭೆ ಕರೆದಿರುವ ಬಿಎಸ್​ವೈ; ಪ್ರತಿಪಕ್ಷಗಳಿಗೆ ಟಾಂಗ್ ನೀಡಲು ಸಜ್ಜಾದ ಕಮಲ ಪಾಳಯ
ಸಿಎಂ ಯಡಿಯೂರಪ್ಪ
MAshok Kumar | news18-kannada
Updated: October 9, 2019, 5:29 PM IST
ಬೆಂಗಳೂರು (ಅಕ್ಟೋಬರ್ 09); ನಾಳೆಯಿಂದ ವಿಧಾನಸೌಧದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಅಧಿವೇಶನದಲ್ಲಿ ವಿರೋಧ ಪಕ್ಷಗಳ ದಾಳಿಯನ್ನು ಎದುರಿಸುವ ಕುರಿತು ಚರ್ಚೆ ನಡೆಸಲು ಸಿಎಂ ಯಡಿಯೂರಪ್ಪ ಇಂದು ಸಂಜೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ  ಸಂಪುಟ ಸಭೆ ಕರೆದಿದ್ದಾರೆ.

ಈಗಾಗಲೇ ಆರಂಭವಾಗಿರುವ ಸಭೆಯಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್, ಲಕ್ಷ್ಮಣ ಸವದಿ, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಕೋಟಾ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ ಸೇರಿದಂತೆ ಎಲ್ಲಾ ಪ್ರಮುಖ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದು, ಸರ್ಕಾರದ ಕಾರ್ಯಕ್ರಮಗಳ ಮೂಲಕ ವಿರೋಧ ಪಕ್ಷಗಳಿಗೆ ತಿರುಗೇಟು ನೀಡುವ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಅಲ್ಲದೆ, ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ವಿಚಾರವೂ ಸಹ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಸಭೆಗೂ ಮುನ್ನವೇ ನಿಗಮ ಮಂಡಳಿ ಕುರಿತು ಪತ್ರಕರ್ತರ ಜೊತೆಗೆ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, “ನಿಗಮ ಮಂಡಳಿ ನೇಮಕ ವಿಚಾರದ ಕುರಿತು ಪಕ್ಷ ತೀರ್ಮಾನ ತೆಗೆದುಕೊಂಡಿದೆ. ಯಾರ್ಯಾರು ಚುನಾವಣೆಯಲ್ಲಿ ಸೋತಿದ್ದಾರೋ ಅವರಿಗೆ ಅಧಿಕಾರ ನೀಡುವ ಕುರಿತು ಮೊದಲೇ ಪಕ್ಷದಲ್ಲಿ ಯೋಚಿಸಲಾಗಿತ್ತು. ಹೀಗಾಗಿ ಸೋತ ಅಭ್ಯರ್ಥಿಗಳಿಗೆ ನಿಗಮ ಮಂಡಳಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ವಿಧಾನಮಂಡಲ ಅಧಿವೇಶನಕ್ಕೆ ದೃಶ್ಯ ಮಾಧ್ಯಮಳಿಗೆ ನಿಷೇಧ; ಪ್ರಜಾಪ್ರಭುತ್ವ ವಿರೋಧಿ ನಿಲುವಿಗೆ ನಾಂದಿ ಹಾಡಿದ ಬಿಜೆಪಿ ಸರ್ಕಾರ

First published:October 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...