ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ಯ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸುದ್ದಿ ಇದು. ಸಿದ್ದರಾಮಯ್ಯ (Siddaramaiah) ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಸ್ವತಃ ಸಿದ್ದರಾಮಯ್ಯ ಅವರೇ ಕೋಲಾರ ಮತ್ತು ವರುಣಾ (Varuna) ಎರಡೂ ಕಡೆಯಿಂದ ಸ್ಪರ್ಧೆ ಮಾಡುವ ಬಗ್ಗೆ ಘೋಷಿಸಿದ್ದೂ ಆಯ್ತು. ಇವತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಸಿಡಿಸಿರುವ ಬಾಂಬ್ ಸಿದ್ದರಾಮಯ್ಯಗೆ ತಳಮಳ ಸೃಷ್ಟಿಸುವಂತೆ ಮಾಡಿದೆ. ವರುಣಾದಲ್ಲಿ ಸಿದ್ದರಾಮಯ್ಯರನ್ನು ಕಟ್ಟಿಹಾಕಲು ಬಿಜೆಪಿ (BJP) ವ್ಯೂಹ ರೆಡಿ ಮಾಡುತ್ತಿದೆಯಂತೆ. ಸಂಘ ಪರಿವಾರನೂ (RSS) ಎಂಟ್ರಿ ಕೊಟ್ಟಿದೆಯಂತೆ. ಇದಕ್ಕೆಲ್ಲಾ ಪುಷ್ಟಿ ಕೊಟ್ಟಿದ್ದು ಯಡಿಯೂರಪ್ಪ ಕೊಟ್ಟ ಹೇಳಿಕೆ.
ಕೋಲಾರ ಬಳಿಕ ವರುಣಾದಲ್ಲೂ ಸಿದ್ದುಗೆ ದಿಗ್ಬಂಧನ!
ಯಾವಾಗ ಸಿದ್ದರಾಮಯ್ಯ ತಮಗೆ ಸೇಫ್ ಕ್ಷೇತ್ರ ಅಂತ ವರುಣಾ ಬಗ್ಗೆ ಘೋಷಿಸಿದ್ರೋ ಆಗಲೇ ಎದುರಾಳಿಗಳೂ ಕೂಡ ಕಾರ್ಯತಂತ್ರ ಆರಂಭಿಸಿದ್ದಾರೆ. ಬಿಜೆಪಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರರನ್ನು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ರಣತಂತ್ರ ಮಾಡುತ್ತಿದ್ದು, ವರುಣಾದಲ್ಲಿ ಈ ಬಾರಿ ಟಫ್ ಫೈಟ್ ಆಗುತ್ತೆ ಅಂತ ಯಡಿಯೂರಪ್ಪ ಬಾಂಬ್ ಹಾಕಿದ್ದಾರೆ.
ಇದನ್ನೂ ಓದಿ: Cheque Bounce Case: ಬಿಜೆಪಿ ಶಾಸಕ ಕುಮಾರಸ್ವಾಮಿಗೆ ಬಂಧನ ಭೀತಿ; ಜಾಮೀನು ರಹಿತ ವಾರೆಂಟ್ ಜಾರಿ
ಸಿದ್ದರಾಮಯ್ಯ ಗೆಲುವು ಅಷ್ಟು ಸುಲಭ ಅಲ್ಲ ನಾವು ಕೂಡ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತೇವೆ ಅಂದಿದ್ದಾರೆ. ಬಿಎಸ್ ಯಡಿಯೂರಪ್ಪ ಮಾತಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ಪ್ರತಿಕ್ರಿಯಿಸಿದ್ದು, ಖುದ್ದು ಬಿಎಸ್ ಅವರೇ ಸ್ಪರ್ಧಿಸಿದರೂ ನಾವು ರೆಡಿ ಅಂತ ಸವಾಲು ಎಸೆದಿದ್ದಾರೆ.
ರಾಜ್ಯದಲ್ಲಿ ಮತ್ತೆ ಬಿಜೆಪಿ ಗೆದ್ದೇ ಗೆಲ್ಲುತ್ತೆ ಅಂತ ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಸಿಎಂ ಆಗಿದ್ದಾಗ ಹಲವು ಯೋಜನೆ ನೀಡಿದ್ದೆ. ಡಬಲ್ ಇಂಜಿನ್ ಸರ್ಕಾರಕ್ಕೆ ಜನ ಆಶೀರ್ವಾದ ಮಾಡುತ್ತಿದ್ದಾರೆ. ನಿಶ್ಚಿತವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅಂತ ಹೇಳಿದ್ದರು. ಅಲ್ಲದೇ ನಿನ್ನೆಯ ಸರ್ವೇ ರಿಪೋರ್ಟ್ ಗಮನಿಸಿದ್ದೇನೆ. ಆದರೆ ರಾಜ್ಯದ ಜನರ ನಾಡಿಮಿಡಿತ ನನಗೆ ಗೊತ್ತು ಅಂತ ಬಿಎಸ್ವೈ ಹೇಳಿದ್ದರು.
ಸಿದ್ದರಾಮಯ್ಯ ಕಟ್ಟಿಹಾಕಲು ಖುದ್ದು ಸಂಘಪರಿವಾರವೇ ಅಖಾಡಕ್ಕಿಳಿದಿದೆ ಎನ್ನಲಾಗುತ್ತಿದೆ. ಸಂಘ ಪರಿವಾರದ ಬಗ್ಗೆ ಆಗಾಗ್ಗೆ ಲಘುವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯಗೆ ಹೇಗಾದರೂ ಮಾಡಿ ಪೊಲಿಟಿಕಲ್ ಪಂಚ್ ಕೊಡಲೇಬೇಕು ಅಂತ ಆರ್‌ಎಸ್‌ಎಸ್ ನಾಯಕರೂ ವಿಜಯೇಂದ್ರ ಕಣಕ್ಕಿಳಿಯುವಂತೆ ಸೂಚಿಸಿದ್ದಾರೆ. ಇದಕ್ಕೆ ಪುಷ್ಟಿ ಕೊಟ್ಟಿದ್ದು ವಿಜಯೇಂದ್ರ RSS ಕಚೇರಿಗೆ ಭೇಟಿ ಕೊಟ್ಟಿದ್ದು.
ಹೇಗಿದೆ ವರುಣಾ ಕ್ಷೇತ್ರದ ಮಿಡಿತ?
ಇನ್ನು ವರುಣಾ ಕ್ಷೇತ್ರದ ಜನರ ಮಿಡಿತವೇನು? ಒಂದು ವೇಳೆ ಸಿದ್ದರಾಮಯ್ಯಗೂ ಕ್ಷೇತ್ರಕ್ಕೂ ಇರುವ ನಂಟೇನು ಅನ್ನೋದನ್ನು ನೋಡುವುದಾದರೆ, ವರುಣಾದಲ್ಲಿ 2008ರಲ್ಲಿ 18 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದು ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದರು. ಅಲ್ಲದೆ 2013ರಲ್ಲಿ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ 2018ರಲ್ಲಿ ಮಗ ಯತೀಂದ್ರ ವರುಣಾದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು.
ಒಂದು ವೇಳೆ ವಿಜಯೇಂದ್ರ ಸ್ಪರ್ಧಿಸಿದ್ರೆ ಅಖಾಡ ಹೇಗಿರುತ್ತೆ ಅಂತ ನೋಡುವುದಾದರೆ ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ಹೆಚ್ಚಾಗಿದ್ದು, ತಮ್ಮದೇ ಸಮುದಾಯದ ವಿಜಯೇಂದ್ರ ಕೈ ಹಿಡಿಯುತ್ತಾರೆ ಅನ್ನೋ ಲೆಕ್ಕಾಚಾರವಿದೆ. ಅಲ್ಲದೆ ಕ್ಷೇತ್ರದಲ್ಲಿ ತಮ್ಮ ಸಮುದಾಯದ ನಾಯಕ ಬಿಎಸ್ ಯಡಿಯೂರಪ್ಪ ಪ್ರಭಾವ ವಿಜಯೇಂದ್ರಗೆ ವರವಾಗೋ ಸಾಧ್ಯತೆ ಇದೆ. ಜೊತೆಗೆ ಸ್ವತಹ ವಿಜಯೇಂದ್ರ ಮೇಲೂ ಕ್ಷೇತ್ರದ ಜನರ ಒಲವಿದ್ದು, ಸಿದ್ದು ವಿರೋಧಿ ಮತಗಳನ್ನ ಸೆಳೆಯೋದು ಸುಲಭ ಎನ್ನಲಾಗುತ್ತಿದೆ.
ಚುನಾವಣೆಗೆ ಈಗಾಗಲೇ ದಿನಗಣನೆ ಶುರುವಾಗಿದೆ. ರಾಜಕೀಯಪಕ್ಷಗಳು ತಮ್ಮ ತಮ್ಮ ಪಕ್ಷಗಳ ಹುರಿಯಾಗಳುಗಳ ಪಟ್ಟಿಯನ್ನ ಇನ್ನು ಕೆಲವೇ ದಿನಗಳಲ್ಲಿ ರಿಲೀಸ್ ಮಾಡ್ತಿದ್ದು, ಯಾರು ಯಾರಿಗೆ ಎದುರಾಳಿಯಾಗ್ತಾರೆ ಅನ್ನೋದು ಗೊತ್ತಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ