ಮತ್ತೆ ಸದನದಲ್ಲಿ ಯಡಿಯೂರಪ್ಪ ಯೂ ಟರ್ನ್​; ಧ್ವನಿ ತಮ್ಮದು ಎಂದು ಒಪ್ಪಿಕೊಂಡಿಲ್ಲವಂತೆ

ಕೃಷ್ಣ ಭೈರೇಗೌಡ ಮಾತಿನ ಮಧ್ಯೆಯೇ ಎದ್ದು ನಿಂತ ಬಿಎಸ್​ವೈ  ಈ ಆಡಿಯೋ ಮಾತನ್ನು ನಾನು ಒಪ್ಪಿದ್ದೇನೆ ಎಂದು ಹೇಳಬೇಡಿ. ಆ ಮಾತನ್ನು ವಾಪಸ್​ ಪಡೆಯಲಿ ಎಂದರು.  ಬಳಿಕ ಮಾತನಾಡಿದ ಕೃಷ್ಣ ಭೈರೇಗೌಡ ನನ್ನ ಮಾತನ್ನು ವಾಪಸ್​ ಪಡೆದಿರುವುದಾಗಿ ಹೇಳಿದರು

Seema.R | news18
Updated:February 11, 2019, 12:48 PM IST
ಮತ್ತೆ ಸದನದಲ್ಲಿ ಯಡಿಯೂರಪ್ಪ ಯೂ ಟರ್ನ್​; ಧ್ವನಿ ತಮ್ಮದು ಎಂದು ಒಪ್ಪಿಕೊಂಡಿಲ್ಲವಂತೆ
ಬಿಎಸ್​ ಯಡಿಯೂರಪ್ಪ
Seema.R | news18
Updated: February 11, 2019, 12:48 PM IST
ಬೆಂಗಳೂರು (ಫೆ.11): ಗುರುಮಿಠಕಲ್​ ಶಾಸಕನ ಮಗನೊಂದಿಗೆ ಮಾತನಾಡಿದ ಆಡಿಯೋ ನನ್ನದು ಎಂದು ನನ್ನದೆ ಇದಕ್ಕೆ ತಕ್ಕ ಉತ್ತರ ಸದನದಲ್ಲಿ ನೀಡುತ್ತೇನೆ ಎಂದು ಭಾನುವಾರ ಹೇಳಿಕೆ ನೀಡಿದ್ದ ಯಡಿಯೂರಪ್ಪ ಇಂದು ಸದನದಲ್ಲಿ ಮತ್ತೆ ಯೂ ಟರ್ನ್​ ಹೊಡೆದಿದ್ದಾರೆ.

ಆಡಿಯೋ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿದ್ದ ಸ್ಪೀಕರ್​ ರಮೇಶ್​ ಕುಮಾರ್​ ಆಡಿಯೋದಲ್ಲಿರುವ ಧ್ವನಿ ಯಾರದು ಎಂಬುದು ನನಗೆ ತಿಳಿದಿಲ್ಲ. ಆದರೆ, 50 ಕೋಟಿ ಹಣ ನೀಡಿರುವುದಾಗಿ ಹೇಳಿರುವುದು ದುಃಖ ತಂದಿದೆ ಎಂದರು.

ಇನ್ನು ಹಕ್ಕು ಚ್ಯುತಿ ಮಂಡನೆ ಕುರಿತು ಮಾತನಾಡಿದ ಸಚಿವ ಕೃಷ್ಣಭೈರೇಗೌಡ,  ಸ್ಪೀಕರ್ ಬಗ್ಗೆ ಸದನದ ಒಳಗೆ  ಹೊರಗಡೆ ಮಾತನಾಡಿದರೂ ಹಕ್ಕುಚ್ಯುತಿಯಾಗುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರೋರು ಮಾತನಾಡಿದ್ದರಾ ಅಥವಾ ಯಾರು  ಮಾತನಾಡಿದ್ದಾರೆ ಅನ್ನೋದು ಇತ್ಯರ್ಥ ಆಗಬೇಕು. ಈ ಕುರಿತು ನ್ಯಾಯಸಮ್ಮತವಾಗಿ ಇತ್ಯರ್ಥವಾಗಬೇಕು ಎಂದರು ಆಗ್ರಹಿಸಿದರು.

ಈ ಆಡಿಯೋದಲ್ಲಿರುವ ಧ್ವನಿ ನನ್ನದು ಎಂದು ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಧ್ವನಿ ಅವರದೆ ಎಂಬ ತಾರ್ಕಿಕ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಈ ಕುರಿತು ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಚಾರಿತ್ರ್ಯವಧೆ ಮಾಡಿದ್ರೆ ಅದು ಸಾವಿಗಿಂತ ಕ್ರೂರ; ಭಾವುಕರಾದ ಸ್ಪೀಕರ್​ ರಮೇಶ್​ ಕುಮಾರ್

ಈ ವೇಳೆ ಮಧ್ಯೆ  ಮಾತನಾಡಿದ ವಿಪಕ್ಷ ನಾಯಕ ಯಡಿಯೂರಪ್ಪ ಕೃಷ್ಣ ಭೈರೇಗೌಡರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.  ಮಾತಿನ ಮಧ್ಯೆಯೇ ಎದ್ದು ನಿಂತ ಬಿಎಸ್​ವೈ  ಈ ಆಡಿಯೋ ಮಾತನ್ನು ನಾನು ಒಪ್ಪಿದ್ದೇನೆ ಎಂದು ಹೇಳಬೇಡಿ. ಆ ಮಾತನ್ನು ವಾಪಸ್​ ಪಡೆಯಲಿ ಎಂದರು.  ಬಳಿಕ ಮಾತನಾಡಿದ ಕೃಷ್ಣ ಭೈರೇಗೌಡ ನನ್ನ ಮಾತನ್ನು ವಾಪಸ್​ ಪಡೆದಿರುವುದಾಗಿ ಹೇಳಿದರು.

ಆಡಿಯೋ ಕುರಿತು ನಿನ್ನೆ ಹುಬ್ಬಳಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿದ್ದರು. ಕುಮಾರಸ್ವಾಮಿಯೇ ಕುತಂತ್ರ ಮಾಡಿ ನನ್ನ ಬಳಿ ಶರಣಗೌಡ ಅವರನ್ನು ಕಳುಹಿಸಿದ್ದರು. ಈ ಕುರಿತು ಸದನದಲ್ಲಿ ತಕ್ಕ ಉತ್ತರ ನೀಡುವುದಾಗಿ ತಿಳಿಸಿದ್ದರು.
Loading...

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...