ಅನರ್ಹರನ್ನು ಮಂತ್ರಿ ಮಾಡುತ್ತೇವೆಂದು ಜನರ ಬ್ರೈನ್​ವಾಶ್ ಮಾಡುತ್ತಿದ್ದಾರೆ: ಯಡಿಯೂರಪ್ಪ ವಿರುದ್ಧ ದೇವೇಗೌಡ ಕಿಡಿ

ಹಾಸನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿರುವ ಮಾಜಿ ಪ್ರಧಾನಿ ದೇವೇಗೌಡ, ಯಡಿಯೂರಪ್ಪ 15 ಅನರ್ಹ ಶಾಸಕರಿಗೂ ಮಂತ್ರಿ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ. ಸೋಲುವ ಭೀತಿಯಿಂದ ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.

news18-kannada
Updated:November 15, 2019, 10:14 AM IST
ಅನರ್ಹರನ್ನು ಮಂತ್ರಿ ಮಾಡುತ್ತೇವೆಂದು ಜನರ ಬ್ರೈನ್​ವಾಶ್ ಮಾಡುತ್ತಿದ್ದಾರೆ: ಯಡಿಯೂರಪ್ಪ ವಿರುದ್ಧ ದೇವೇಗೌಡ ಕಿಡಿ
ಬಿ.ಎಸ್. ಯಡಿಯೂರಪ್ಪ- ಹೆಚ್​.ಡಿ. ದೇವೇಗೌಡ.
  • Share this:
ಹಾಸನ (ನ. 15): ಸುಪ್ರೀಂಕೋರ್ಟ್​ನಲ್ಲಿ ಅನರ್ಹ ಶಾಕರ ಅನರ್ಹತೆಯನ್ನು ರದ್ದುಗೊಳಿಸಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ, ಅನರ್ಹ ಶಾಸಕರ ಕೃಪೆಯಿಂದಲೇ ಅಧಿಕಾರಕ್ಕೆ ಬಂದಿರುವ ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲಿ ಉರುಳುತ್ತದೋ ಎಂಬ ಭಯದಿಂದ 15 ಅನರ್ಹ ಶಾಸಕರನ್ನೂ ಮಂತ್ರಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದರಿಂದ ಚುನಾವಣೆಯ ಪಾವಿತ್ರ್ಯತೆ ಉಳಿಯುತ್ತದಾ? ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಪ್ರಶ್ನಿಸಿದ್ದಾರೆ.

ಹಾಸನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿರುವ ಮಾಜಿ ಪ್ರಧಾನಿ ದೇವೇಗೌಡ, ಯಡಿಯೂರಪ್ಪ 15 ಅನರ್ಹ ಶಾಸಕರಿಗೂ ಮಂತ್ರಿ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ. ಸೋಲುವ ಭೀತಿಯಿಂದ ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ. ಹಾಗೆ ಹೇಳಿದರೆ ಚುನಾವಣೆ ಪಾವಿತ್ರ್ಯತೆ ಉಳಿಯುತ್ತಾ? ಸುಪ್ರೀಂಕೋರ್ಟ್ ಒಂದೆಡೆ ಅನರ್ಹತೆ ಎತ್ತಿ ಹಿಡಿದಿದೆ. ಮತ್ತೊಂದೆಡೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿದೆ.

ಇನ್ನೂ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಿಲ್ಲ, ಗೆದ್ದೂ ಇಲ್ಲ. ಈಗಲೇ ಅವರನ್ನು ಮಂತ್ರಿ ಮಾಡುತ್ತೇವೆ ಎನ್ನುವುದು ಗೆಲ್ಲುವ ತಂತ್ರ.ಮಂತ್ರಿ ಮಾಡುತ್ತೇವೆಂದರೆ ಜನ ಮತ ಹಾಕುತ್ತಾರೆ ಎಂದು ಬಿಎಸ್​ವೈ ಈ ರೀತಿ ಹೇಳಿಕೆ ನೀಡಿದ್ದಾರೆ. ಜನರಿಗೆ ಆಸೆ ತೋರಿಸಿ ಗೆಲ್ಲೋ ತಂತ್ರಗಾರಿಕೆ ಇದು. ಜನರ ಬ್ರೈನ್​ವಾಶ್ ಮಾಡುವ ದುರುದ್ದೇಶದಿಂದ ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ದೆಹಲಿ ಹೈಕೋರ್ಟ್​ನಲ್ಲಿ ಡಿಕೆಶಿ ಪತ್ನಿ, ತಾಯಿ ಅರ್ಜಿ ವಿಚಾರಣೆ; ಇಂದೇ ಆದೇಶ ಪ್ರಕಟ ಸಾಧ್ಯತೆ

ಜೆಡಿಎಸ್​ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕುತ್ತೇವೆ. ಸೋಲು ಗೆಲುವು ಜನರಿಗೆ ಬಿಟ್ಟಿದ್ದು. ಜನ ಏನು ತೀರ್ಮಾನಿಸುತ್ತಾರೋ ಹೇಳೋಕಾಗಲ್ಲ. ನಾನು ಎಲ್ಲಾ ಕಡೆಯೂ ಪ್ರಚಾರ ಮಾಡುತ್ತೇನೆ ಎಂದು ಹಾಸನದಲ್ಲಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

(ವರದಿ: ಡಿಎಂಜಿ ಹಳ್ಳಿ ಅಶೋಕ್)

First published: November 15, 2019, 10:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading